ಫಿಲೋಮಿನಾ ಕಾಲೇಜಿನ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾಗಿ ಕೃಷ್ಣಪ್ರಸಾದ್ ಆಳ್ವ

0

ಪುತ್ತೂರು: ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ದರ್ಬೆ ಫಿಲೋನಗರದಲ್ಲಿನ ಸಂತ ಫಿಲೋಮಿನಾ ಕಾಲೇಜಿನ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾಗಿ ಕೃಷ್ಣಪ್ರಸಾದ್ ಆಳ್ವರವರು ಆಯ್ಕೆಯಾಗಿದ್ದಾರೆ.


ಜು.23 ರಂದು ಕಾಲೇಜಿನ ಬೆಳ್ಳಿಹಬ್ಬದ ಸಭಾಂಗಣದಲ್ಲಿ ಜರಗಿದ ಫಿಲೋಮಿನಾ ಕಾಲೇಜಿನ 2022-23ನೇ ಸಾಲಿನ ರಕ್ಷಕ-ಶಿಕ್ಷಕ ಸಂಘದ ಸಭೆಯಲ್ಲಿ ಕೃಷ್ಣಪ್ರಸಾದ್ ಆಳ್ವರವರನ್ನು ಆಯ್ಕೆ ಮಾಡಲಾಯಿತು. ಬೆಟ್ಟಂಪಾಡಿ ಗ್ರಾಮದ ಚೆಲ್ಯಡ್ಕ `ಆಳ್ವರ ಮನೆ’ಯಲ್ಲಿ ವಾಸವಾಗಿರುವ ಕೃಷ್ಣಪ್ರಸಾದ್ ಆಳ್ವರವರು ತಮ್ಮ ಪ್ರಾಥಮಿಕ ಶಿಕ್ಷಣ, ಪ್ರೌಢಶಿಕ್ಷಣ ಹಾಗೂ ಕಾಲೇಜು ಶಿಕ್ಷಣವನ್ನು ಕ್ರಮವಾಗಿ ಉಪ್ಪಳಿಗೆ, ಬೆಟ್ಟಂಪಾಡಿ, ಸಂತ ಫಿಲೋಮಿನಾ ಕಾಲೇಜಿನಲ್ಲಿ ಪೂರೈಸಿದ್ದರು. ಬಳಿಕ ಉಪ್ಪಳಿಗೆ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಎಸ್‌ಡಿಎಂಸಿಯಲ್ಲಿ ಶಿಕ್ಷಣ ತಜ್ಞರಾಗಿ ಸೇವೆ, ಉಪ್ಪಳಿಗೆ ಸರಕಾರಿ ಪ್ರೌಢಶಾಲೆಯಲ್ಲಿ ಎಸ್‌ಡಿಎಂಸಿ ಉಪಾಧ್ಯಕ್ಷರಾಗಿ ಸೇವೆಯೊಂದಿಗೆ ಶಾಲೆಯ ಸುಸಜ್ಜಿತ ಸಭಾಭವನದ ಅಭಿವೃದ್ಧಿಯ ರೂವಾರಿ, ಲಯನ್ಸ್ ಕ್ಲಬ್ ಪುತ್ತೂರ್‍ದ ಮುತ್ತು ಪ್ರವರ್ತಿತ ಲಿಯೋ ಕ್ಲಬ್ ಪುತ್ತೂರ್‍ದ ಮುತ್ತು ಇದರ ಸ್ಥಾಪಕ ಅಧ್ಯಕ್ಷರಾಗಿ ಸೇವೆ, ಲಿಯೋ ಜಿಲ್ಲೆ 32೪ಡಿ೪, ಡಾ|ಶಾಂತಾರಾಮ ಶೆಟ್ಟಿ ರಾಜ್ಯಪಾಲರ ಯೂತ್ ವಿಂಗ್ ಜಿಲ್ಲಾಧ್ಯಕ್ಷರಾಗಿ, ಪುತ್ತೂರು ಜೇಸಿಐ ಇಂಟರ್‌ನ್ಯಾಷನಲ್ ಕ್ಲಬ್‌ನ ಅಧ್ಯಕ್ಷರಾಗಿ, ರಾಷ್ಟ್ರೀಯ ರಾಜಕೀಯ ಪಕ್ಷದಲ್ಲಿ ವಿವಿಧ ಪದಾಧಿಕಾರಿಗಳಾಗಿ ಸಂಘಟನಾ ಚತುರನೆಂಬ ಪ್ರಶಂಸೆಗೆ ಪಾತ್ರರಾಗಿದ್ದಾರೆ. ತಾಲೂಕು ಪಂಚಾಯತ್ ಕೆಡಿಪಿ ನಾಮನಿರ್ದೇಶಿತ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಪುತ್ತೂರಿನ ಬಸ್ ನಿಲ್ದಾಣದ ಗಾಂಧಿಕಟ್ಟೆಯ ಸ್ಥಾಪಕ ಸಂಚಾಲಕರಾಗಿ, ಉದ್ಯಮಿಯಾಗಿ ಯಶಸ್ವಿ ಕಂಡವರು. ತಾಲೂಕು ಬಂಟರ ಸಂಘದಲ್ಲಿಯೂ ಸಕ್ರಿಯರಾಗಿರುವ ಇವರು ಬೆಟ್ಟಂಪಾಡಿಯಲ್ಲಿ ಉತ್ತಮ ಕೃಷಿಕನಾಗಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದು ಪತ್ನಿ ವಿದ್ಯಾ ಪ್ರಸಾದ್, ಫಿಲೋಮಿನಾ ಕಾಲೇಜಿನಲ್ಲಿ ದ್ವಿತೀಯ ಬಿಸಿಎ ವ್ಯಾಸಂಗ ಮಾಡುತ್ತಿರುವ ವಿಕ್ರಂ ಆಳ್ವ, ವಿಕ್ರಾಂತ್ ಆಳ್ವ, ಪ್ರಿಯದರ್ಶಿನಿಯಲ್ಲಿ 10ನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಪುತ್ರಿ ಶ್ರೀವೈಷ್ಣವಿ ಆಳ್ವರವರೊಂದಿಗೆ ವಾಸವಾಗಿದ್ದಾರೆ.

LEAVE A REPLY

Please enter your comment!
Please enter your name here