ಮಂಗಳೂರಿನಲ್ಲಿ ಸಾಲ್ಮರ ಹರ್ಬಲ್ಸ್, ಮೆಡಿಕಲ್ಸ್ ಸ್ಟೋರ್ ಶುಭಾರಂಭ

0

ಪುತ್ತೂರು : ಹಲವಾರು ವರ್ಷಗಳಿಂದ ನಾಟಿವೃದ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಪುತ್ತೂರಿನಾದ್ಯಂತ ಹೆಸರುವಾಸಿಯಾಗಿರುವ ನಾಟಿವೈದ್ಯ ಶಂಶುದ್ದೀನ್ ಸಾಲ್ಮರರವರ ನೇತೃತ್ವದಲ್ಲಿ ಮಂಗಳೂರಿನ ಬಿಕರ್ನಕಟ್ಟೆ ಪೆಟ್ರೋಲ್ ಪಂಪ್ ಬಳಿ ಸಾಲ್ಮರ ಹರ್ಬಲ್ಸ್ ಮತ್ತು ಮೆಡಿಕಲ್ ಸ್ಟೋರ್ ಜು.24ರಂದು ಶುಭಾರಂಭಗೊಂಡಿತು.

ನೂತನ ಸಂಸ್ಥೆಯನ್ನು ಉದ್ಯಮಿ ಮೋಹನ್ ಮೆಂಡನ್ ಮತ್ತು ರೇಖಾ ದಂಪತಿ ಉದ್ಘಾಟಿಸಿದರು. ಬಳಿಕ ಮೋಹನ್ ಮೆಂಡನ್‌ರವರು ಮಾತನಾಡಿ ಆಯುರ್ವೇದ ಅಂದರೆ ಅದೊಂದು ವಿಶೇಷ ಔಷಧಿಯಾಗಿದ್ದು ನಮಗೆ ಆರೋಗ್ಯ ಸಿಗಬೇಕಾದರೆ ಇಂಗ್ಲಿಷ್ ಮದ್ದಿಗಿಂತಲೂ ಆಯುರ್ವೇದ ಔಷಧಿ ಬಹಳ ಅಗತ್ಯವಿದೆ ಎಂದರು. ನಾಟಿವೈದ್ಯ ಶಂಶುದ್ದೀನ್ ಸಾಲ್ಮರರವರ ಸಾಲ್ಮರ ಹರ್ಬಲ್ಸ್ ಆಯುರ್ವೇದ ಸಂಸ್ಥೆಯು ಇದೊಂದು ದಿವ್ಯ ಔಷಧಿಯ ಕೇಂದ್ರವಾಗಿದ್ದು ನನ್ನ ಸೊಸೆ ಸೇರಿದಂತೆ ಅದೆಷ್ಟೋ ಮಂದಿ ಮೂಲವ್ಯಾಧಿ, ಪೈಲ್ಸ್ ಸೇರಿದಂತೆ ಹಲವಾರು ರೋಗಗಳಿಗೆ ಇವರ ಔಷಧಿಯಿಂದ ಆರೋಗ್ಯಂತರಾಗಿದ್ದಾರೆ ಎಂದು ಹೇಳಿ ಶುಭಹಾರೈಸಿದರು. ಕಟ್ಟಡ ಮಾಲಕ, ದ.ಕ.ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಜಿಲ್ಲಾ ಕಾರ್ಯದರ್ಶಿ ಲಕ್ಷ್ಮಣ ಕೆರೊಡಿಯನ್‌ರವರು ಕ್ಲಿನಿಕ್ ಉದ್ಘಾಟಿಸಿ ಮಾತನಾಡಿ ಪೈಲ್ಸ್, ಮೂಲವ್ಯಾಧಿ ಹಾಗೂ ಇನ್ನಿತರ ಬೇರೆ ಬೇರೆ ರೋಗಗಳಿಗೆ ಸಾಲ್ಮರ ಆಯುರ್ವೇದಿಕ್ ಹರ್ಬಲ್ಸ್ ಸಂಸ್ಥೆಯ ಮೂಲಕ ಚಿಕಿತ್ಸೆ ನೀಡಿ ಅದೆಷ್ಟೋ ಮಂದಿ ಗುಣಮುಖರಾಗಿರುವ ಬಗ್ಗೆ ತಿಳಿದಿದೆ. ಮುಂದೆ ಈ ಸಂಸ್ಥೆ ಎಲ್ಲಾ ಕಡೆಯಲ್ಲಿ ಪಸರಿಸಲಿ. ಇದರ ಸದುಪಯೋಗನ್ನು ಪಡೆದುಕೊಳ್ಳುವಂತೆ ವಿನಂತಿಸಿದರು. ಉದ್ಯಮಿ ಕಿಸಾನ್ ಕುಮಾರ್ ಕುಂದರ್ ಉಳ್ಳಾಲಬೈಲು, ಗೂನಡ್ಕ ಸಲೀಂ ಅಲ್ತಾಫ್, ಇಬ್ರಾಹಿಂ ಬಾತಿಷ ಸಾಲ್ಮರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸಂಸ್ಥೆಯ ಮಾಲಕ ಶಂಶುದ್ದೀನ್ ಸಾಲ್ಮರರವರು ಮಾತನಾಡಿ ಮೂಲವ್ಯಾಧಿ ರೋಗಕ್ಕೆ ನೀಡುತ್ತಾ ಬರುತ್ತಿರುವ ಸಾಲ್ಮರ ಪೈಲೋಕ್ಯೂರ್ ಔಷಧಿ ಇಲ್ಲಿ ಲಭ್ಯವಿದ್ದು ಮೂಲವ್ಯಾಧಿಯ ಲಕ್ಷಣಗಳಾದ ಮಲವಿಸರ್ಜಿಸಲು ಅಡೆತಡೆ, ಗುದದ್ವಾರದಲ್ಲಿ ವಿಪರೀತ ನೋವು, ತುರಿಕೆ, ನೋವು, ನವೆ, ರಕ್ತ ಬೀಳುವುದು, ಕೀವು ಸೋರುವುದು, ಮಾಂಸರೂಪದಲ್ಲಿ ಗಡ್ಡೆ ಹೊರಬಂದು ಕುಳಿತುಕೊಳ್ಳಲಾಗದೆ ಸಂಕಟಪಡುವವರಿಗೆ ಕೇವಲ ಒಂದು ವಾರದಲ್ಲಿ ರೋಗ ಹತೋಟಿಗೆ ಬರುವುದು. ಎರಡು ತಿಂಗಳ ಔಷಧೋಪಾಚಾರದಿಂದ ಶಾಶ್ವತವಾಗಿ ಜೀವನಪರ್ಯಂತ ಪೈಲ್ಸ್ ರೋಗದಿಂದ ಮುಕ್ತಿ ಪಡೆಯಬಹುದಾಗಿದೆ. ಅಲ್ಲದೆ ಸೊಂಟನೋವು, ವಾತಸಂಬಂಧಿ ರೋಗ, ಮೂತ್ರಕೋಶದಲ್ಲಿ ಕಲ್ಲು, ಪಿತ್ತಕಾಮಾಲೆ, ಬಿಳಿಸೆರಗು, ಸ್ತ್ರೀಸಂಬಂಧಿ ರೋಗಗಳಿಗೆ ಪರಿಣಾಮಕಾರಿ ಚಿಕಿತ್ಸೆ ನೀಡಲಾಗುವುದು. ಈ ಔಷಧಗಳು ಭಾರತ ಸರಕಾರದ ಆಯುಷ್ ವಿಭಾಗದಿಂದ ಮಾತ್ಯತೆ ಪಡೆದಿದೆ. ಶುಭಾರಂಭದ ಪ್ರಯುಕ್ತ ಜು.೨೪ರಂದು ಮೂರು ದಿನದ ಪೈಲ್‌ಕ್ಯೂರ್ ಔಷಧಿ ಸ್ಯಾಂಪಲ್ ಉಚಿತವಾಗಿ ನೀಡಲಾಗುವುದು. ಅಲ್ಲದೆ ಮುಂದಿನ ದಿನದಲ್ಲಿ ಉಚಿತ ಶಿಬಿರ ನಡೆಸಿ ಆಯುರ್ವೇದ ಔಷಧಿ ಮಾಹಿತಿ ಹಾಗೂ ಉಚಿತ ಔಷಧಿ ನೀಡಲಾಗುವುದು ಎಂದು ತಿಳಿಸಿದರು.

LEAVE A REPLY

Please enter your comment!
Please enter your name here