ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ರಸ್ತೆಗೆ ಡಿಪಿಆರ್ ಹಿನ್ನೆಲೆ  ನಗರಸಭೆ ವ್ಯಾಪ್ತಿಯಲ್ಲಿ ಹಾದು ಹೋಗುವ ರಸ್ತೆ ಮಾಹಿತಿಗಾಗಿ ಪ್ರಾಧಿಕಾರಕ್ಕೆ ಪತ್ರ: ನಗರಸಭೆ ಸಾಮಾನ್ಯ ಸಭೆ

0

  • ಟೆಂಡರ್ ಅವಧಿಯಲ್ಲಿ ಕಾಮಗಾರಿ ಮಾಡದ ಗುತ್ತಿಗೆದಾರರನ್ನು ಬ್ಲ್ಯಾಕ್ ಲಿಸ್ಟ್‌ಗೆ ಸೇರಿಸಿ
  • ತುರ್ತು ಕಾರ್ಯ ಸಂದರ್ಭ ಸಂವಹನಕ್ಕೆ ಸಿಬ್ಬಂದಿಗಳಿಗೆ ವಾಕಿಟಾಕಿ
  • ಜಂಗಲ್ ಕಟ್ಟಿಂಗ್ ಅನುದಾನ ಹೆಚ್ಚಿಸಿ

ಪುತ್ತೂರು:ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯು ಚತುಷ್ಪಥ ರಸ್ತೆಯಾಗಿ ಪರಿವರ್ತಿಸುವ ಬಗ್ಗೆ ಡಿಪಿಆರ್ ತಯಾರಿಸಿ ಅನುಮೋದನೆಯ ಹಂತದಲ್ಲಿರುವ ಹಿನ್ನೆಲೆಯಲ್ಲಿ ಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿ ಹಾದು ಹೋಗುವ ರಸ್ತೆಗೆ ಸಂಬಂಽಸಿ ಮಾಹಿತಿ ನೀಡುವಂತೆ ಪ್ರಾಽಕಾರಕ್ಕೆ ಪತ್ರ ಬರೆಯುವ ಕುರಿತು ನಗರಸಭೆ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ಅವರ ಅಧ್ಯಕ್ಷತೆಯಲ್ಲಿ ಆ.12ರಂದು ಸಾಮಾನ್ಯ ಸಭೆ ನಗರಸಭೆ ಸಭಾಂಗಣದಲ್ಲಿ ನಡೆಯಿತು. ಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ರಸ್ತೆಗೆ ಸಂಬಂಧಿಸಿ, ರಸ್ತೆ ಅಂಚಿನಲ್ಲಿರುವ ಜಮೀನುಗಳ ಸ್ವಾಧೀನತೆ ಮಾಹಿತಿಯಿಲ್ಲ.ಈ ನಡುವೆ ರಸ್ತೆಯ ಇಕ್ಕೆಲಗಳಲ್ಲಿರುವ ಜಮೀನುಗಳಲ್ಲಿ ಏಕ ವಿನ್ಯಾಸ ಅನುಮೋದನೆ, ಕಟ್ಟಡ ಹಾಗೂ ಇತರ ನಿರ್ಮಾಣಗಳ ಪರವಾನಿಗೆ ಮತ್ತು ಖಾತೆ ನೀಡುವ ವಿಚಾರವಾಗಿ ಮುಂದೆ ರಸ್ತೆ ಅಗಲೀಕರಣ ಸಂದರ್ಭದಲ್ಲಿ ಸಾರ್ವಜನಿಕರಿಗೆ ಸಮಸ್ಯೆಗಳಾಗುವ ಸಾಧ್ಯತೆ ಇದೆ. ಹಾಗಾಗಿ ಸಂಬಂಧಿಸಿದ ಇಲಾಖೆಗೆ ಪತ್ರ ಬರೆದು ಚತುಷ್ಪಥ ರಸ್ತೆಯಾಗಿ ಪರಿವರ್ತಿಸುವ ಬಗ್ಗೆ ರಸ್ತೆ ಅಗಲೀಕರಣದ ಮಾಹಿತಿಯನ್ನು ನೀಡುವಂತೆ ಪತ್ರ ಬರೆಯುವ ಕುರಿತು ಸದಸ್ಯ ಭಾಮಿ ಅಶೋಕ್ ಶೆಣೈ ಅವರ ಮನವಿಯಂತೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಸದಸ್ಯ ಶಕ್ತಿ ಸಿನ್ಹ ಅವರು ಮಾತನಾಡಿ ಈ ಕುರಿತು ಪ್ರಾಧಿಕಾರದವರೇ ನಮಗೆ ಮಾಹಿತಿ ನೀಡಬೇಕು. ನಾವಾಗಿ ಅವರಲ್ಲಿ ಕೇಳುವ ಅವಶ್ಯಕತೆ ಇಲ್ಲ ಎಂದರು. ಉತ್ತರಿಸಿದ ಅಧ್ಯಕ್ಷರು ಈಗಾಗಲೇ ಕಟ್ಟಡ ಅನುಮತಿ ಸಂದರ್ಭದಲ್ಲಿ ಒಂದು ಬಾರಿ ರಸ್ತೆ ಮಧ್ಯ ಭಾಗದಿಂದ 41 ಮೀಟರ್ ಸುತ್ತಮುತ್ತ ಯಾವುದೇ ಕಟ್ಟಡ ಕಟ್ಟಬಾರದೆಂದು ಸರ್ಕ್ಯೂಲರ್ ಇದೆ. ಎನ್‌ಒಸಿ ಕೊಡುವಾಗ ವರ್ಗ ಜಾಗದಿಂದ 6 ಮೀಟರ್ ಬಿಡುವ ಕುರಿತು ಇಲಾಖೆಯಿಂದ ತಿಳಿಸುತ್ತಿದ್ದಾರೆ. ಈ ರೀತಿಯ ಗೊಂದಲ ಇರಬಾರದು ಎಂಬ ಉದ್ದೇಶದಿಂದ ಈ ಅಜೆಂಡಾ ಇಡಲಾಗಿದೆ.ಹಾಗಾಗಿ ಇಲಾಖೆ ನಮಗೆ ಸರಿಯಾದ ಮಾಹಿತಿ ನೀಡಬೇಕು.ಒಂದು ವೇಳೆ ಮಾಣಿ, ಸಂಪಾಜೆ ಚತುಷ್ಪಥ ರಸ್ತೆ ಮಾಡುವ ಚಿಂತನೆ ಇದ್ದರೆ.ನಗರಸಭೆ ವ್ಯಾಪ್ತಿಯಲ್ಲಿನ ರಸ್ತೆಯನ್ನು ಆದಷ್ಟು ಬೇಗ ಮಾಡಬೇಕು.ಯಾಕೆಂದರೆ ಇಲ್ಲೊಂದಷ್ಟು ವಾಹನ ದಟ್ಟಣೆ ನಿಯಂತ್ರಿಸಬಹುದು ಎಂದು ನಮ್ಮ ಅಭಿಪ್ರಾಯ.ಇದನ್ನು ಕೂಡಾ ಪತ್ರದಲ್ಲಿ ದಾಖಲಿಸಿ ಇಲಾಖೆಗೆ ಕಳುಹಿಸಿದೆ ಎಂದರು.

ಗುತ್ತಿಗೆದಾರರನ್ನು ಬ್ಲ್ಯಾಕ್‌ಲಿಸ್ಟ್‌ಗೆ ಸೇರಿಸಿ: ಟೆಂಡರ್ ಅವಧಿ ಮುಗಿದರೂ ಕಾಮಗಾರಿ ಮುಗಿಸದ ಗುತ್ತಿಗೆದಾರರನ್ನು ಬ್ಲ್ಯಾಕ್ ಲಿಸ್ಟ್‌ಗೆ ಸೇರಿಸುವಂತೆ ಶಕ್ತಿ ಸಿನ್ಹ ಅವರು ಪ್ರಸ್ತಾಪಿಸಿದರು.ನನ್ನ ವಾರ್ಡ್‌ನಲ್ಲೇ ಅನೇಕ ಕಾಮಗಾರಿ ಪೆಂಡಿಂಗ್ ಆಗಿದೆ ಎಂದವರು ಹೇಳಿದಾಗ ಉತ್ತರಿಸಿದ ಅಧ್ಯಕ್ಷರು, ನೀವು ಪತ್ರದಲ್ಲಿ ಬರೆದು ಕೊಡಿ.ನಾವು ಕ್ರಮ ಕೈಗೊಳ್ಳುತ್ತೇವೆ ಎಂದರು.

ನಗರಸಭೆ ಅಧಿಕಾರಿ, ಸಿಬ್ಬಂದಿಗಳಿಗ ವಾಕಿಟಾಕಿ: ನಗರಸಭೆಯಲ್ಲಿ ಕಾರ್ಯಕಾರಿ ಅಽಕಾರಿ ಸಿಬ್ಬಂದಿಗಳಿಗೆ ತುರ್ತು ಕಾರ್ಯಗಳ ಸಂದರ್ಭದಲ್ಲಿ ಸಕಲ ಸಿದ್ಧತೆಗಳಿಗೆ ಸಂವಹನ ಸಾಧಿಸುವುದಕ್ಕಾಗಿ ವಾಕಿ ಟಾಕಿಯ ಅವಶ್ಯಕತೆ ಇರುತ್ತದೆ.ಹಾಗಾಗಿ ನೂತನ ತಂತ್ರಜ್ಞಾನದದ ಸಿಮ್ ಬೇಸ್ಡ್ ವಾಕಿ ಟಾಕಿ ಲಭ್ಯವಿದ್ದು ಒಟ್ಟು 20 ವಾಕಿ ಟಾಕಿ ಸೆಟ್‌ಗಳನ್ನು ಖರೀದಿಸಲು ಅನುಮೋದನೆಗೆ ಸಭೆಯಲ್ಲಿ ಪ್ರಸ್ತಾಪಿಸಲಾಯಿತು.ಶಕ್ತಿ ಸಿನ್ಹ ಅವರು, ಮುಂದುವರಿದ ತಂತ್ರಜ್ಞಾನದಲ್ಲಿ ವಾಕಿಟಾಕಿ ಅಗತ್ಯ ಬೀಳುವುದಿಲ್ಲ ಎಂದರು. ಉತ್ತರಿಸಿದ ಅಧ್ಯಕ್ಷರು ಈ ಕುರಿತು ತಂತ್ರಜ್ಞಾನ ಬಳಸಿಯೇ ಹೊಸ ಮಾದರಿಯ ವಾಕಿಟಾಕಿ ಸೆಟ್ ಖರೀದಿಸಲಿದ್ದು ಕಂಪೆನಿಯವರು ಇಲ್ಲಿಗೆ ಬಂದು ಅದರ ಬಗ್ಗೆ ಮಾಹಿತಿ ನೀಡಲಿದ್ದಾರೆ ಎಂದರು.

ಆದಾಯ ಬರುವ ರೀತಿಯಲ್ಲಿ ಕಟ್ಟಡ ನಿರ್ಮಾಣ: ನಗರಸಭೆ ಉದ್ಯಮ ನಿಽಯಡಿ ಲಭ್ಯವಿರುವ ರೂ.36.50 ಲಕ್ಷದಲ್ಲಿ ಹೊಸದಾಗಿ ವಾಣಿಜ್ಯ ಕಟ್ಟಡ ನಿರ್ಮಾಣ ಮಾಡುವ ಕುರಿತು ಸಭೆಯಲ್ಲಿ ಪ್ರಸ್ತಾಪಿಸಲಾಯಿತು.ಅಧ್ಯಕ್ಷರು ಮಾತನಾಡಿ ನಗರಸಭೆ ಕಚೇರಿಯ ಎದುರಿನ ಕಟ್ಟಡದ ಮೇಲೆ ಮತ್ತೆ ಕಟ್ಟಡ ನಿರ್ಮಾಣ ಮಾಡಲಾಗುವುದು ಎಂದರು.ಶಕ್ತಿ ಸಿನ್ಹ ಅವರು ಮಾತನಾಡಿ ಶೀಟ್ ಹಾಕುವುದು ಬೇಡ ಎಂದರು.ಉತ್ತರಿಸಿದ ಅಧ್ಯಕ್ಷರು ಶೀಟ್ ಹಾಕದೆ ಆದಾಯ ಬರುವ ರೀತಿಯಲ್ಲಿ ಕಟ್ಟಡ ಕಟ್ಟಲಾಗುತ್ತದೆ ಎಂದರು.

ಜಂಗಲ್ ಕಟ್ಟಿಂಗ್ ಅನುದಾನ ಹೆಚ್ಚು ಮಾಡಿ: ನಗರಸಭೆಯ 31 ವಾರ್ಡ್‌ಗಳಲ್ಲಿ ಮಳೆಗಾಲದ ಸಂದರ್ಭ ರಸ್ತೆಯ ಬದಿಗಳಲ್ಲಿ ಬೆಳೆದಿರುವ ಪೊದೆಗಳು, ಹುಲ್ಲುಗಳನ್ನು ತೆರವು ಮಾಡುವ ಜಂಗಲ್ ಕಟ್ಟಿಂಗ್‌ಗೆ ಒಟ್ಟು 9 ಲಕ್ಷ ಇರಿಸಿದ್ದು, ಅದರಲ್ಲಿ 1 ರಿಂದ 10 ವಾರ್ಡ್‌ಗೆ ರೂ.4 ಲಕ್ಷ, 11 ರಿಂದ 20 ವಾರ್ಡ್‌ಗಳ ತನಕ ರೂ.4 ಲಕ್ಷ, 21ರಿಂದ 31ರ ತನಕ ರೂ.5 ಲಕ್ಷ ಅನುದಾನ ಇಡಲಾಗಿದೆ ಎಂದು ಪ್ರಸ್ತಾಪಿಸಲಾಯಿತು. ಭಾಮಿ ಅಶೋಕ್ ಶೆಣೈ ಅವರು ಈ ಅನುದಾನವನ್ನು ಹೆಚ್ಚು ಮಾಡುವಂತೆ ಪ್ರಸ್ತಾಪಿಸಿದರು. ಶಕ್ತಿ ಸಿನ್ಹ ಅವರು ಜಂಗಲ್ ಕಟ್ಟಿಂಗ್ ಮಾಡುವ ಗುತ್ತಿಗೆದಾರ ಸ್ಥಳೀಯ ಸದಸ್ಯರಿಗೆ ಮಾಹಿತಿ ನೀಡಬೇಕೆಂದು ಹೇಳಿದರು. ಉತ್ತರಿಸಿದ ಅಧ್ಯಕ್ಷರು ಯಾವುದೇ ಕಾಮಗಾರಿ ನಡೆಯುವ ಸಂದರ್ಭದಲ್ಲಿ ಸ್ಥಳೀಯ ಸದಸ್ಯರಿಗೆ ಗುತ್ತಿಗೆದಾರರು ಮಾಹಿತಿ ನೀಡುವಂತೆ ತಿಳಿಸಲಾಗಿದೆ.ಜೊತೆಗೆ ಜಂಗಲ್ ಕಟ್ಟಿಂಗ್ ಮುಖ್ಯರಸ್ತೆಯಲ್ಲಿ ನಗರಸಭೆಯ ಪೌರ ಕಾರ್ಮಿಕರೇ ಕೆಲಸ ನಿರ್ವಹಿಸಲಿದ್ದಾರೆ ಎಂದರು.ನಗರಸಭೆ ಪೌರಾಯುಕ್ತ ಮಧು ಎಸ್ ಮನೋಹರ್ ಅವರು ಪೌರ ಕಾರ್ಮಿಕರಿಗೆ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆ ಮಾಹಿತಿ ನೀಡಿದರು.

ನಗರಸಭೆ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ, ಸ್ಥಾಯಿ ಸಮಿತಿ ಅಧ್ಯಕ್ಷ ಬಾಲಚಂದ್ರ, ಸದ್ಯಸ್ಯರಾದ ಶಿವರಾಮ ಎಸ್, ವಸಂತ ಕಾರೆಕ್ಕಾಡು, ಗೌರಿ ಬನ್ನೂರು,ಕೆ.ಫಾತಿಮಾತ್ ಝೋರಾ, ಮೋಹಿನಿ ವಿಶ್ವನಾಥ ಗೌಡ, ಲೀಲಾವತಿ, ಸುಂದರ ಪೂಜಾರಿ ಬಡಾವು, ರೋಬಿನ್ ತಾವ್ರೋ, ಪ್ರೇಮ್ ಕುಮಾರ್, ಶಕ್ತಿ ಸಿನ್ಹ, ಪದ್ಮನಾಭ ನಾಯ್ಕ್, ಪಿ.ಜಿ.ಜಗನ್ನಿವಾಸ ರಾವ್, ಪ್ರೇಮಲತಾ ಜಿ, ಕೆ.ಸಂತೋಷ್ ಕುಮಾರ್, ನವೀನ್ ಕುಮಾರ್ ಎಂ, ಭಾಮಿ ಅಶೋಕ್ ಶೆಣೈ, ಯಶೋಧ ಹರೀಶ್ ಪೂಜಾರಿ, ದೀಕ್ಷಾ ಪೈ, ಇಂದಿರಾ ಪಿ, ಶಶಿಕಲಾ ಸಿ.ಎಸ್, ಮನೋಹರ್ ಕಲ್ಲಾರೆ, ರೋಹಿಣಿ ಕೇಶವಪೂಜಾರಿ, ಮಮತಾರಂಜನ್, ಬಿ.ಶೈಲಾ ಪೈ, ಇಸುಬು, ಮಹಮ್ಮದ್ ರಿಯಾಜ್ ಕೆ, ಬಿ.ಶೀನಪ್ಪ ನಾಯ್ಕ, ಪೂರ್ಣೀಮ ಕೋಡಿಯಡ್ಕ ಉಪಸ್ಥಿತರಿದ್ದರು. ನಗರಸಭೆ ಸಿಬ್ಬಂದಿ ರವೀಂದ್ರ ಅವರು ಸಭಾ ನಡಾವಳಿ ವಾಚಿಸಿದರು.

LEAVE A REPLY

Please enter your comment!
Please enter your name here