ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ವಿದ್ಯಾಭಾರತಿ ಈಜು ಸ್ಪರ್ಧೆಯಲ್ಲಿ ಕ್ಷೇತ್ರಿಯ ಮಟ್ಟಕ್ಕೆ ಆಯ್ಕೆ

0

ಪುತ್ತೂರು: ವಿದ್ಯಾಭಾರತಿ ಜಿಲ್ಲಾ ಮಟ್ಟದ ಈಜು ಮಟ್ಟದ ಸ್ಪರ್ಧೆಯು ಆ.8ರಂದು ಶಕ್ತಿ ವಸತಿಯುತ ಶಾಲೆ ಮಂಗಳೂರಿನಲ್ಲಿ ನಡೆಯಿತು. ಈ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ ಬಹುಮಾನಗಳನ್ನು ಪಡೆದು ಕ್ಷೇತ್ರಿಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

10ನೇ ವಿದ್ಯಾರ್ಥಿ ಧನ್ವಿತ್.ಕೆ ಇವರು (ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ದರ್ಬೆ ಶಾಖೆಯ ಮ್ಯಾನೇಜರ್ ಕೇಶವ ಹಾಗೂ ಮೀನಾಕ್ಷಿ ದಂಪತಿಗಳ ಪುತ್ರ): 200ಮೀ ಫ್ರೀ ಸ್ಟೈಲ್, 100ಮೀ ಫ್ರೀ ಸ್ಟೈಲ್, ಮತ್ತು 50ಮೀ ಫ್ರೀ ಸ್ಟೈಲ್ ನಲ್ಲಿ ಪ್ರಥಮ ಸ್ಥಾನದೊಂದಿಗೆ ಹುಡುಗರ ವಿಭಾಗದ ವೈಯಕ್ತಿಕ ಚಾಂಪಿಯನ್‌ಶಿಪ್ ಪಡೆದುಕೊಂಡಿದ್ದಾನೆ. 9ನೇ ವಿದ್ಯಾರ್ಥಿನಿ ಪ್ರತೀಕ್ಷ ಆಳ್ವ (ಇಂಜಿನಿಯರ್ ಪಡುಮಲೆ  ಚಂದ್ರಶೇಖರ್ ಆಳ್ವ ಮತ್ತು ಉಷಾ.ಸಿ.ಆಳ್ವರ ಪುತ್ರಿ):50ಮೀ ಫ್ರೀ ಸ್ಟೈಲ್, 100ಮೀ ಫ್ರೀ ಸ್ಟೈಲ್ ಮತ್ತು 50ಮೀ ಬಾಕ್ ಸ್ಟ್ರೇಕ್-ಪ್ರಥಮ ಸ್ಥಾನದೊಂದಿಗೆ ಹುಡುಗಿಯರ ವೈಯಕ್ತಿಕ ಚಾಂಪಿಯನ್‌ಶಿಪ್ ಪಡೆದುಕೊಂಡಿದ್ದಾರೆ.

10ನೇ ವಿದ್ಯಾರ್ಥಿನಿ ಶ್ರದ್ಧಾಲಕ್ಷ್ಮೀ(ರವಿಶಂಕರ್.ಡಿ ಮತ್ತು ಅನುಪಮ ಇವರ ಪುತ್ರಿ): 10ಮೀ ಬಾಕ್ ಸ್ಟ್ರೇಕ್-ಪ್ರಥಮ ಸ್ಥಾನ, 50ಮೀ ಬಾಕ್ ಸ್ಟ್ರೇಕ್-ದ್ವಿತೀಯ ಸ್ಥಾನ ಮತ್ತು 50ಮೀ ಫ್ರೀ ಸ್ಟೈಲ್‌ನಲ್ಲಿ ದ್ವಿತೀಯ ಸ್ಥಾನ, 6ನೇ ತರಗತಿ ವಿದ್ಯಾರ್ಥಿ ನಮನ್ ನಾಯ್ಕ (ಸಂದೀಪ್ ನಾಯ್ಕ ಮತ್ತು ನಮಿತಾನಾಯ್ಕ ಇವರ ಪುತ್ರ) 100ಮೀ ಬ್ರೆಸ್ಟ್ ಸ್ಟ್ರೋಕ್-ಪ್ರಥಮ ಸ್ಥಾನ, 9ನೇ ವಿದ್ಯಾರ್ಥಿ ವೇದ್‌ವೃತ್ ಭಂಡಾರಿ(ಚಿಲ್ಮೆತ್ತಾರು ಸಂತೋಷ್ ಭಂಡಾರಿ ಮತ್ತು ಮೀನಾಕ್ಷಿ ಭಂಡಾರಿ ಇವರ ಪುತ್ರ): 50ಮೀ ಬ್ರೆಸ್ಟ್ ಸ್ಟ್ರೋಕ್ -ದ್ವಿತೀಯ, 100ಮೀ ಬ್ರೆಸ್ಟ್ ಸ್ಟ್ರೋಕ್ -ದ್ವಿತೀಯ ಮತ್ತು 100ಮೀ ಬಾಕ್ ಸ್ಟ್ರೇಕ್ -ತೃತೀಯ ಸ್ಥಾನ ಮತ್ತು 7ನೇ ತರಗತಿ ವಿದ್ಯಾರ್ಥಿ ಮಹಿನ್.ಪಿ.ಆರ್(ಪರ್ಲಡ್ಕ  ರಾಕೇಶ್ ಕುಮಾರ್ ಮತ್ತು ಜ್ಯೋತಿ.ಎನ್.ಎಸ್ ಇವರ ಪುತ್ರ): 100ಮೀ ಫ್ರೀ ಸ್ಟೈಲ್- ತೃತೀಯ ಸ್ಥಾನ ಪಡೆದಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here