ಫಿಲೋಮಿನಾ ಪ್ರೌಢಶಾಲೆಯಲ್ಲಿ ಪ್ರೇರಕಿ ಫಿಲೋಮಿನಾ ಮಾತೆಯ ಹಬ್ಬಾಚರಣೆ

0

ಪುತ್ತೂರು: ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ದರ್ಬೆ ಫಿಲೋನಗರದ ಸಂತ ಫಿಲೋಮಿನಾ ಪ್ರೌಢಶಾಲೆಯಲ್ಲಿ ಶಾಲಾ ಪ್ರೇರಕಿ ಫಿಲೋಮಿನಾ ಮಾತೆಯ ಹಬ್ಬವನ್ನು ಆಚರಿಸಲಾಯಿತು.

ಮುಖ್ಯ ಅತಿಥಿ ಧರ್ಮಗುರು  ಜೇಸನ್ ಲೋಬೊ ಮಾತನಾಡಿ, ವಿದ್ಯಾರ್ಥಿಗಳು ಎಲ್ಲರನ್ನು ಗೌರವಿಸುವ ಮನುಷ್ಯರಾಗಬೇಕು ಮತ್ತು ಎಲ್ಲೇ ಇದ್ದರೂ ಏನೇ ಸಾಧನೆ ಮಾಡಿದರು ಎಲ್ಲರನ್ನು ವಿನಮ್ರತೆಯಿಂದ ಕಾಣಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಲಾರೆನ್ಸ್ ಮಸ್ಕರೇನಸ್ ಮಾತನಾಡಿ, ಈ ಹಬ್ಬವನ್ನು ದೇವರಿಗೆ ಕೃತಜ್ಞತೆ ಹೇಳುವ ಸಲುವಾಗಿ ಆಚರಿಸಲಾಗುತ್ತದೆ. ಎಲ್ಲರೂ ದೇವರ ಮಕ್ಕಳಾಗಿ ಬೆಳೆಯಬೇಕು ಮತ್ತು ಹಬ್ಬ ಆಚರಣೆಯಿಂದ ಸಂತೋಷ ತಂದು ಕೊಡುತ್ತದೆ ಎಂದು ಹೇಳಿ ಹಬ್ಬದ ಶುಭ ಕೋರಿದರು.

ಸಂತ ಫಿಲೋಮಿನಾ ಮಾತೆಯ ಕುರಿತು ಶಿಕ್ಷಕಿ ನಮಿತಾ ಮಾತನಾಡಿದರು. ಆಟೋಟ ಸ್ಪರ್ಧೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಕ ನರೇಶ್ ಲೋಬೊ ಮತ್ತು ದೀಪ್ತಿ ನೇತೃತ್ವದಲ್ಲಿ ಗೌರವಿಸಲಾಯಿತು.

ಫಿಲೋಮಿನಾ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಕಾರ್ಮಿನ್ ಪಾಯಿಸ್, ಮಾಯಿದೆ ದೇವುಸ್ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಮೌರಿಸ್ ಮಸ್ಕರೇನಸ್, ಫಿಲೋಮಿನಾ ಪ್ರೌಢಶಾಲೆಯ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ಮೌರಿಸ್ ಕುಟೀನ್ಹ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ  ಜಗನ್ನಿವಾಸ್ ರಾವ್ ಮತ್ತು ಸಂತ ಫಿಲೋಮಿನಾ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಸಿಸ್ಟರ್ ಲೋರ ಪಾಯಿಸ್ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

ಶಾಲಾ ಮಂತ್ರಿಮಂಡಲದ ವಿದ್ಯಾರ್ಥಿ ನಾಯಕ ನಿಕ್ಷೇಪ್ ಕೃಷ್ಣ ಅತಿಥಿಗಳನ್ನು ಸ್ವಾಗತಿಸಿ, ಸಂತ ಫಿಲೋಮಿನಾ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ನಾಯಕ ಶಾನ್ ಜೋಸೆಫ್ ಲೋಬೊ ವಂದಿಸಿದರು. ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ನಿಶಾ ಹಾಗೂ ನೌಶಿಯರವರು ನಿರೂಪಿಸಿದರು. ನಂತರ ಪ್ರಾಥಮಿಕ ಶಾಲಾ ಮಕ್ಕಳು ಮತ್ತು ಪ್ರೌಢಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.

ಹಬ್ಬದ ಪ್ರಯುಕ್ತ ವಿದ್ಯಾರ್ಥಿಗಳಿಗೆ ಸಿಹಿತಿಂಡಿಯನ್ನು ಹಂಚಲಾಯಿತು. ಶಾಲಾ ಶಿಕ್ಷಕರು ಆಡಳಿತ ಸಿಬ್ಬಂದಿ ವರ್ಗ ಸಹಕರಿಸಿದರು.

ಸನ್ಮಾನ..
ಶಾಲಾ ಹಿರಿಯ ವಿದ್ಯಾರ್ಥಿ ಹಾಗೂ ಧರ್ಮಗುರುವಾಗಿರುವ ಜೇಸನ್ ಲೋಬೊರವರನ್ನು ಈ ಸಂದರ್ಭದಲ್ಲಿ ಗುರುತಿಸಿ ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here