ಸರ್ವೆ ಬಿಲ್ಲವ ಸಂಘ ಗ್ರಾಮ ಸಮಿತಿಯ ಮಹಾಸಭೆ-ಉಚಿತ ಪುಸ್ತಕ ವಿತರಣೆ

0
  • ಸಾಧಕ ವಿದ್ಯಾರ್ಥಿಗಳಿಗೆ ಪುರಸ್ಕಾರ, ಕೃಷಿ ಕ್ಷೇತ್ರದ ಸಾಧಕರಿಬ್ಬರಿಗೆ ಸನ್ಮಾನ

ಪುತ್ತೂರು: ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಪುತ್ತೂರು ಇದರ ಸರ್ವೆ ಗ್ರಾಮ ಸಮಿತಿಯ ವಾರ್ಷಿಕ ಮಹಾಸಭೆ ಸರ್ವೆ ಎಸ್.ಜಿ.ಎಂ ಪ್ರೌಢಶಾಲೆ ಸಭಾಂಗಣದಲ್ಲಿ ನಡೆಯಿತು. ಗ್ರಾಮ ಸಮಿತಿ ಅಧ್ಯಕ್ಷ ಕಮಲೇಶ್ ಸರ್ವೆದೋಳಗುತ್ತು ಅಧ್ಯಕ್ಷತೆ ವಹಿಸಿದ್ದರು.


ಬಿಲ್ಲವ ಸಂಘ ಪುತ್ತೂರು ಇದರ ಉಪಾಧ್ಯಕ್ಷೆ ಚಂದ್ರಕಲಾ ಮುಕ್ವೆ ಉದ್ಘಾಟಿಸಿದರು. ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ಅವರು ಪಿಯುಸಿ ವಿಭಾಗದಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ನಿಶ್ಮಿತ್ ಹಾಗೂ ಅಪೂರ್ವ, ಎಸ್‌ಎಸ್‌ಎಲ್‌ಸಿಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ಪ್ರತೀಕ್ಷಾ, ಸಂಜನಾ ಎಸ್ ಡಿ, ವರ್ಷಿತ್ ಕೈಪಂಗಳದೋಳ, ಸ್ನೇಹ ಆಳ್‌ಮಜಲು, ಅವರಿಗೆ ವಿದ್ಯಾರ್ಥಿ ವೇತನ ನೀಡಿ ಗೌರವಿಸಿದರು.

ಕರ್ನಾಟಕ ರಾಜ್ಯ ಸರಕಾರದ ಕೃಷಿ ಇಲಾಖೆಯಿಂದ ಜಿಲ್ಲಾ ಮಟ್ಟದ ಅತ್ಯುತ್ತಮ ಕೃಷಿಕ ಪ್ರಶಸ್ತಿ ಪಡೆದ ನಾಗೇಶ್ ಪಟ್ಟೆಮಜಲು ಹಾಗೂ ತಾಲೂಕು ಮಟ್ಟದ ಅತ್ಯುತ್ತಮ ಕೃಷಿಕ ಪ್ರಶಸ್ತಿ ಪಡೆದ ಜಯರಾಜ್ ಸುವರ್ಣ ಸೊರಕೆ ಅವರನ್ನು ಈ ಸಂಧರ್ಭದಲ್ಲಿ ಸನ್ಮಾನಿಸಲಾಯಿತು. ಕು ಗ್ರೀಷ್ಮ ಹಾಗೂ ಕು ದೀಕ್ಷಾ ಸನ್ಮಾನ ಪತ್ರ ವಾಚಿಸಿದರು. ಗ್ರಾಮ ಸಮಿತಿಯ 52 ವಿದ್ಯಾರ್ಥಿಗಳಿಗೆ ಆಯಾ ತರಗತಿಗಳ ಅವಶ್ಯಕತೆಗೆ ಅನುಗುಣವಾಗಿ ಪುಸ್ತಕಗಳನ್ನು ಉಚಿತವಾಗಿ ವಿತರಿಸಲಾಯಿತು. ಬಿಲ್ಲವ ಸಂಘದ ಕೋಶಾಧಿಕಾರಿ ಹಾಗೂ ನರಿಮೊಗರು ವಲಯ ಸಂಚಾಲಕ ಬಿ.ಟಿ ಮಹೇಶ್ಚಂದ್ರ ಸಾಲಿಯಾನ್ ಪುಸ್ತಕ ವಿತರಿಸಿದರು. ಗುರುಮಂದಿರದ ಕಾರ್ಯನಿರ್ವಹಣಾಧಿಕಾರಿ ಹೊನ್ನಪ್ಪ ಪೂಜಾರಿ ಕೈಂದಾಡಿ, ಬಿಲ್ಲವ ಸಂಘದ ಜೊತೆ ಕಾರ್ಯದರ್ಶಿ ಚಿದಾನಂದ ಸುವರ್ಣ, ಮುಂಡೂರು ಸಿ.ಎ ಬ್ಯಾಂಕ್ ಅಧ್ಯಕ್ಷ ಸುರೇಶ್ ಕುಮಾರ್ ಸೊರಕೆ, ನಿರ್ದೇಶಕರಾದ ವಸಂತ ಎಸ್ ಡಿ, ಆನಂದ ಪೂಜಾರಿ ಕೆ, ಮುಂಡೂರು ಗ್ರಾ.ಪಂ ಸದಸ್ಯರಾದ ಚಂದ್ರಶೇಖರ ಎನ್‌ಎಸ್‌ಡಿ, ವಿಜಯ ಕರ್ಮಿನಡ್ಕ, ಎಸ್‌ಜಿಎಂ ಪ್ರೌಢಶಾಲೆಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಅಶೋಕ್ ಎಸ್.ಡಿ ಉಪಸ್ಥಿತರಿದ್ದರು. ಗ್ರಾಮ ಸಮಿತಿ ಗೌರವಾಧ್ಯಕ್ಷ ಶಶಿಧರ್ ಎಸ್ ಡಿ ಸ್ವಾಗತಿಸಿದರು, ಪ್ರ.ಕಾರ್ಯದರ್ಶಿ ನಂದನ್ ಕೆ ವಾರ್ಷಿಕ ವರದಿ ವಾಚಿಸಿದರು. ಜಯರಾಜ್ ಸುವರ್ಣ ಸೊರಕೆ ಪ್ರಾರ್ಥಿಸಿದರು. ಉಮೇಶ್ ಎಸ್ ಡಿ ವಂದಿಸಿದರು. ರಾಜೇಶ್ ಎಸ್.ಡಿ ಕಾರ್ಯಕ್ರಮ ನಿರೂಪಿಸಿದರು. ಬಿಲ್ಲವ ಮಹಿಳಾ ವೇದಿಕೆ ಅಧ್ಯಕ್ಷೆ ಗೀತಾ ನಾರಾಯಣ ಪೂಜಾರಿ ಮರಿಯ ಹಾಗೂ ಪದಾಧಿಕಾರಿಗಳು, ಸದಸ್ಯರು ಸಹಕರಿಸಿದರು.

LEAVE A REPLY

Please enter your comment!
Please enter your name here