ಬಲ್ನಾಡು ಉಜ್ರುಪಾದೆಯಲ್ಲಿ ಯಂತ್ರಶ್ರೀ ಕಾರ್ಯಕ್ರಮ, ಭತ್ತ ನಾಟಿಗೆ ಚಾಲನೆ

0

ನಿಡ್ಪಳ್ಳಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಪುತ್ತೂರು ಮತ್ತು ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ ಬಲ್ನಾಡು ವಲಯ ಸಹಯೋಗದಲ್ಲಿ ಜು.15 ರಂದು ಉಜಿರುಪಾದೆ ನೆಕ್ಕರೆ ನಾರಾಯಣ ಪೂಜಾರಿಯವರ ಮನೆಯಲ್ಲಿ ಯಂತ್ರಶ್ರೀ ಕಾರ್ಯಕ್ರಮವನ್ನು ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ರವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ವೇದಿಕೆಯಲ್ಲಿ ಬಲ್ನಾಡು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಪರಮೇಶ್ವರಿ ಭಟ್, ಪ್ರಗತಿಪರ ಕೃಷಿಕ ಶ್ರೀ ಕೃಷ್ಣ ಭಟ್, ಬಲ್ನಾಡು ವಲಯ ಮೆಲ್ವೀಚಾರಕ ಹರೀಶ್ ಕುಲಾಲ್, ಸಿ.ಎಚ್.ಎಸ್.ಸಿ ಪ್ರಬಂಧಕ ರಾಘವ ಉಪ್ಪಿನಂಗಡಿ, ಬಲ್ನಾಡು ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ  ಮಾಧವ ಗೌಡ ಕಾಂತಿಲ, ಉಜ್ರುಪಾದೆ ಒಕ್ಕೂಟದ ಅಧ್ಯಕ್ಷ ನವೀನ್ ಕರ್ಕೇರಾ, ನಗರ ಸಭಾ ಸದಸ್ಯೆ  ಪೂರ್ಣಿಮಾ ಕೋಡಿಯಡ್ಕ, ಬಾಲಸುಬ್ರಮಣ್ಯ ಕೋಟ್ಯಾನ್, ಗ್ರಾಮ ಪಂಚಾಯತ್ ಸದಸ್ಯ ಕೃಷ್ಣಪ್ಪ ನಾಯ್ಕ, ರತ್ನಾಕರ ಬಂಗೇರ, ನಾರಾಯಣ್ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಒಕ್ಕೂಟದ ಉಪಾಧ್ಯಕ್ಷ ಚಂದ್ರಹಾಸ್ ಕುಲಾಲ್ ಸ್ವಾಗತಿಸಿ, ಕೃಷಿ ಮೇಲ್ವಿಚಾರಕರ ಉಮೇಶ್.ಬಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೇವಾ ಪ್ರತಿನಿಧಿ ಶೃತಿ ವಂದಿಸಿ, ರಮೇಶ್ ಕಾರ್ಯಕ್ರಮ ನಿರೂಪಿಸಿದರು. ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು ಹಾಗೂ ಕೃಷಿಕರು ಪಾಲ್ಗೊಂಡರು.

LEAVE A REPLY

Please enter your comment!
Please enter your name here