‘ದುಬೈ ವಿಶ್ವವಿದ್ಯಾನಿಲಯ’ದ ಐಟಿ ವಿಭಾಗದ ಮುಖ್ಯಸ್ಥರಾಗಿ ಸುದ್ದಿ ವೆಬ್‌ಸೈಟ್ ವಿಭಾಗದ ತಾಂತ್ರಿಕ ನಿರ್ದೇಶಕ ಹನೀಫ್ ಆಯ್ಕೆ

0

ಪುತ್ತೂರು: ಸುದ್ದಿ ಸಮೂಹ ಸಂಸ್ಥೆಯ ವೆಬ್‌ಸೈಟ್ ವಿಭಾಗದ ತಾಂತ್ರಿಕ ನಿರ್ದೇಶಕರಾಗಿರುವ ಹನೀಫ್ ರವರು ‘ದುಬೈ ಯುನಿವರ್ಸಿಟಿ’ಯ ಐ.ಟಿ. ವಿಭಾಗದ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದಾರೆ.

ಆರ್ಯಾಪು ಗ್ರಾಮದ ಬಳ್ಳೇರಿ ನಿವಾಸಿ ಅಬ್ಬಾಸ್ ಹಾಜಿಯವರ ಪುತ್ರರಾಗಿರುವ ಹನೀಫ್ ರವರು ಕಳೆದ ಕೆಲವು ವರ್ಷಗಳಿಂದ ದುಬೈ ಸರಕಾರದ ಅಧೀನದಲ್ಲಿರುವ ಪ್ರತಿಷ್ಠಿತ ಮಹಮ್ಮದ್ ಬಿನ್ ರಾಷೀದ್ ಬಾಹ್ಯಾಕಾಶ ಕೇಂದ್ರದಲ್ಲಿ ಹಿರಿಯ ಗಣಕಾಂಶ ತಂತ್ರಜ್ಞರಾಗಿ ಸೇವೆ ಸಲ್ಲಿಸುತ್ತಿದ್ದು ಇದೀಗ ಹೆಚ್ಚುವರಿಯಾಗಿ ದುಬೈ ವಿಶ್ವವಿದ್ಯಾನಿಲಯದ ಐಟಿ ವಿಭಾಗದ ಮುಖ್ಯಸ್ಥರಾಗಿ ಹೊಸ ಜವಾಬ್ದಾರಿ ದೊರೆತಿದೆ. ಇವರಿಗೆ ಯು.ಎ.ಇ. ಸರಕಾರವು ಕೆಲ ತಿಂಗಳ ಹಿಂದೆ, ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸುವವರಿಗೆ ಕೊಡಲ್ಪಡುವ ‘ಯು.ಎ.ಇ. ಗೋಲ್ಡನ್ ವೀಸಾ’ ಕೊಟ್ಟು ಗೌರವಿಸಿತ್ತು. ಇದಲ್ಲದೆ ಇವರು 2023 ಮಾರ್ಚ್‌ನಲ್ಲಿ ದುಬಾಯಿಯಲ್ಲಿ 200ಕ್ಕೂ ಮಿಕ್ಕಿ ಅಂತರ ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ ಗಳ ಸಹಯೋಗದೊಂದಿಗೆ ನಡೆಯಲಿರುವ SpaceOps23 ಅಂತರ್ರಾಷ್ಟ್ರೀಯ ಸಮ್ಮೇಳನದ ಸಂಘಟನಾ ಸಮಿತಿಯಲ್ಲಿ ತಂತ್ರಾಂಶ ವಿಭಾಗದ ಮುಖ್ಯಸ್ಥರೂ ಆಗಿದ್ದಾರೆ.

ಅಶಕ್ತರಿಗೆ ವಿವಿಧ ರೀತಿಯಲ್ಲಿ ನೆರವು ನೀಡುವ ಸೇವೆ ಸಲ್ಲಿಸುತ್ತಿರುವ ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ , ಮಂಗಳೂರು ಇದರ ಎನ್.ಆರ್.ಐ. ಟ್ರಸ್ಟಿಯೂ ಆಗಿರುವ ಇವರು ಸುದ್ದಿ ವೆಬ್‌ಸೈಟ್ ವಿಭಾಗದಲ್ಲಿ ಜಗತ್ತಿನೆಲ್ಲೆಡೆ ಇರುವ ಪುತ್ತೂರು, ಸುಳ್ಯ, ಬೆಳ್ತಂಗಡಿಯವರಿಂದ ಓದಲ್ಪಡುವ ಸುದ್ದಿ ಇ-ಪೇಪರ್, ಆನ್‌ಲೈನ್ ನ್ಯೂಸ್, ಮೊಬೈಲ್ ಆಪ್‌ಗಳ ತಾಂತ್ರಿಕ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಸುದ್ದಿ ಮಾಹಿತಿ ವಿಭಾಗದಲ್ಲಿಯೂ ತಾಂತ್ರಿಕ ಸಲಹೆ ಹಾಗೂ ನಿರ್ವಹಣೆ ಮಾಡುತ್ತಿದ್ದಾರೆ.

LEAVE A REPLY

Please enter your comment!
Please enter your name here