ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಎನ್‌ಐಎ ತನಿಖೆ ಆರಂಭ

0

  • ಮಂಗಳೂರು, ಕೇರಳದಲ್ಲಿ ಮಾಹಿತಿ ಕಲೆ ಹಾಕುತ್ತಿರುವ ಅಧಿಕಾರಿಗಳು
  • ಬೆಳ್ಳಾರೆಯಲ್ಲೂ ಗುಪ್ತ ಮಾಹಿತಿ ಸಂಗ್ರಹ
  • ಸುಳ್ಯ ಮೂಲದ ಇಬ್ಬರು ಬೆಂಗಳೂರಿನಲ್ಲಿ ಪೊಲೀಸರ ವಶಕ್ಕೆ

ಪುತ್ತೂರು:ಬೆಳ್ಳಾರೆಯಲ್ಲಿ ದುಷ್ಕರ್ಮಿಗಳಿಂದ ನಡೆದಿರುವ ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು ಅವರ ಹತ್ಯೆ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ)ಗೆ ವಹಿಸಿಕೊಡಲು ರಾಜ್ಯ ಸರಕಾರ ತೀರ್ಮಾನಿಸಿರುವ ಬೆನ್ನಲ್ಲೇ ಎನ್‌ಐಎ ಅಧಿಕಾರಿಗಳ ಎರಡು ತಂಡಗಳು ಪ್ರಕರಣದ ಮಾಹಿತಿಯನ್ನು ಕಲೆ ಹಾಕುತ್ತಿರುವುದಾಗಿ ವರದಿಯಾಗಿದೆ.ಈ ನಡುವೆ ಪ್ರಕರಣಕ್ಕೆ ಸಂಬಂಧಿಸಿ ಇನ್ನಿಬ್ಬರು ಆರೋಪಿಗಳು ಪೊಲೀಸರ ವಶವಾಗಿರುವುದಾಗಿ ವರದಿಯಾಗಿದೆ.

ಎನ್.ಐ.ಎ.ಗುಪ್ತ ಕಾರ್ಯಾಚರಣೆ:

ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರವೀಣ್ ನೆಟ್ಟಾರು ಅವರ ಮನೆಗೆ ಭೇಟಿ ನೀಡಿ ಹೋದ ಬಳಿಕದ ಬೆಳವಣಿಗೆಯಲ್ಲಿ, ಪ್ರವೀಣ್ ಹತ್ಯೆ ಪ್ರಕರಣದ ತನಿಖೆಯನ್ನು ಎನ್‌ಐಎಗೆ ಒಪ್ಪಿಸಲು ಸರಕಾರ ನಿರ್ಧರಿಸಿರುವುದಾಗಿ ಹೇಳಿದ್ದರು.ಇನ್ನೆರಡು ಮೂರು ದಿನಗಳಲ್ಲಿ ಈ ಪ್ರಕರಣವನ್ನು ಎನ್‌ಐಎಗೆ ಹಸ್ತಾಂತರಿಸಲಾಗುವುದು. ಪ್ರಕರಣದ ಬಗ್ಗೆ ಈಗಾಗಲೇ ಎನ್‌ಐಎಗೆ ಔಪಚಾರಿಕವಾಗಿ ತಿಳಿಸಲಾಗಿದೆ. ಟೆಕ್ನಿಕಲ್ ಹಾಗೂ ಪೇಪರ್ ವರ್ಕ್ ನಡೆಯುತ್ತಿದ್ದು ಎರಡು ಮೂರು ದಿನಗಳೊಳಗೆ ಪ್ರಕರಣವನ್ನು ಎನ್‌ಐಎಗೆ ಹಸ್ತಾಂತರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಎನ್‌ಐಎ ತನಿಖೆಗೆ ವಹಿಸಿಕೊಡುವುದಾಗಿ ಮುಖ್ಯಮಂತ್ರಿ ಹೇಳಿಕೆ ನೀಡಿದ್ದ ಬೆನ್ನಲ್ಲೇ ಪ್ರಕರಣದ ಮಾಹಿತಿ ಪಡೆದುಕೊಂಡಿರುವ ಎನ್‌ಐಎ ಎರಡು ತಂಡಗಳು ಈಗಾಗಲೇ ಮಂಗಳೂರು ಹಾಗೂ ಕೇರಳದಲ್ಲಿ ಪ್ರಕರಣದ ಬಗ್ಗೆ ಮಾಹಿತಿಯನ್ನು ಕಲೆ ಹಾಕುತ್ತಿರುವುದಾಗಿ ತಿಳಿದು ಬಂದಿದೆ. ಜೊತೆಗೆ ಹತ್ಯೆ ನಡೆದಿರುವ ಬೆಳ್ಳಾರೆ ಭಾಗದಲ್ಲೂ ಎನ್‌ಐಎ ಗುಪ್ತವಾಗಿ ಮಾಹಿತಿ ಸಂಗ್ರಹಿಸಿರುವುದಾಗಿ ವರದಿಯಾಗಿದೆ.ಆದರೆ ಪೊಲೀಸರು ಇದನ್ನು ಖಚಿತಪಡಿಸಿಲ್ಲ.ಜಿಲ್ಲೆಯಲ್ಲಿ ಇದೇ ಮೊದಲು ಪ್ರಕರಣವೊಂದು ಎನ್.ಐ.ಎ ತನಿಖೆಗೆ ಹಸ್ತಾಂತರವಾಗಲಿರುವುದರಿಂದ ಸಹಜವಾಗಿ ಜನರು ಈ ಕುರಿತು ಕುತೂಹಲದಿಂದ ಕಾಯುತ್ತಿದ್ದಾರೆ.

ಮತ್ತಿಬ್ಬರು ಪೊಲೀಸರ ವಶಕ್ಕೆ:

ಈ ನಡುವೆ ಪ್ರವೀಣ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಇನ್ನಿಬ್ಬರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬೆಂಗಳೂರಿನ ಕೆ.ಜೆ ಹಳ್ಳಿಯಲ್ಲಿ ಅಡಗಿದ್ದ ಸುಳ್ಯ ಮೂಲದ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಬೆಂಗಳೂರಿನಲ್ಲಿ ಅಡಗಿ ಕುಳಿತಿದ್ದ ಸುಳ್ಯ ಮೂಲದ ಇರ್ಫಾನ್ ಮತ್ತು ಅಲ್ತಾಫ್ ಎಂಬವರನ್ನು ಜು.31ರಂದು ರಾತ್ರಿ ವಶಕ್ಕೆ ಪಡೆದುಕೊಳ್ಳಲಾಗಿದೆ.‌ ಶಂಕಿತರು ಇದ್ದ ಮನೆಯನ್ನು ಸುತ್ತುವರಿದ ಪೊಲೀಸ್ ತಂಡ ಮಧ್ಯರಾತ್ರಿ ಆರೋಪಿಗಳನ್ನು ಬಂಽಸಿ ಮಂಗಳೂರಿಗೆ ಕರೆತಂದಿರುವುದಾಗಿ ದೃಶ್ಯ ಮಾಧ್ಯಮಗಳಲ್ಲಿ ವರದಿಯಾಗಿದೆ. ಬೆಂಗಳೂರಿನಲ್ಲಿ ಮೂವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಮಂಗಳೂರಿಗೆ ಕರೆತಂದಿದ್ದಾರೆ. ಮೊಬೈಲ್ ನೆಟ್‌ವರ್ಕ್ ಆಧರಿಸಿ ಈ ಕಾರ್ಯಾಚರಣೆ ನಡೆದಿದೆ ಎಂದೂ ಹೇಳಲಾಗುತ್ತಿದೆ. ಆದರೆ ಈ ಪ್ರಕರಣಕ್ಕೆ ಸಂಬಂಧಿಸಿ ಹೊಸದಾಗಿ ಯಾರನ್ನೂ ಬಂಧಿಸಲಾಗಿಲ್ಲ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರು ಸ್ಪಷ್ಟನೆ ನೀಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಂಧಿತರಾಗಿರುವ ಬೆಳ್ಳಾರೆಯ ಶಫೀಕ್ ಹಾಗೂ ಸವಣೂರಿನ ಝಾಕಿರ್ ಎಂಬೀರ್ವರನ್ನು ನ್ಯಾಯಾಂಗ ಬಂಧನದಿಂದ ಕಸ್ಟಡಿಗೆ ಪಡೆದುಕೊಂಡಿರುವ ಪೊಲೀಸರು ವಿಚಾರಣೆ ತೀವ್ರಗೊಳಿಸಿದ್ದಾರೆ. ಬಂಧಿತ ಶಫೀಕ್ ಮತ್ತು ಝಾಕಿರ್ ನೀಡಿರುವ ಮಾಹಿತಿ ಆಧರಿಸಿ ಬೆಂಗಳೂರಿನಲ್ಲಿ ಇರ್ಫಾನ್ ಹಾಗೂ ಅಲ್ತಾಫ್‌ ರನ್ನು ಪೊಲೀಸರ ತಂಡ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದೆ ಎಂದು ಸುದ್ದಿಯಾಗಿದೆ.

ಗಡಿ ಪ್ರದೇಶದ 32 ಕಡೆ ಸಿಸಿ ಕ್ಯಾಮರಾ ; ಅನುದಾನ ಮಂಜೂರು ಅಂಗಾರ

ಪುತ್ತೂರು:ಬೆಳ್ಳಾರೆಯಲ್ಲಿ ನಡೆದಿರುವ ಬಿಜೆಪಿ ಜಿಲ್ಲಾ ಯುವಮೋರ್ಚಾ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ನೆಟ್ಟಾರು ಅವರ ಹತ್ಯೆ ಹಿನ್ನೆಲೆಯಲ್ಲಿ, ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳು ಆಗದಂತೆ ಕರ್ನಾಟಕ ಹಾಗೂ ಕೇರಳದ ಗಡಿ ಪ್ರದೇಶದ 32 ಕಡೆಗಳಲ್ಲಿ ಸಿಸಿ ಟಿವಿ ಅಳವಡಿಸಲು ಮುಖ್ಯಮಂತ್ರಿ ಅನುದಾನ ಮಂಜೂರು ಮಾಡಿದ್ದಾರೆ ಎಂದು ಮೀನುಗಾರಿಕಾ ಸಚಿವ ಎಸ್. ಅಂಗಾರ ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಇಂತಹ ಪ್ರಕರಣಗಳಲ್ಲಿ ಎಚ್ಚರಿಕೆ ಕ್ರಮ ತೆಗೆದುಕೊಳ್ಳುವ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಆ ಪ್ರಕಾರ ಎಲ್ಲವೂ ಯಶಸ್ವಿಯಾಗಿ ನಡೆಯುತ್ತಿದೆ ಎಂದು ಎಸ್.ಅಂಗಾರ ಹೇಳಿದರು. ಕಾರ್ಯಕರ್ತರ ಆಕ್ರೋಶ ಸಹಜ. ಈಗ ಎಲ್ಲವೂ ಉಪಶಮನವಾಗಿದೆ. ಕಾರ್ಯಕರ್ತರಿಗೆ ಏನೂ ಸಮಸ್ಯೆಯಿಲ್ಲ. ಕೆಲವರು ಪಕ್ಷದ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ. ಆದರೆ ರಾಜೀನಾಮೆಯೇ ಪರಿಹಾರವಲ್ಲ. ಕೊಲೆಗಡುಕರಿಗೆ ಶಿಕ್ಷೆ ವಿಧಿಸುವುದೇ ನಿಜವಾದ ಪರಿಹಾರ ಎಂದು ಅವರು ತಿಳಿಸಿದರು.

ಆ.5ರೊಳಗೆ ಆರೋಪಿಗಳ ಬಂಧನವಾಗದಿದ್ದರೆ ಧರಣಿ-ಹೆಚ್‌ಡಿಕೆ

ಮಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ಹತ್ಯೆ ನಡೆದ ಪ್ರವೀಣ್ ನೆಟ್ಟಾರು, ಮಸೂದ್ ಮತ್ತು ಫಾಝಿಲ್ ಹತ್ಯೆ ಪ್ರಕರಣಗಳ ಆರೋಪಿಗಳನ್ನು ಆ.5ರೊಳಗೆ ಬಂಧಿಸದಿದ್ದಲ್ಲಿ ಮಂಗಳೂರಿನಲ್ಲಿ ಆ.೬ರಂದು ನಾನೇ ಬಂದು ಧರಣಿ ಸತ್ಯಾಗ್ರಹ ನಡೆಸುವುದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಈ ರೀತಿಯ ಹತ್ಯೆ ಪ್ರಕರಣದಲ್ಲಿ ಯಾವುದೇ ರಾಜಕೀಯ ಪಕ್ಷದ ಮುಖಂಡರು, ಅವರ ಮಕ್ಕಳು ಬಲಿಯಾಗುತ್ತಿಲ್ಲ. ಬದಲಾಗಿ ಕಾರ್ಮಿಕರು, ಜನ ಸಾಮಾನ್ಯರ ಮಕ್ಕಳು ಬಲಿಯಾಗುತ್ತಿದ್ದಾರೆ.ಹಿಂದೆ ನಡೆದ ಹತ್ಯೆಗಳಲ್ಲಿ ಶಿಕ್ಷೆ ಆಗಿರುವ ಪ್ರಮಾಣ ಕನಿಷ್ಟ.ಈ ಬಗ್ಗೆ ಸಂತ್ರಸ್ತರಿಗೆ ಇಲ್ಲಿನ ಎರಡೂ ಪ್ರಬಲ ರಾಷ್ಟ್ರೀಯ ಪಕ್ಷಗಳ ಬಗ್ಗೆ ಅಸಮಾಧಾನವಿದೆ.ಅದಕ್ಕಾಗಿ ನೈಜ ಆರೋಪಿಗಳನ್ನು ಬಂಽಸಲು ಅವರು ಆಗ್ರಹಿಸುತ್ತಿದ್ದಾರೆ.ನಾನು ಕಾಟಾಚಾರಕ್ಕೆ ಯಾರನ್ನೋ ಬಂಽಸಿ ಎನ್ನುವುದಿಲ್ಲ.ನೈಜ ಆರೋಪಿಗಳನ್ನು ಬಂಧಿಸಲು ಆಗ್ರಹಿಸುತ್ತೇನೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here