ವಿದ್ಯಾರ್ಥಿಗಳ ಭವಿಷ್ಯದ ಅಕ್ಷಯ ಪಾತ್ರೆ ಪುತ್ತೂರಿನ ಅಕ್ಷಯ ಕಾಲೇಜು

0

ವಿದ್ಯಾರ್ಥಿಗಳಿಗೆ ತಮ್ಮ ಪರೀಕ್ಷಾ ಫಲಿತಾಂಶ ಬಂದಿತೆಂದರೆ ಖುಷಿಯೊಡನೆ ಗೊಂದಲವೂ ಮನೆಮಾಡಿರುತ್ತದೆ. ತಮ್ಮ ಮುಂದಿನ ಆಯ್ಕೆಯ ಬಗೆಗಿನ ಭಯ ಹಾಗೂ ಸೂಕ್ತವಾದ ಮಾರ್ಗದರ್ಶನದ ಕೊರತೆ ಅವರನ್ನು `ಮುಂದೇನು?’ ಎಂಬ ಚಿಂತೆಗೀಡು ಮಾಡಿರುತ್ತದೆ. ನೂರಾರು ವೃತ್ತಿಪರ ಕೋರ್ಸ್‌ಗಳನ್ನು ಆಯ್ಕೆ ಮಾಡುವ ಸವಾಲು ವಿದ್ಯಾರ್ಥಿಗಳು ಹಾಗೂ ಅವರ ಪೋಷಕರ ಮುಂದಿದೆ. ಯಾವ ಕೋರ್ಸನ್ನು ಆಯ್ದು ಕೊಳ್ಳಬಹುದು.?, ಯಾವ ಕಾಲೇಜಿಗೆ ಸೇರಬೇಕು.? ಹೀಗೆ ಹತ್ತಾರು ಪ್ರಶ್ನೆಗಳು ಉದ್ಭವಿಸುತ್ತವೆ.

ಹಿಂದೊಂದು ಕಾಲವಿತ್ತು, ಉತ್ತಮ ಶಿಕ್ಷಣ ಪಡೆಯಬೇಕಾದರೆ ವಿದೇಶಕ್ಕೋ, ಮಹಾನಗರಕ್ಕೋ ಹೋಗಬೇಕಿತ್ತು. ಆದರೆ ಈಗ ಗ್ರಾಮೀಣ ಭಾಗದಲ್ಲೇ ಗುಣಮಟ್ಟದ ಜತೆಗೆ ಭವಿಷ್ಯದಲ್ಲಿ ಉದ್ಯೋಗ-ಉದ್ಯಮಕ್ಕೆ ಪೂರಕವಾದ ಶಿಕ್ಷಣ ದೊರಕುತ್ತಿದ್ದು, ಪುತ್ತೂರಿನ ಅಕ್ಷಯ ಕಾಲೇಜು ಗುಣಮಟ್ಟದ ಶಿಕ್ಷಣದೊಂದಿಗೆ ವೃತ್ತಿಪರ ಕೋರ್ಸ್‌ಗಳನ್ನು ನೀಡುತ್ತಿದೆ. ನಗರಭಾಗದಿಂದ ಅನತಿ ದೂರದಲ್ಲಿ ಕಲಿಕೆಗೆ ಬೇಕಾದ ಸುಂದರ ವಾತಾವರಣವಿರುವ ಸಂಪ್ಯದಲ್ಲಿರುವ ಅಕ್ಷಯ ಕಾಲೇಜು ಎಲ್ಲಾ ಮೂಲ ಸೌಕರ್ಯಗಳೊಂದಿಗೆ ಸುಸಜ್ಜಿತ ವಿದ್ಯಾಸಂಸ್ಥೆಯಾಗಿ ಬೆಳೆಯುತ್ತಿದೆ. ಸಮರ್ಥ ನಾಯಕತ್ವದ ಸಮಾಜ ಸೇವಕ ಉದ್ಯಮಿ ಜಯಂತ ನಡುಬೈಲುರವರ ನೇತೃತ್ವದ ಆಡಳಿತ ಮಂಡಳಿ ಗುಣಮಟ್ಟದ ಶಿಕ್ಷಣದಲ್ಲಿ ರಾಜಿ ಮಾಡಿಕೊಳ್ಳದೆ ವಿದ್ಯಾರ್ಥಿಗಳು ಭವಿಷ್ಯದ ಜ್ಞಾನವನ್ನು ಧಾರೆ ಎರೆಯುತ್ತಿದೆ.

ಸಾಮಾನ್ಯವಾಗಿ ಹಿಂದಿನ ವರ್ಷಗಳಲ್ಲಿ ಪಿಯುಸಿಯಾದ ಬಳಿಕ ಬಿ.ಎ., ಬಿ.ಕಾಂ., ಬಿ.ಎಸ್ಸಿ., ಬಿ.ಬಿ.ಎ., ಬಿ.ಸಿ.ಎ., ಇಂಜಿನಿಯರಿಂಗ್, ಮೆಡಿಕಲ್ ಮೊದಲಾದ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದಿತ್ತು. ಆದರೆ ಈಗ ಕಾಲ ಬದಲಾಗಿದೆ, ವೃತ್ತಿಪರ ಶಿಕ್ಷಣಗಳನ್ನು ಆಯ್ಕೆ ಮಾಡಿಕೊಂಡವನೇ ಭವಿಷ್ಯದಲ್ಲಿ ಉತ್ತಮ ಜೀವನ ಸಾಗಿಸುತ್ತಾನೆ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ವಿದ್ಯಾರ್ಥಿಗಳು ಹಾಗೂ ಪೋಷಕರ ಎಲ್ಲಾ ಗೊಂದಲಗಳಿಗೂ ಪುತ್ತೂರಿನ ಅಕ್ಷಯ ಕಾಲೇಜು ಉತ್ತರವನ್ನು ನೀಡುವ ಕಾರ್ಯ ಮಾಡುತ್ತಿದೆ. ಹೀಗಾಗಿ ಯಾವುದೋ ಕೋರ್ಸನ್ನು ಪಡೆದು ಭವಿಷ್ಯದಲ್ಲಿ ಸರಿಯಾದ ಉದ್ಯೋಗವಿಲ್ಲದೆ ಕೊರಗುವ ಬದಲು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಒಮ್ಮೆ ಅಕ್ಷಯ ಕಾಲೇಜಿಗೆ ಭೇಟಿ ಕೊಟ್ಟು ಕೋರ್ಸ್‌ಗಳ ಕುರಿತು ಮಾಹಿತಿ ಪಡೆದುಕೊಂಡರೆ ತಮ್ಮ ಎಲ್ಲಾ ಗೊಂದಲಗಳಿಗೂ ತೆರೆ ಬೀಳಲಿದೆ.

ಉದ್ಯೋಗ ಪೂರಕ ಕೋರ್ಸ್‌ಗಳು:
ಈ ಸಾಲಿನಲ್ಲಿ ಬಿ.ಕಾಂ.ನ ಏವಿಯೇಶನ್ ಆಂಡ್ ಹಾಸ್ಪಿಟಾಲಿಟಿ ಮ್ಯಾನೇಜ್‌ಮೆಂಟ್, ಫ್ಯಾಶನ್ ಡಿಸೈನಿಂಗ್ ಮತ್ತು ಇಂಟೀರಿಯರ್ ಡಿಸೈನಿಂಗ್ ಕೋರ್ಸುಗಳು ಇಂದು ಜಾಗತಿಕವಾಗಿ ಹೆಚ್ಚಿನ ಅವಕಾಶವನ್ನು ಕಲ್ಪಿಸಿ ಎಲ್ಲರ ಗಮನ ಸೆಳೆಯುತ್ತಿದೆ. ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಹೋಲಿಸಿದರೆ ಈ ಕುರಿತು ಗ್ರಾಮೀಣ ವಿದ್ಯಾರ್ಥಿಗಳಿಗೆ ಮಾಹಿತಿಯ ಕೊರತೆಯೂ ಕಂಡುಬರುತ್ತಿದೆ. ಪುತ್ತೂರು, ಸುಳ್ಯ, ಬೆಳ್ತಂಗಡಿ, ಬಂಟ್ವಾಳ, ಕೊಡಗು ಹೀಗೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಿ.ಕಾಂ ಜತೆಗೆ ಏವಿಯೇಶನ್ ಆಂಡ್ ಹಾಸ್ಪಿಟಾಲಿಟಿ ಮ್ಯಾನೇಜ್‌ಮೆಂಟ್ ಕೋರ್ಸ್ ಹೊಂದಿರುವ ಮೊದಲ ಮತ್ತು ಏಕೈಕ ಕಾಲೇಜು ಎಂಬ ಹೆಗ್ಗಳಿಕೆಯನ್ನೂ ಅಕ್ಷಯ ಕಾಲೇಜು ಪಡೆದುಕೊಂಡಿದೆ. ಜಿಲ್ಲೆಯಲ್ಲಿಯೇ ಗುಣಮಟ್ಟ ಆಧಾರಿತ ಶಿಕ್ಷಣ ನೀಡುವ ಸಂಸ್ಥೆ ಇದಾಗಿದ್ದು ಜಿಲ್ಲೆ, ಹೊರಜಿಲ್ಲೆ, ಹೊರ ರಾಜ್ಯಗಳಿಂದ ನೂರಾರು ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿರುವುದು ಇದಕ್ಕೆ ನಿದರ್ಶನ.

ವೃತ್ತಿ ಆಧಾರಿತ ಕೋರ್ಸ್:
ಮಂಗಳೂರು ವಿವಿಯಿಂದ ಬಿಕಾಂ ಪದವಿಯೊಡನೆ ಏವಿಯೇಶನ್ ಮತ್ತು ಹಾಸ್ಪಿಟಾಲಿಟಿ ಮ್ಯಾನೇಜ್ಮೆಂಟ್ ಎಂಬ ವೃತ್ತಿ ಆಧಾರಿತ ಕೋರ್ಸ್‌ನ್ನು ಪ್ರಥಮ ಬಾರಿಗೆ ಪುತ್ತೂರಿನಲ್ಲಿ ಅಕ್ಷಯ ಕಾಲೇಜು ಪ್ರಾರಂಭಿಸಿರುತ್ತದೆ. ಬಿಕಾಂ ಪದವಿ ಸೇರ ಬಯಸುವ ವಿದ್ಯಾರ್ಥಿಗಳಿಗೆ ಈ ಕೋರ್ಸ್ ಹೊಸ ಭರವಸೆಯನ್ನು ಮೂಡಿಸಿದೆ. ಫ್ಯಾಶನ್ ಡಿಸೈನಿಂಗ್ ಕೋರ್ಸ್‌ಗಳು ಹೆಚ್ಚು ಆಕರ್ಷಣೀಯವಾಗಿದ್ದು, ಶೇ.100 ಉದ್ಯೋಗದ ಭರವಸೆಯನ್ನು ಒದಗಿಸುತ್ತದೆ. ಆದುದರಿಂದ ಇದಕ್ಕೆ ಹೆಚ್ಚು ವಿದ್ಯಾರ್ಥಿಗಳು ಇದರತ್ತ ಮಾರು ಹೋಗುತ್ತಿದ್ದಾರೆ. ಫ್ಯಾಶನ್ ಮತ್ತು ನಮ್ಮ ಜೀವನ ಶೈಲಿ ಒಂದೇ ನಾಣ್ಯದ ಎರಡು ಮುಖಗಳಂತಿದ್ದು, ಫ್ಯಾಶನ್ ಡಿಸೈನರ್‌ಗಳಿಗೆ ವಿಫುಲ ಅವಕಾಶಗಳಿವೆ. ಮಾಡೆಲಿಂಗ್, ಸಿನಿಮಾರಂಗ, ವಸ್ತ್ರವಿನ್ಯಾಸ, ರೀಟೇಲ್ ಬಯರ್, ರಿಟೇಲ್ ಮ್ಯಾನೇಜರ್, ಮರ್ಚಂಡೈಸರ್‌ಗಳಿಗೆ ದೇಶ ವಿದೇಶಗಳ ಕಂಪನಿಗಳಲ್ಲಿ ತಿಂಗಳಿಗೆ ಲಕ್ಷಕ್ಕಿಂತಲೂ ಅಧಿಕ ಸಂಬಳದ ಉದ್ಯೋಗಾವಕಾಶಗಳಿದೆ.

ಪ್ರಸ್ತುತ ಇಂಟೀರಿಯರ್ ಡಿಸೈನಿಂಗ್ ಅತ್ಯಂತ ವೇಗವಾಗಿ ತನ್ನದೇ ಛಾಪು ಮೂಡಿಸುತ್ತಿರುವ ಕ್ಷೇತ್ರಗಳಲ್ಲಿ ಒಂದಾಗಿದೆ. ವಿದ್ಯಾರ್ಥಿಗಳು ಈ ವೈವಿಧ್ಯಮಯ ಕೋರ್ಸಿನ ಮೂಲಕ ಹೊಸ ವೃತ್ತಿ ಜೀವನದ ಅವಕಾಶಗಳನ್ನು ಗಳಿಸುತ್ತಿದ್ದಾರೆ. ಇಂದಿನ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಳಾಂಗಣ ವಿನ್ಯಾಸಗಾರರಿಗೆ ಹಲವು ಉದ್ಯೋಗಗಳಿದ್ದು, ವಾಸ್ತುಶಿಲ್ಪ ಸಂಸ್ಥೆಗಳು,ಪೀಠೋಪಕರಣ ಕಂಪನಿಗಳು, ನಿರ್ಮಾಣ ಸಂಸ್ಥೆಗಳು,ಹೋಟೆಲ್, ರೆಸಾರ್ಟ್, ಕಾರ್ಪೊರೇಟ್ ವಲಯ, ಸ್ವಯಂ ಉದ್ಯೋಗ ಹೀಗೆ ಬಹುತೇಕ ಎಲ್ಲ ಕ್ಷೇತ್ರ ಮತ್ತು ಉದ್ಯೋಗ ಕ್ಷೇತ್ರಗಳಿಗೆ ಪ್ರತಿಭಾನ್ವಿತ ಇಂಟೀರಿಯರ್ ಡಿಸೈನರ್‌ಗಳ ಅವಶ್ಯಕತೆಯಿದೆ.

ಉತ್ತಮ ಭವಿಷ್ಯಕ್ಕೆ ಅಕ್ಷಯ ಕಾಲೇಜು:
ಭವಿಷ್ಯತ್ತಿನ ಸುಂದರ ಬದುಕಿಗೆ ವಿದ್ಯಾರ್ಥಿಗಳಿಗೆ ಪುತ್ತೂರಿನ ಅಕ್ಷಯ ಕಾಲೇಜು ಅತ್ಯುತ್ತಮ ಆಯ್ಕೆಯಾಗಿದ್ದು, ಬಿ.ಕಾಂ.(ಏವಿಯೇಶನ್ ಆಂಡ್ ಹಾಸ್ಪಿಟಾಲಿಟಿ ಮ್ಯಾನೇಜ್ಮೆಂಟ್) ಪದವಿಯ ವಿದ್ಯಾರ್ಥಿಗಳಿಗೆ ಬ್ಯಾಂಕಿಂಗ್ ಹಾಗೂ ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ, ಕನ್ನಡ ಮಾಧ್ಯಮದಿಂದ ಬಂದ ವಿದ್ಯಾರ್ಥಿಗಳಿಗೆ ಶುಲ್ಕ ರಹಿತ ಸ್ಪೋಕನ್ ಇಂಗ್ಲೀಷ್ ತರಗತಿಗಳನ್ನೂ ನೀಡುತ್ತಿದೆ. ವಿಶ್ವವಿದ್ಯಾನಿಲಯದಿಂದ ಹಲವು ಪ್ರಥಮ ರಾಂಕ್‌ಗಳನ್ನು ಪಡೆದಿರುವ ಅಕ್ಷಯ (ಗ್ಲೋರಿಯಾ) ಕಾಲೇಜು ಶೈಕ್ಷಣಿಕ ಬದಲಾವಣೆಗೆ ಅನುಸಾರವಾಗಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೂ ವೃತ್ತಿಪರ ಶಿಕ್ಷಣ ಪಡೆಯಲು ಅವಕಾಶವಾಗುವಂತೆ ಮಂಗಳೂರು ವಿಶ್ವವಿದ್ಯಾನಿಲಯದ ಸಂಯೋಜನೆಯೊಂದಿಗೆ ಪ್ರಾರಂಭವಾದ ಪುತ್ತೂರಿನ ಪ್ರಪ್ರಥಮ ಡಿಸೈನಿಂಗ್ ಕಾಲೇಜಾಗಿದ್ದು, ನುರಿತ ಶಿಕ್ಷಕ ವೃಂದದೊಡನೆ ಪುತ್ತೂರಿನ ಸಂಪ್ಯದಲ್ಲಿ ಅತ್ಯಂತ ಆಕರ್ಷಕ ಮತ್ತು ಸುಸಜ್ಜಿತ ಕ್ಯಾಂಪಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ.

ಹಲವು ಪ್ರಥಮಗಳ ಸರದಾರ ಅಕ್ಷಯ ಕಾಲೇಜು:
ಪುತ್ತೂರು ನಗರ ವ್ಯಾಪ್ತಿಯಲ್ಲಿ ಎಲ್ಲಾ ಸೌಕರ್ಯವಿರುವ ಅಕ್ಷಯ ಕಾಲೇಜಿನಲ್ಲಿ ವಿಶಾಲವಾದ ಕ್ಲಾಸ್‌ರೂಮ್, ಉತ್ತಮ ಕ್ಯಾಂಪಸ್ ಅಕ್ಷಯ ಸಂಸ್ಥೆಯ ವಿಶೇಷತೆಗಳಲ್ಲೊಂದಾಗಿದೆ. ದೂರದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪ್ರತ್ಯೇಕ ಹಾಸ್ಟೆಲ್ ಸೌಲಭ್ಯವೂ ಇರುತ್ತದೆ. ವಿಶ್ವವಿದ್ಯಾಲಯದಿಂದ ಸತತ ರ್‍ಯಾಂಕ್ ಪಡೆದುಕೊಂಡ ಪುತ್ತೂರಿನ ಪ್ರಥಮ ಡಿಸೈನ್ ಕಾಲೇಜು ಎಂಬ ಹೆಗ್ಗಳಿಕೆಯೂ ಇರುತ್ತದೆ. ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ವಿಶೇಷ ತರಬೇತಿಯನ್ನೂ ಈ ಸಂಸ್ಥೆ ನೀಡುತ್ತಿದೆ. ಅನುಭವವಿರುವ ಅಧ್ಯಾಪಕ ವೃಂದ ಸಂಸ್ಥೆಯಲ್ಲಿ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ದುಡಿಯುತ್ತಿದ್ದು, ಪಠ್ಯದ ಯಾವುದೇ ಗೊಂದಲಗಳಿಗೂ ಸಮರ್ಥ ಉತ್ತರ ನೀಡುವ ಸಾಮರ್ಥ್ಯವನ್ನೂ ಮೈಗೂಡಿಸಿಕೊಂಡವರಾಗಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಕೌಶಲ್ಯಭರಿತ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಇಲ್ಲಿ ಇತರೆ ಸರ್ಟಿಫಿಕೇಟ್ ಕೋರ್ಸ್‌ಗಳನ್ನು ನೀಡಲಾಗುತ್ತಿದೆ.

ಸೃಜನಶೀಲ ಚಟುವಟಿಕೆಗೆ ಪ್ರೋತ್ಸಾಹ:
ಶೇ.೯೫ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಹಾಗೆಯೇ ಡಿಸ್ಟಿಂಕ್ಷನ್ ಅಂಕ ಗಳಿಸಿದ ಮತ್ತು ಸಾಂಸ್ಕೃತಿಕ, ಕ್ರೀಡಾಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಶುಲ್ಕದಲ್ಲಿ ವಿನಾಯತಿ, ಸ್ಕಾಲರ್‌ಶಿಪ್ ನೀಡುವ ಮೂಲಕ ಇಲ್ಲಿ ಪದವಿ ಗಳಿಸಿದ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯವನ್ನು ರೂಪಿಸಲು ಅವಕಾಶ ನೀಡಲಾಗುತ್ತಿದೆ. ಬಡ ಹಾಗೂ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಉಚಿತ ಸೀಟುಗಳು, ಶೈಕ್ಷಣಿಕ ಸಾಲ ಸೌಲಭ್ಯವನ್ನೂ ದೊರಕಿಸಿಕೊಡಲಾಗುತ್ತಿದೆ. ಕ್ರೀಡಾ ಚಟುವಟಿಕೆಗೆ ಇಲ್ಲಿ ನಿರಂತರ ಪ್ರೋತ್ಸಾಹ ನೀಡಲಾಗುತ್ತಿದ್ದು, ಯೋಗ ಸಾಧಕಿ ಮತ್ತು ಎನ್‌ಎಸ್‌ಎಸ್ ನಾಯಕಿ ಪ್ರಣಮ್ಯ ಅವರು ಅಂತರಾಷ್ಟ್ರೀಯ ಮಟ್ಟದಲ್ಲಿ ಚಾಂಪಿಯನ್ ಆಗಿದ್ದಲ್ಲದೆ, ವರ್ಲ್ಡ್ ರೆಕಾರ್ಡ್ ಸಾಧನೆಯ ಮೂಲಕ ಸಂಸ್ಥೆಗೆ ಕೀರ್ತಿ ತಂದಿದ್ದಾರೆ. ಹಾಗೆಯೇ ಪ್ರತೀಕ್ಷಾ ರೈ ಅವರು ರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದು, ದೇವಿಕಾ ರಾಜ್ಯ ಡಾಡ್ಜ್ ಬಾಲ್ ತಂಡಕ್ಕೆ ಆಯ್ಕೆಯಾಗಿರುವುದು ಕಾಲೇಜಿನ ಹೆಗ್ಗಳಿಕೆಯಾಗಿದೆ. ಅಕ್ಷಯದ ವಿದ್ಯಾರ್ಥಿಗಳು ಕರಾಟೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವುದು ಕೂಡ ಇಲ್ಲಿನ ವಿಶೇಷತೆಯಾಗಿದೆ. ಎನ್‌ಎಸ್‌ಎಸ್, ಸ್ಪೋರ್ಟ್, ಸಾಂಸ್ಕೃತಿಕ ಚಟುವಟಿಕೆಗಳು, ವಿವಿಧ ಸಂಸ್ಥೆ ಹಾಗೂ ಇಲಾಖೆಗಳ ಸಹಭಾಗಿತ್ವದಲ್ಲಿ ರಾಷ್ಟ್ರೀಯತೆ ಕುರಿತು ಕಾರ್ಯಕ್ರಮ ನಿರಂತರವಾಗಿ ನಡೆಯುತ್ತಲೇ ಇರುತ್ತದೆ.

ಹೆಸರಲ್ಲಿಯೇ ಇದೆ `ಜಯಂತಣ್ಣ:
ಆಡು ಮುಟ್ಟದ ಸೊಪ್ಪಿಲ್ಲ, ಜಯಂತ್ ನಡುಬೈಲುರವರು ಹೆಜ್ಜೆಯನ್ನಿಟ್ಟ ಕ್ಷೇತ್ರವಿಲ್ಲ. ಹೌದು, ಸಾಮಾಜಿಕ, ಉದ್ಯಮ, ಧಾರ್ಮಿಕ ಮುಂತಾದ ಕ್ಷೇತ್ರಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಇದೀಗ ಶೈಕ್ಷಣಿಕ ಕ್ಷೇತ್ರದತ್ತ ಹೆಜ್ಜೆಯಿರಿಸಿ ಅದರಲ್ಲಿ ಯಶಸ್ವಿ ಕಾಣುತ್ತಿದ್ದಾರೆ. ಆದ್ದರಿಂದ ಅವರ ಹೆಸರಲ್ಲಿಯೇ ಇದೆ `ಜಯ’. ಕೊಡುಗೈ ದಾನಿ, ಸಮಾಜ ಸೇವಕರಾಗಿರುವ ಜಯಂತ್ ನಡುಬೈಲುರವರ ಸಮರ್ಥ ನಾಯಕತ್ವ ಹಾಗೂ ಮಾರ್ಗದರ್ಶನದೊಂದಿಗೆ ಮುನ್ನಡೆಯುತ್ತಿರುವ ಅಕ್ಷಯ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಸಂಸ್ಥೆಯು ತನ್ನ ಸ್ವಂತ ಕ್ಯಾಂಪಸ್‌ನಲ್ಲಿ ಈ ಎಲ್ಲಾ ಕೋರ್ಸ್‌ಗಳನ್ನು ವಿದ್ಯಾರ್ಥಿಗಳಿಗೆ ಬೋಧಿಸುತ್ತಿದೆ. ತಾನು ಕೈಯಾಡಿಸಿದ ಯಾವುದೇ ಕ್ಷೇತ್ರವಿರಲಿ ಅದನ್ನು ಸಮರ್ಥವಾಗಿ ಗುರಿ ತಲುಪಿಸುವ ಛಲದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಜಯಂತಣ್ಣ ಉದ್ಯಮ ಕ್ಷೇತ್ರದ ಯಶಸ್ಸಿನ ಬಳಿಕ ಶಿಕ್ಷಣ ಕ್ಷೇತ್ರಕ್ಕೆ ಕಾಲಿರಿಸಿದವರು. ಆದರೆ ಶಿಕ್ಷಣ ಕ್ಷೇತ್ರವು ಯಾವತ್ತೂ ಉದ್ಯಮವಾಗಬಾರದು ಎಂಬ ಇರಾದೆಯೊಂದಿಗೆ ಗುಣಮಟ್ಟಕ್ಕೆ ರಾಜಿಯಿಲ್ಲದ ರೀತಿಯಲ್ಲಿ ಮಕ್ಕಳ ಭವಿಷ್ಯಕ್ಕೆ ಭದ್ರ ಬುನಾದಿಯನ್ನು ಹಾಕುವ ಕಾರ್ಯ ಮಾಡುತ್ತಿದ್ದಾರೆ.

 

ಜಾಗತೀಕರಣ, ಉದಾರೀಕರಣ, ಖಾಸಗೀಕರಣ ಹಾಗೂ ಆಧುನೀಕರಣದ ಪ್ರಭಾವದಿಂದ ವಿಶ್ವದಾದ್ಯಂತ ಸಮರ್ಪಕವಾಗಿ ಎದುರಿಸಲು ವೃತ್ತಿಪರ ಶಿಕ್ಷಣ ಅಗತ್ಯವಾಗಿದೆ. ಅದರ ಕೊರತೆ ಗ್ರಾಮೀಣ ಪ್ರದೇಶದಲ್ಲಿ ಇರುವುದನ್ನು ಮನಗಂಡು, ಈ ಕೊರತೆಯನ್ನು ನೀಗಿಸುವುದಲ್ಲಿ ಪುಟ್ಟ ಹೆಜ್ಜೆಯನ್ನಿಟ್ಟಿದೆ. ವಿದ್ಯಾರ್ಥಿಗಳಲ್ಲಿ ಸಾಧಿಸಬೇಕೆನ್ನುವ ಆತ್ಮವಿಶ್ವಾಸ ಹಾಗೂ ಛಲವಿರಬೇಕು. ಸ್ವಾವಲಂಭಿಯಾಗಿ ಬದುಕಬಲ್ಲೆ ಎನ್ನುವ ಆಶಯದೊಂದಿಗೆ ಅಂಥ ವಿದ್ಯಾರ್ಥಿಗಳನ್ನು ಸ್ವತಂತ್ರ ವ್ಯಕ್ತಿಯನ್ನಾಗಿ ಸಮಾಜದಲ್ಲಿ ಬಾಳಿ ಬದುಕಲು ರೂಪಿಸಲು ಸಾಧ್ಯವಿದೆ ಎಂಬುದೇ ಈ ಸಂಸ್ಥೆಯ ಮುಖ್ಯ ಉದ್ಧೇಶವಾಗಿದೆ.ಜಯಂತ್ ನಡುಬೈಲು, ಚೇರ್‌ಮ್ಯಾನ್, ಅಕ್ಷಯ ಕಾಲೇಜು, ಪುತ್ತೂರು

 

ಲಭ್ಯವಿರುವ ಕೋರ್ಸ್‌ಗಳ ವಿವರ
*ಬಿ.ಕಾಂ.(ಏವಿಯೇಶನ್ ಆಂಡ್ ಹಾಸ್ಪಿಟಾಲಿಟಿ ಮ್ಯಾನೇಜ್ಮೆಂಟ್)
(3/4ವರ್ಷ) ಅರ್ಹತೆ: ದ್ವಿತೀಯ ಪಿಯುಸಿ(ಆರ್ಟ್ಸ್/ಕಾಮರ್ಸ್/ಸಯನ್ಸ್ ಉತ್ತೀರ್ಣ)
*ಬಿಎಸ್ಸಿ ಫ್ಯಾಶನ್ ಡಿಸೈನ್
(3/4ವರ್ಷ) ಅರ್ಹತೆ: ದ್ವಿತೀಯ ಪಿಯುಸಿ(ಆರ್ಟ್ಸ್/ಕಾಮರ್ಸ್/ಸಯನ್ಸ್ ಉತ್ತೀರ್ಣ)
*ಬಿಎಸ್ಸಿ ಇಂಟೀರಿಯರ್ ಡಿಸೈನ್
(3/4ವರ್ಷ) ಅರ್ಹತೆ: ದ್ವಿತೀಯ ಪಿಯುಸಿ(ಆರ್ಟ್ಸ್/ಕಾಮರ್ಸ್/ಸಯನ್ಸ್ ಉತ್ತೀರ್ಣ)
*ಡಿಪ್ಲೋಮಾ ಫ್ಯಾಶನ್ ಡಿಸೈನ್(2 ವರ್ಷ)
*ಡಿಪ್ಲೊಮ ಇಂಟೀರಿಯರ್ ಡಿಸೈನ್(2 ವರ್ಷ)

ಸರ್ಟಿಪಿಕೇಟ್ ಕೋರ್ಸ್
(3/6/12 month)
Fashion show and modeling
Make up and hairstyling
Tailoring
CAD
Botique management
Diploma in Aviation
Event management
DCA with Tally- GST
PGDCA with Tally- GST
E – OFFICE
Web design
Graphic Design
Animation
WebDevelopment

ಹೆಚ್ಚಿನ ಮಾಹಿತಿಗಾಗಿ:
ಪ್ರಾಂಶುಪಾಲರು: 9141160704, ಆಡಳಿತಾಽಕಾರಿ: 80883 81678, ಕಚೇರಿ: 08251-200030, 8050108510
www.akshayacollegeputtur.com <http://www.akshayacollegeputtur.com/>
ವಿಳಾಸ: ಅಕ್ಷಯ ಕಾಲೇಜು, ಆರ್ಯಾಪು, ಸಂಪ್ಯ, ಪುತ್ತೂರು, ದ.ಕ. 574210

LEAVE A REPLY

Please enter your comment!
Please enter your name here