ಐನೂರರತ್ತ ಮುಖ‌ ಮಾಡಿದ ಹೊಸ ಅಡಿಕೆ ಧಾರಣೆ : ಚೌತಿ ಸಮಯದಲ್ಲಿ ಬೆಳೆಗಾರನಿಗೆ ಬಂಪರ್ ನಿರೀಕ್ಷೆ

0

ಮಂಗಳೂರು  ಮಾರುಕಟ್ಟೆಯಲ್ಲಿ ಹೊಸ ಅಡಿಕೆ ಧಾರಣೆಯ ಏರಿಕೆ ಮುಂದುವರಿದಿದ್ದು ಶೀಘ್ರ ಐನೂರರ ಗಡಿಗೆ ಬಂದು ನಿಲ್ಲುವ ಸಾಧ್ಯತೆ ಗೋಚರಿಸಿದೆ. ಗಣೇಶನ ಹಬ್ಬ ವೇಳೆ ಅಡಿಕೆಯ ಬೆಲೆ ಇನ್ನಷ್ಟು ಏರಿಕೆ ಕಾಣಲಿದೆ ಎನ್ನಲಾಗಿದೆ.
ಅಡಿಕೆ ಧಾರಣೆ ಏರಿಕೆಯಾಗುತ್ತಿದ್ದರೂ, ಡಿಮ್ಯಾಂಡ್‌ಗೆ ತಕ್ಕಂತೆ ಅಡಿಕೆ ಮಾರುಕಟ್ಟೆಗೆ ಬರ್ತಾ ಇಲ್ಲ. ಹೊಸ ಅಡಿಕೆ ಧಾರಣೆ ವಾರದಲ್ಲಿ ಕೆಜಿಗೆ 5 ರೂ.ನಂತೆ ಏರಿಕೆ ಕಾಣುತ್ತಿದ್ದು, ಆದರೂ ಅಡಿಕೆ ಮಾರಲು ಬೆಳೆಗಾರ ಮುಂದಾಗುತ್ತಿಲ್ಲ.
ಆ. 17ರ ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ಕೆ.ಜಿ.ಗೆ ಧಾರಣೆ 465 ರೂ. ಇತ್ತು. ಇತ್ತ ಸುಳ್ಯ  ತಾಲೂಕಿನ ಬೆಳ್ಳಾರೆಯ ಖಾಸಗಿ ಹೊರ ಮಾರುಕಟ್ಟೆಯಲ್ಲಿ ಹೊಸ ಅಡಿಕೆಗೆ ಕೆ.ಜಿ.ಗೆ 480 ರೂಪಾಯಿಯವರೆಗೂ ಖರೀದಿಯಾಗಿದೆ.
ಹಳೆ ಅಡಿಕೆಗೆ ಕ್ಯಾಂಪ್ಕೋದಲ್ಲಿ ಕೆ.ಜಿ.ಗೆ 560 ರೂ., ಹೊರ ಮಾರುಕಟ್ಟೆಯಲ್ಲಿ 575 ರೂ. ಇತ್ತು. ಇಲ್ಲೂ ಕೂಡ ಕೆ.ಜಿ.ಗೆ 15 ರೂ. ವ್ಯತ್ಯಾಸ ಇದೆ. 
ಧಾರಣೆ ಇದೇ ರೀತಿ ಮುಂದುವರಿದರೆ ಚೌತಿಯ ವೇಳೆಗೆ ಹೊಸ ಅಡಿಕೆ ಧಾರಣೆ ಕಿಲೋ ವೊಂದಕ್ಕೆ 500 ರೂ.ರ ಗಡಿ ತಲುಪಲಿದೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here