ಬಿಜಾಪುರದಲ್ಲಿ ಹೊಟೇಲ್ ಉದ್ಯಮಿಯಾಗಿದ್ದ ಪುತ್ತೂರು ಹೆಬ್ಬಾರಬೈಲು ನಿವಾಸಿ ಚಂದ್ರಶೇಖರ್ ಹೆಚ್.ಎನ್ ನಿಧನ

0

ಪುತ್ತೂರು: ಬಿಜಾಪುರದಲ್ಲಿ ಹೊಟೇಲ್ ಉದ್ಯಮಿಯಾಗಿದ್ದ ಪುತ್ತೂರು ಹೆಬ್ಬಾರಬೈಲು ನಿವಾಸಿ ಚಂದ್ರಶೇಖರ್ ಹೆಚ್.ಎನ್(53ವ)ರವರು ಜು. 19ರಂದು ಸಂಜೆ ಮಂಗಳೂರು ಆಸ್ಪತ್ರೆಯಲ್ಲಿ ನಿಧನರಾದರು.
ಹೆಚ್.ನಾರಾಯಣ್ ಆಂಡ್ ಸನ್ಸ್ ಜವುಳಿ ಸಂಸ್ಥೆಯ ಮಾಲಕರಾಗಿದ್ದ ದಿ.ಹೆಚ್.ನಾರಾಯಣ್ ಅವರ ಪುತ್ರರಾಗಿರುವ ಚಂದ್ರಶೇಖರ್ ಹೆಚ್.ಎನ್ ಅವರು ಹಲವು ವರ್ಷಗಳಿಂದ ಬಿಜಾಪುರದಲ್ಲಿ ಹೊಟೇಲ್ ಉದ್ಯಮಿಯಾಗಿದ್ದರು.  ಕೋವಿಡ್ ಸಂದರ್ಭದಲ್ಲಿ ಎದುರಾದ ಲಾಕ್‌ಡೌನ್‌ನಿಂದ ಪುತ್ತೂರಿಗೆ ಮರಳಿದ ಬಳಿಕ ಮತ್ತೆ ಬಿಜಾಪುರಕ್ಕೆ ತೆರಳದೆ ಪುತ್ತೂರಿನಲ್ಲೇ ಇದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇತ್ತೀಚೆಗೆ ಮಂಗಳೂರು ಅಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಅವರು ಚಿಕಿತ್ಸೆಗೆ ಸ್ಪಂಧಿಸದೆ ಮೃತಪಟ್ಟಿದ್ದಾರೆ. ಮೃತರು  ಪತ್ನಿ ರೂಪಾ, ಪುತ್ರ ಅನೀಶ್, ಪುತ್ರಿ ಅನನ್ಯ, ಸಹೋದರರಾದ ಮಾಜಿ ಪುರಸಭೆ ಉಪಾಧ್ಯಕ್ಷ ಹೆಚ್.ಉದಯ ಮತ್ತು ತಾರನಾಥ ಅವರನ್ನು ಅಗಲಿದ್ದಾರೆ.

ನಾಳೆ(ಜು.20ಕ್ಕೆ) ಮೃತರ ಅಂತ್ಯಕ್ರಿಯೆ
ಚಂದ್ರಶೇಖರ್ ಹೆಚ್.ಎನ್ ಅವರ ಮೃತ ದೇಹವನ್ನು ಮಂಗಳೂರು ಅಸ್ಪತ್ರೆಯಲ್ಲಿ ಇರಿಸಲಾಗಿದ್ದು, ಜು. ೨೦ರಂದು ಪುತ್ತೂರಿಗೆ ಕರೆ ತರಲಾಗುವುದು. ಬಳಿಕ ಪುತ್ತೂರು ಮಡಿವಾಳಕಟ್ಟೆ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಮೃತರ ಸಂಬಂಧಿಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here