ಶ್ರೀಧಾಮ ಮಾಣಿಲದಲ್ಲಿ ಸಾಮೂಹಿಕ ಶ್ರೀಲಕ್ಷ್ಮೀ ಪೂಜೆ-ಶ್ರೀವರಮಹಾಲಕ್ಷ್ಮೀ ವೃತಾಚರಣೆ ಸಂಪನ್ನ

0

  • ಅವದೂತರ ಬೆಳವಣಿಗೆಯಿಂದ ದೇಶಕ್ಕೆ ಸುಭೀಕ್ಷೆ: ಮಾಣಿಲ ಶ್ರೀ
  • ಲಕ್ಷಾಂತರ ಜನರಿಗೆ ಸಂಸ್ಕಾರ ಕಲಿಸಿದ ಕ್ಷೇತ್ರ ಶ್ರೀಧಾಮ: ನಾಗರಾಜ ಶೆಟ್ಟಿ
  • ಮೌಡ್ಯತೆಯನ್ನು ದೂರಮಾಡಿ ಸಂಸ್ಕಾರವನ್ನು ಕಲಿಸುವ ಕೆಲಸ ಕ್ಷೇತ್ರದಿಂದ ಆಗಿದೆ: ಭಾಸ್ಕರ್ ಶೆಟ್ಟಿ ಪುಣೆ
  • ಕ್ಷೇತ್ರದ ಪರಿಸರ ತುಂಬಾ ಸಂತಸ ತಂದಿದೆ: ಕಿಶೋರ್ ಅವರ್ ಶೇಖರ್
  • ಮಾಣಿಲದ ಹೆಸರನ್ನು ಹತ್ತೂರಿಗೆ ಪಸರಿಸಿದ ಕೀರ್ತಿ ಶ್ರೀಗಳದ್ದು: ಸುಬ್ರಹ್ಮಣ್ಯ ಪ್ರಸಾದ್

ವಿಟ್ಲ: ಮಾಣಿಲ ಮಾಣಿಕ್ಯದ ನೆಲೆಯಾಗಿದ್ದು, ನಿತ್ಯಾನಂದರು ದೃಷ್ಟಿ ಇತ್ತ ಪುಣ್ಯದ ಕ್ಷೇತ್ರವಿದು. ನಿತ್ಯಾನಂದರ ಮಹಿಮೆ ಅಪಾರ. ನಾವುಗಳು ನಿತ್ಯಾನಂದರ ಮಹಿಮೆಯನ್ನು ಅರ್ಥೈಸುವ ಅಗತ್ಯವಿದೆ. ವಿಶ್ವದ ಕಲ್ಯಾಣ ಬಯಸಿ ವಿಶ್ವಮಾನ್ಯವಾಗುವುದೇ ನಮ್ಮ ಉದ್ದೇಶ. ಕ್ಷೇತ್ರ ಸಮಾಜಮುಖಿ ಚಿಂತನೆಯಲ್ಲಿ ಮುನ್ನಡೆಯುತ್ತಿದೆ. ಅವದೂತರ ಬೆಳವಣಿಗೆಯಿಂದ ದೇಶಕ್ಕೆ ಸುಭೀಕ್ಷೆ ಎಂದು ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು. ಅವರು ಶ್ರೀಧಾಮ ಮಾಣಿಲ ಶ್ರೀಮಹಾಲಕ್ಷ್ಮೀ ಕ್ಷೇತ್ರದಲ್ಲಿ ೪೮ದಿನಗಳ ವರೆಗೆ ನಡೆದ ಸಾಮೂಹಿಕ ಶ್ರೀಲಕ್ಷ್ಮೀ ಪೂಜೆಯ ಅಂತಿಮ ದಿನವಾದ ಆ.5ರಂದು ನಡೆದ ಶ್ರೀ ವರಮಹಾಲಕ್ಷ್ಮೀ ವೃತಾಚರಣೆಯ ಸಂದರ್ಭದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.

ಲಕ್ಷಾಂತರ ಜನರಿಗೆ ಸಂಸ್ಕಾರ ಕಲಿಸಿದ ಕ್ಷೇತ್ರ ಶ್ರೀಧಾಮ: ಮಾಜಿ ಸಚಿವ ಬೈಲು ಮೇಗಿನ ಮನೆ ನಾಗರಾಜ ಶೆಟ್ಟಿ ಮಾತನಾಡಿ ವಿಶೇಷ ಶಕ್ತಿಯ ಸೆಲೆ ಶ್ರೀಗಳು.ತಾಯಿಯ ಪ್ರೀತಿಯನ್ನು ದೇವಿಯಲ್ಲಿ ಕಂಡ ಮಹಾನ್ ಚಿಂತಕ ಮಾಣಿಲ ಶ್ರೀಗಳು. ಲಕ್ಷಾಂತರ ಜನರಿಗೆ ಸಂಸ್ಕಾರ ಕಲಿಸಿದ ಕ್ಷೇತ್ರ ಶ್ರೀಧಾಮವಾಗಿದೆ. ಸನಾತನ ಹಿಂದೂ ಧರ್ಮದ ಉಳಿವಿಗೆ ಶ್ರೀಗಳ ಪಾತ್ರ ಅಪಾರ. ಶ್ರೀಗಳ ಯೋಜನೆ, ಯೋಚನೆಗೆ ನೀರೆರೆಯುವ ಕೆಲಸ ನಮ್ಮಿಂದಲೇ ಆಗಬೇಕಾಗಿದೆ.


ಮೌಢ್ಯತೆಯನ್ನು ದೂರಮಾಡಿ ಸಂಸ್ಕಾರವನ್ನು ಕಲಿಸುವ ಕೆಲಸ ಕ್ಷೇತ್ರದಿಂದ ಆಗಿದೆ: ಟ್ರಸ್ಟಿ ಭಾಸ್ಕರ್ ಶೆಟ್ಟಿ ಪುಣೆರವರು ಮಾತನಾಡಿ ಬಾಲ ಭೋಜನ ಹಾಗೂ ಒಂದು ಮಂಡಲ ನಡೆದ ಸಾಮೂಹಿಕ ಲಕ್ಷ್ಮೀ ಪೂಜೆ ಜಿಲ್ಲೆಯಲ್ಲೇ ಮಾದರಿಯಾಗಿರುವ ಕಾರ್ಯಕ್ರಮವಾಗಿದೆ. ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಕ್ಷೇತ್ರ ಶ್ರೀ ಧಾಮವಾಗಿದೆ. ತಾಯಿ ಮಹಾಲಕ್ಷ್ಮೀ ನಂಬಿದವರಿಗೆ ಎಂದೂ ಸೋಲಿಲ್ಲ ಎನ್ನುವುದಕ್ಕೆ ನಾನೇ ಸ್ಪಷ್ಟ ನಿದರ್ಶನ. ಮೌಢ್ಯತೆಯನ್ನು ದೂರಮಾಡಿ ಸಂಸ್ಕಾರವನ್ನು ಕಲಿಸುವ ಕೆಲಸ ಕ್ಷೇತ್ರದಿಂದ ಆಗಿದೆ. ಸಮಾನತೆಯನ್ನು ಎಲ್ಲರಲ್ಲಿಯೂ ಹುಟ್ಟುಹಾಕುವ ನಿಟ್ಟಿನಲ್ಲಿ ಶ್ರೀಧಾಮದ ಸ್ಥಾಪನೆಯಾಗಿದೆ ಎಂದರು.

ಕ್ಷೇತ್ರದ ಪರಿಸರ ಸಂತಸ ತಂದಿದೆ: ಮುಂಬೈಯ ಉದ್ಯಮಿ ಕಿಶೋರ್ ಅವರ್ ಶೇಕರ್ ಮಾತನಾಡಿ ನಾನು ಮಹಾರಾಷ್ಟ್ರ ದಿಂದ ಬಂದಿರುವೆ. ಕ್ಷೇತ್ರದ ಮಹಿಮೆ ಅಪಾರವಾಗಿದೆ. ಕ್ಷೇತ್ರದ ಬಗ್ಗೆ ತಿಳಿದು ನೋಡಬೇಕೆಂಬ ಹಂಬಲದಲ್ಲಿ ಇಂದಿಲ್ಲಿಗೆ ಬಂದಿದ್ದೇನೆ. ಕ್ಷೇತ್ರದ ಪರಿಸರ ನನಗೆ ತುಂಬಾ ಸಂತಸ ತಂದಿದೆ. ದೇವರನ್ನು ಒಲಿಸಿಕೊಳ್ಳಲು ಒಂದು ಪುಣ್ಯ ಕ್ಷೇತ್ರವಾಗಿದೆ ಎಂದರು.

ಮಾಣಿಲದ ಹೆಸರನ್ನು ಹತ್ತೂರಿಗೆ ಪಸರಿಸಿದ ಕೀರ್ತಿ ಶ್ರೀಗಳದ್ದು: ಧರ್ಮಸ್ಥಳದ ಅನ್ನಚತ್ರದ ವ್ಯವಸ್ಥಾಪಕ ಸುಬ್ರಹ್ಮಣ್ಯ ಪ್ರಸಾದ್ ಮಾತನಾಡಿ ಶ್ರೀಗಳ ಪ್ರಾರ್ಥನೆ ದೇಶಕ್ಕಾಗಿ ಆಗಿದೆ. ಕ್ಷೇತ್ರಕ್ಕೂ ಧರ್ಮಸ್ಥಳಕ್ಕೂ ಅವಿನಾಭಾವ ಸಂಬಂಧವಿದೆ. ಭಜನಾ ಕಮ್ಮಟದಲ್ಲಿ ಪ್ರೇರಕರಾಗಿ ಶ್ರೀಗಳ ಪಾತ್ರ ಅಪಾರ. ಮಾಣಿಲದ ಹೆಸರನ್ನು ಹತ್ತೂರಿಗೆ ಪಸರಿಸಿದ ಕೀರ್ತಿ ಶ್ರೀಗಳದ್ದು, ಅಮೃತತ್ವ ನೀಡುವ ಗುರುಗಳ ಶಕ್ತಿ ಅಪಾರ ಎಂದರು.

ಪುತ್ತೂರು ಶಾಸಕ ಸಂಜೀವ ಮಠಂದೂರು, ದಿವಾಕರ ಶೆಟ್ಟಿ ಕೊಡವೂರು, ಧರ್ಮಸ್ಥಳದ ಪ್ರತಿನಿಧಿ ಸುರೇಂದ್ರ ಜೈನ್, ಬೆಂಗಳೂರಿನ ಉದ್ಯಮಿ ದಿವಾಕರ ಮೂಲ್ಯ, ಉಮೇಶ್ ಪೂಂಜ, ಮುಂಬೈ ಕುಲಾಲ ಸಂಘದ ಅಧ್ಯಕ್ಷ ದೇವದಾಸ್ ಕುಲಾಲ್, ಮುಂಬೈಯ ಉದ್ಯಮಿ ಗಿರೀಶ್ ಸಾಲ್ಯಾನ್, ನಾವೂರು ಗ್ರಾ.ಪಂ ಅಧ್ಯಕ್ಷ ಉಮೇಶ್ ನಾವೂರು, ಗಣೇಶ್ ಶೆಟ್ಟಿ, ನಾಗೇಶ್ ಹೆಗ್ಡೆ, ಸಂಜಯ್ ಸುಬೇದಾರ್ ಮುಂಬೈ, ಹರೀಶ್ ಕೊಟ್ಟಾರಿ, ಉಮೇಶ್ ಮೂಲ್ಯ ಬೆಂಗಳೂರು, ಬೆಂಗಳೂರಿನ ಉದ್ಯಮಿ ಸಂತೋಷ್, ಜಿತೇಂದ್ರ ಕೊಟ್ಟಾರಿ, ರಘು ಮುಂಬೈ, ಸ್ವರದಾ ಮುಂಬೈ, ರೇಖಾ ದೇಸಾಯಿ ಬೆಳಗಾವಿ, ಮಾಣಿಲ ಗ್ರಾ.ಪಂ. ಅಧ್ಯಕ್ಷೆ ವನಿತಾ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿಟ್ಲದ ಪುಷ್ಪಕ್ ಹೆಲ್ತ್ ಕ್ಲಿನಿಕ್‌ನ ವೈದ್ಯರಾದ ವಿ.ಕೆ.ಹೆಗ್ಡೆ ವಿಟ್ಲ ಹಾಗೂ ಮುಂಬೈನ ರೇಖಾ ದೇಸಾಯಿ ಬೆಳಗಾವಿರವರನ್ನು ಈ ಸಂದರ್ಭದಲ್ಲಿ ಸ್ವಾಮೀಜಿ ಹಾಗೂ ಅತಿಥಿಗಳು ಸನ್ಮಾನಿಸಿದರು. ಪುರುಷೋತ್ತಮ ಚೇಂಡ್ಲ ಹಾಗೂ ಟ್ರಸ್ಟಿ ತಾರನಾಥ ಕೊಟ್ಟಾರಿರವರು ಸನ್ಮಾನಿತರ ಪತ್ರ ವಾಚಿಸಿದರು.

ಟ್ರಸ್ಟಿ ತಾರನಾಥ ಕೊಟ್ಟಾರಿಯವರು ಸ್ವಾಗತಿಸಿ ಪ್ರಾಸ್ತಾವಿಕ ಮಾತನ್ನಾಡಿದರು. ಸಮೀಕ್ಷ, ನಿರೀಕ್ಷ, ಶ್ರೇಯ ಪ್ರಾರ್ಥಿಸಿದರು. ಕಿಶೋರ್ ಮಾರ್ವಾಡ್ ದಂಪತಿಗಳು ಸ್ವಾಮೀಜಿಗೆ ಫಲಪುಷ್ಪ ನೀಡಿದರು. ಎಚ್ಕೆ ನಯನಾಡ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ವೈಧಿಕ ಕಾರ್ಯಕ್ರಮಗಳು: ಕ್ಷೇತ್ರದಲ್ಲಿ ಬೆಳಗ್ಗೆ ದ್ವಾದಶ ನಾಳಿಕೇರ ಗಣಪತಿ ಹೋಮ, ಪಂಚಾಮೃತ ಅಭಿಷೇಕ, ಕಲ್ಪೋಕ್ತ ಲಕ್ಷ್ಮೀ ಪೂಜೆ, ಶ್ರೀಗುರುಪೂಜೆ, ಶ್ರೀನಾಗದೇವರಿಗೆ ಕ್ಷೀರಾಭಿಷೇಕ, ಗೋಮಾತಾ ಪೂಜೆ, ಚಂಡಿಕಾಹೋಮ, ಕನಕಧಾರಾ ಯಾಗ, ಲಕ್ಷ್ಮೀ ನಾರಾಯಣ ಹೃದಯ ಹೋಮ, ಸಾಮೂಹಿಕ ಕುಂಕುಮಾರ್ಚನೆ, ಶ್ರೀವರಮಹಾಲಕ್ಷ್ಮೀ ಪೂಜೆ, ವಸೋರ್ಧಾರೆ, ಯಾಗದ ಪೂರ್ಣಾಹುತಿ ನಡೆಯಿತು. ಬಳಿಕ ಮಹಾಮಂಗಳಾರತಿ, ಪ್ರಸಾದ ವಿತರಣೆ, ಸಾಮೂಹಿಕ ವಾಯನದಾನ ನಡೆದು ಅನ್ನಸಂತರ್ಪಣೆ ನಡೆಯಿತು. ಸಾಯಂಕಾಲ ಬ್ರಹ್ಮಶ್ರೀ ಅಪ್ಪಣ್ಣ ಆಚಾರ್ಯರವರ ನೇತೃತ್ವದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ನಡೆಯಿತು. 

LEAVE A REPLY

Please enter your comment!
Please enter your name here