ಹನುಮಗಿರಿ ಶ್ರೀಗಜಾನನ ವಿದ್ಯಾ ಸಂಸ್ಥೆಗಳಲ್ಲಿ ಕಾರ್ಗಿಲ್ ವಿಜಯೋತ್ಸವ

0

ಪುತ್ತೂರು : ಈಶ್ವರಮಂಗಲ ಹನುಮಗಿರಿ ಶ್ರೀಗಜಾನನ ವಿದ್ಯಾ ಸಂಸ್ಥೆಗಳಲ್ಲಿ ಕಾರ್ಗಿಲ್ ವಿಜಯೋತ್ಸವ ದಿನವನ್ನು ಆಚರಿಸಲಾಯಿತು. ಮಾಜಿ ವಾಯು ಸೇನಾ ಸೈನಿಕ ಶಾಮ ಪ್ರಸಾದ್ ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ತಮ್ಮ ಸೈನಿಕ ವೃತ್ತಿ ಜೀವನದ ಅನುಭವಗಳನ್ನು ಹಂಚಿಕೊಂಡು ಅಗ್ನಿಪಥ್ ಯೋಜನೆಯ ಪ್ರಯೋಜನಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಸಹ ಶಿಕ್ಷಕಿ ಕು.ಎಸ್ ಸುಶ್ಮಿತಾ ದಿನದ ಮಹತ್ವ ತಿಳಿಸಿದರು. ಪ್ರಾಂಶುಪಾಲರಾದ ಕೆ. ಶಾಮಣ್ಣ ಅಧ್ಯಕ್ಷತೆ ವಹಿಸಿದರು. ವಿದ್ಯಾರ್ಥಿಗಳು ಭಾಷಣ, ಹಾಡು ಮೊದಲಾದ ಕಾರ್ಯಕ್ರಮಗಳನ್ನು ನೀಡಿದರು. ವಿದ್ಯಾರ್ಥಿನಿಯರಾದ ಬಿಂದ್ಯ ಮತ್ತು ಪಂಗಡದವರು ಪ್ರಾರ್ಥಿಸಿ, ಅಂಕಿತ ಸ್ವಾಗತಿಸಿ, ಝರ್ಬಾಜ್ ವಂದಿಸಿದರು. ಅನ್ವಿತಾ ಮತ್ತು ರಿಯಾ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here