ಟೈಲರ್‍ಸ್ ವೃತ್ತಿ ಬಾಂಧವರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ದ.ಕ. ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟನಾ ಮೆರವಣಿಗೆ

0

  • ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ
  • ಪುತ್ತೂರು ಕ್ಷೇತ್ರದಿಂದ 540 ಟೈಲರ್ ವೃತ್ತಿ ಬಾಂಧವರು ಭಾಗಿ‌

 

ಚಿತ್ರ: ರಮೇಶ್‌ ಕೆಮ್ಮಾಯಿ

ಪುತ್ತೂರು: ಟೈಲರ್‌ಗಳಿಗೆ ಸಾಮಾಜಿಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಹಾಗೂ ಸರ್ಕಾರದ ವಿವಿಧ ಸವಲತ್ತಿನ ಸಹಕಾರಕ್ಕಾಗಿ ಕಳೆದ 24ವರ್ಷಗಳಿಂದ ಕರ್ನಾಟಕ ಸ್ಟೇಟ್ ಟೈಲರ್‍ಸ್ ಅಸೋಸಿಯೇಶನ್ ವತಿಯಿಂದ ಸರಕಾರದ ಜನಪ್ರತಿನಿಧಿಗಳಿಗೆ ಮನವಿಯನ್ನು ನೀಡುತ್ತಿದ್ದು ಸಕಾರಾತ್ಮಕ ಪ್ರತಿಕ್ರಿಯೆ ಲಭ್ಯವಾಗಿಲ್ಲ ಅಲ್ಲದೆ ಟೈಲರ್‌ಗಳಿಗೆ ಕನಿಷ್ಠ ಜೀವನ ಭದ್ರತೆ ಒದಗಿಸುವ ಕ್ಷೇಮನಿಧಿ ದೊರೆಯದೇ ಇದ್ದು ಇದರ ಜಾರಿಗೂ ಸರ್ಕಾರ ಮೀನಾಮೇಷ ಎನಿಸುತ್ತಿರುವುದರಿಂದ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜು.26ದು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟನೆ ನಡೆದಿದ್ದು ದ.ಕ. ಜಿಲ್ಲಾ ಕೇಂದ್ರದಲ್ಲಿಯೂ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಮನವಿ ಮಾಡಲಾಯಿತು. ಮಂಗಳೂರಿನ ಬಲ್ಮಠ ಶಾಂತಿ ನಿಲಯ ಬಳಿಯಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಜಿಲ್ಲಾಧಿಕಾರಿ ಕಛೇರಿಯವರೆಗೆ ನಡೆಯಿತು. ಬಳಿಕ ದ.ಕ.ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.ರವರ ಕಛೇರಿಯಲ್ಲಿ ಮನವಿ ಸಲ್ಲಿಸಲಾಯಿತು.

 


ಪುತ್ತೂರು ಕ್ಷೇತ್ರ ಸಮಿತಿ ಅಧ್ಯಕ್ಷ ಜಯರಾಮ ಬಿ.ಎನ್., ಪ್ರಧಾನ ಕಾರ್ಯದರ್ಶಿ ಉಮಾ ಯು ನಾಯ್ಕ್, ರಾಜ್ಯ ಸಮಿತಿಯ ಆಂತರಿಕ ಲೆಕ್ಕ ಪರಿಶೋಧಕ ರಘುನಾಥ ಬಿ., ದ.ಕ. ಜಿಲ್ಲಾ ಅಧ್ಯಕ್ಷ ಜಯಂತ ಉರ್ಲಾಂಡಿ, ಕ್ಷೇತ್ರ ಸಮಿತಿ ಕೋಶಾಧಿಕಾರಿ ಸುಜಾತ ಮಂದಾರ, ಜಿಲ್ಲಾ ರಮಿತಿ ಸದಸ್ಯರಾದ ಶುಂಭು ಬಲ್ಯಾಯ, ದಯಾನಂದ ಹೆಗಡೆ, ನಗರ ವಲಯದ ಅಧ್ಯಕ್ಷ ಯಶೋಧರ ಜೈನ್, ಪ್ರಧಾನ ಕಾರ್ಯದರ್ಶಿ ಭಾರತಿಹರೀಶ್, ನರಿಮೊಗರು ವಲಯದ ಅಧ್ಯಕ್ಷ ಆನಂದ ದಂಡ್ಯನಕುಕ್ಕು, ಕಾರ್ಯದರ್ಶಿ ವಸಂತ ಗೌಡ, ಕೋಶಾಧಿಕಾರಿ ಜತ್ತಪ್ಪ ಗೌಡ, ಸವಣೂರು ವಲಯದ ಅಧ್ಯಕ್ಷ ಜಗನ್ನಾಥ ಗೌಡ, ಕಾರ್ಯದರ್ಶಿ ಯಶೋಧ, ಕೋಶಾಧಿಕಾರಿ ಪ್ರಮೀಳ, ಕಾಣಿಯೂರು ವಲಯದ ಅಧ್ಯಕ್ಷೆ ಅರುಣಾ ಎಂ.ಶೆಟ್ಟಿ, ಕಾರ್ಯದರ್ಶಿ ಜಯಶ್ರೀ, ಕೋಶಾಧಿಕಾರಿ ಪರಮೇಶ್ವರ, ಕುಂಬ್ರ ವಲಯದ ಅಧ್ಯಕ್ಷ ಆನಂದ ರೈ, ಕಾರ್ಯದರ್ಶಿ ಚಿತ್ರ ಬಿ.ಸಿ., ಪುಣಚ ವಲಯದ ಅಧ್ಯಕ್ಷೆ ನಳಿನಿ ಸುವರ್ಣ, ಕಾರ್ಯದರ್ಶಿ ಅರುಣ ಕುಮಾರಿ, ಕೋಶಾಧಿಕಾರಿ ರೇಖಾ, ಈಶ್ವರ ಮಂಗಲ ವಲಯದ ಅಧ್ಯಕ್ಷೆ ರೇವತಿ, ಕಾರ್ಯದರ್ಶಿ ಗಣೇಶ್, ಕೋಶಾಧಿಕಾರಿ ವೆಂಕಪ್ಪ, ಉಪ್ಪಿನಂಗಡಿ ವಲಯದ ಅಧ್ಯಕ್ಷ ರೋಹಿತಾಕ್ಷ, ಕಾರ್ಯದರ್ಶಿ ಸುಜಾತ, ಪಾಣಾಜೆ ವಲಯದ ಅಧ್ಯಕ್ಷೆ ಸುರೇಖ, ಕಾರ್ಯದರ್ಶಿ ಶಶಿಕಲ, ಕೋಶಾಧಿಕಾರಿ ಪುಷ್ಪಾವತಿ ಸೇರಿದಂತೆ ಹಲವರು ಭಾಗವಹಿಸಿದ್ದರು.

ಪ್ರತಿಭಟನೆಯಲ್ಲಿ ಕರ್ನಾಟಕ ಸ್ಟೇಟ್ ಟೈಲರ್‍ಸ್ ಅಸೋಸಿಯೇಶನ್‌ನ ಸುಮಾರು 5000ಕ್ಕೂ ಮಿಕ್ಕಿ ಟೈಲರ್ ವೃತ್ತಿ ಬಾಂಧವರು ಭಾಗವಹಿಸಿದ್ದರು. ಪುತ್ತೂರು ಕ್ಷೇತ್ರದ 9  ವಲಯದಿಂದ ಸುಮಾರು ೫೪೦ ಟೈಲರ್ ವೃತ್ತಿ ಬಾಂಧವರು ಪ್ರತಿಭಟನೆಯಲ್ಲಿ ಭಾಗವಹಿಸಿದರು.

LEAVE A REPLY

Please enter your comment!
Please enter your name here