ಬೀದಿ ಬದಿ ವ್ಯಾಪಾರಿಗಳಿಗಾಗಿ ಸಾಮರ್ಥ್ಯ ಅಭಿವೃದ್ಧಿ ತರಬೇತಿ ಕಾರ್ಯಗಾರ

0

ಪುತ್ತೂರು: ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಡೇನಲ್ಮ್ ಯೋಜನೆಯ ಬೀದಿ ಬದಿ ವ್ಯಾಪಾರಿಗಳ ಬೆಂಬಲ ಉಪಘಟಕ ದಡಿ ಬೀದಿ ಬದಿ ವ್ಯಾಪಾರಿಗಳಿಗಾಗಿ ಸಾಮರ್ಥ್ಯ ಅಭಿವೃದ್ಧಿ ತರಬೇತಿ ಕಾರ್ಯಾಗಾರ ಜು. 12ರಂದು ಪುತ್ತೂರು ನಗರಸಭೆ ಸಮುದಾಯ ಭವನದಲ್ಲಿ ನಡೆಯಿತು.

ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ಅವರು ಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯಾಗಾರ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಬಾಲಚಂದ್ರ, ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಿ. ಅಶೋಕ ಶೆಣೈ, ಪೌರಾಯುಕ್ತ ಮಧು ಎಸ್.ಮನೋಹರ್, ಜಿಲ್ಲಾ ಡೇನಲ್ಮ್ ಅಭಿಯಾನ ವ್ಯವಸ್ಥಾಪಕ ಶ್ರೀಮತಿ ಐರಿನ್ ರೆಬೆಲ್ಲೋ, ಆರ್ಥಿಕ ಸಾಕ್ಷರತ ಕೇಂದ್ರ ಅಮೂಲ್ಯ ಇದರ ಪ್ರತಿನಿಧಿ  ಗೀತಾ ವಿಜಯ್, ಪ್ರಭಾರ ಸಿಎಓ ಉಮಾನಾಥ. ಕೆ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಅರೋಗ್ಯ, ಶುಚಿತ್ವ, ಸಂಚಾರಿ ನಿಯಮಗಳು, ಕಾನೂನು, ಕಿರು ಆಹಾರ ಘಟಕ ಆಹಾರ ಸಂಸ್ಕರಣಾ ಸಂಸ್ಥೆ/ಘಟಕಗಳ ಸಾಮರ್ಥ್ಯ ಬಲವರ್ಧನೆ, ಆಹಾರ ಸಂಸ್ಕರಣೆಯಲ್ಲಿ ಸ್ವಸಹಾಯ ಗುಂಪುಗಳು ಪಾಲ್ಗೊಳ್ಳಲು ಪ್ರೋತ್ಸಾಹ, ಸಾಂಸ್ಥಿಕ ತರಬೇತಿಗಳ ಮೂಲಕ ಸಾಮರ್ಥ್ಯ ಹಾಗೂ ಕೌಶಲ್ಯ ಅಭಿವೃದ್ಧಿ, ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಇತ್ಯಾದಿಗಳ ಬಗ್ಗೆ ಮಾಹಿತಿ ನೀಡಲಾಯಿತು. ಇದೇ ಸಂದರ್ಭದಲ್ಲಿ ಏಕ ಬಳಕೆ ಪ್ಲಾಸ್ಟಿಕ್ ನಿಷೇದದ ಬಗ್ಗೆ ತಿಳಿಸಲಾಯಿತು. ಬ್ಯಾಂಕಿಂಗ್ ಸೇವೆ, ಸಾಮಾಜಿಕ ಭದ್ರತೆ, ಅರೋಗ್ಯ ವಿಮೆ ಕುರಿತು ತಿಳುವಳಿಕೆ ನೀಡಲಾಯಿತು. ಸಿ ಆರ್ ಪಿ ಮಮತಾ.ಬಿ. ಎನ್.. ಕಾರ್ಯಕ್ರಮ ನಿರೂಪಿಸಿ. ಪ್ರಭಾರ ಸಮುದಾಯ ಸಂಘಟಕಿ ಜಯಲಕ್ಷ್ಮಿ ವಂದಿಸಿದರು.

LEAVE A REPLY

Please enter your comment!
Please enter your name here