ಆಲಂಕಾರು ಸಿ.ಎ ಬ್ಯಾಂಕ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಪದ್ಮಪ್ಪ ಗೌಡ .ಕೆ

0

ಆಲಂಕಾರು: ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಪದ್ಮಪ್ಪ ಗೌಡ ಕೆ ರವರು ಪದೋನ್ನತಿ ಗೊಂಡಿದ್ದಾರೆ. 
ಪದ್ಮಪ್ಪ ಗೌಡ ಕೆ ಯವರು ರಾಮಕುಂಜ ಗ್ರಾಮದ ಕೆದಂಬಾಡಿ ದಿ.ದೇವಪ್ಪ ಗೌಡ ಹಾಗು ಚೆನ್ನಕ್ಕ ದಂಪತಿಗಳ ಪುತ್ರರಾಗಿದ್ದು, ಪ್ರಾಥಮಿಕ ಶಿಕ್ಷಣವನ್ನು ದ.ಕ ಜಿ.ಪ ಕಿರಿಯ ಪ್ರಾಥಮಿಕ ಶಾಲೆ ಕುಂಡಾಜೆ ಹಾಗು ರಾಮಕುಂಜದಲ್ಲಿ ಮುಗಿಸಿ ನಂತರ ಪ್ರೌಢ ಶಿಕ್ಷಣವನ್ನು ರಾಮಕುಂಜೇಶ್ವರ ವಿದ್ಯಾಸಂಸ್ಥೆಯಲ್ಲಿ ಪಡೆದು ಪಿ.ಯು.ಸಿ, ಪದವಿ ಶಿಕ್ಷಣವನ್ನು ವಿವೇಕಾನಂದ ಪದವಿ ಕಾಲೇಜು ಪುತ್ತೂರಿನಲ್ಲಿ ಪಡೆದರು.

ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ 1992 ರಲ್ಲಿ ಗುಮಸ್ತರಾಗಿ ಸೇವೆ ಸಲ್ಲಿಸಿ ಆನಂತರ ಕೊಯಿಲ ಹಾಗು ಕುಂತೂರು ಶಾಖಾ ವ್ಯವಸ್ಥಾಪಕರಾಗಿ ಮುಂಭಡ್ತಿ ಪಡೆದು ಶಾಖಾ ಮ್ಯಾನೇಜರ್ ಆಗಿ ಸೇವೆ ಸಲ್ಲಿಸಿ ಇದೀಗ ಸಂಘದ ಪ್ರದಾನ ಕಛೇರಿಯಲ್ಲಿ ಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಿ ಪದೋನ್ನತಿ ಹೊಂದಿದ್ದಾರೆ.

LEAVE A REPLY

Please enter your comment!
Please enter your name here