ಹಿಂದು ಸಮಾಜದ ಉನ್ನತಿಗೆ ವಿಹಿಂಪ, ಬಜರಂಗದಳ ಅನಿವಾರ್ಯತೆಯಿದೆ – 12ನೇ ವರ್ಷದ ಪುತ್ತೂರು ಮೊಸರು ಕುಡಿಕೆ ಉತ್ಸವದಲ್ಲಿ ಬಜರಂಗದಳದ ಸುನಿಲ್ ಕೆ.ಆರ್

0

  • ಸಮಾಜಕ್ಕಾಗಿ ಸಂಘಟನೆ ಶಕ್ತಿಯನ್ನು ಬೆಳೆಸುವ ಅನಿವಾರ್ಯತೆಯಿದೆ – ಪಿ.ವಾಮನ್ ಪೈ
  • ಸಮಾಜದ ಕಾರ್ಯಕ್ಕೆ ಬಜರಂಗಳ ಮುಂಚೂಣಿ – ಮುರಳಿಕೃಷ್ಣ ಹಸಂತಡ್ಕ

ಹುಟ್ಟಿನಿಂದಲೇ ಸಂಘರ್ಷ, ಸಂಘರ್ಷದಿಂದಲೇ ಹುಟ್ಟು ಎಂದು ಬೆಳೆದ ಬಜರಂಗದಳ ಸಂಘಟನೆ ವಿಶ್ವಹಿಂದು ಪರಿಷತ್ ನೇತೃತ್ವದಲ್ಲಿ ಆರಂಭಗೊಂಡಿತ್ತು. ಪ್ರಸ್ತುತ ಕಾಲಗಟ್ಟದಲ್ಲೂ ಹಿಂದು ಸಮಾಜದ ಉನ್ನತಿಗಾಗಿ ವಿಶ್ವಹಿಂದು ಪರಿಷತ್, ಬಜರಂಗದಳ ಅನಿವಾರ್ಯತೆಯಿದೆ ಎಂದು ಬಜರಂಗದಳ ಕರ್ನಾಟಕ ಪ್ರಾಂತ ಸಂಯೋಜಕ ಸುನಿಲ್ ಕೆ.ಆರ್ ಅವರು ಹೇಳಿದರು.

ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ಸ್ಥಾಪನೆಯಾದ ವಿಶ್ವ ಹಿಂದೂ ಪರಿಷದ್‌ನ ಸ್ಥಾಪನಾ ದಿನದ ಪ್ರಯುಕ್ತ ಪುತ್ತೂರಿನಲ್ಲಿ ಆ.೨೦ರಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆದ ೧೨ನೇ ವರುಷದ ಪುತ್ತೂರು ಮೊಸರು ಕುಡಿಕೆ ಉತ್ಸವದಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು. ಇಡೀ ಸಮಾಜವನ್ನು ಜಾಗೃತ ಮಾಡುವ ಸಮಾಜವನ್ನು ಕಟ್ಟುವಂತಹ ಯುವಕರನ್ನೊಳಗೊಂಡ ಬಜರಂಗದಳ, ಮಾತೆಯರನ್ನು ಒಗ್ಗೂಡಿಸುವ ಮಾತೃ ಶಕ್ತಿ, ಯುವತಿಯರನ್ನು ಒಗ್ಗೂಡಿಸುವ ದುರ್ಗಾವಾಹಿನಿ ಸಮಾಜದ ಎಲ್ಲಾ ಕಡೆ ನಿರಂತರವಾಗಿ ಕೆಲಸ ಮಾಡುತ್ತಿದೆ. ಜಾತಿ, ಅಸ್ಪಶ್ರತೆ, ಸಾಮಾಜಿಕ ಸಾಮಾರಸ್ಯದ ನಡುವೆ ಕೆಲಸ ಮಾಡಿ ಹಿಂದು ಸಮಾಜವನ್ನು ಒಗ್ಗೂಡಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಾ ಬಂದಿದೆ. ವಿಶ್ವಹಿಂದು ಪರಿಷತ್ ಬಜರಂಗದಳದ ಹೋರಾಟದ ಫಲವಾಗಿ ಅನೇಕ ಫಲಿತಾಂಶಗಳು ನಮ್ಮ ಕಣ್ಣು ಮುಂದಿದೆ. ಲವ್ ಜಿಹಾದ್, ಗೋಹತ್ಯೆ ವಿರುದ್ಧ ಸಮರ, ಮತಾಂತರ ವಿರುದ್ಧ ಜಾಗೃತಿ ಕೆಲಸ, ಭಯೋತ್ಪಾದನೆ ಅರಿವಯನ್ನು ಮೂಡಿಸುವ ಮೂಲಕ ಪ್ರಸ್ತುತ ಕಾಲದಲ್ಲಿ ಹಿಂದು ಸಮಾಜದ ಉನ್ನತಿಗೆ ವಿಶ್ವಹಿಂದು ಪರಿಷತ್‌ನ ಅನಿವಾರ್ಯತೆಯಿದೆ ಎಂದರು.

ಸಮಾಜಕ್ಕಾಗಿ ಸಂಘಟನೆ ಶಕ್ತಿಯನ್ನು ಬೆಳೆಸುವ ಅನಿವಾರ್ಯತೆಯಿದೆ
ಪುತ್ತೂರು ಮೊಸರು ಕುಡಿಕೆ ಉತ್ಸವ ಸಮಿತಿ ಅಧ್ಯಕ್ಷ ಪಿ.ವಾಮನ ಪೈ ಅವರು ಮಾತನಾಡಿ ಸುಮಾರು ಇಪ್ಪತೈದರಿಂದ ಮೂವತ್ತು ವರ್ಷಗಳ ಹಿಂದೆ ನಮ್ಮ ಸಮಾಜ ಹೇಗಿತ್ತು. ಇವತ್ತು ಹೇಗಿದೆ ಎಂಬುದನ್ನು ಅವಲೋಕಿಸಿದಾಗ ಇವತ್ತು ಹಿಂದು ಸಮಾಜ ಹಿಂದು ಸಂಘಟನೆಗಳ ಮೂಲಕ ಒಂದು ಶಕ್ತಿಯಾಗಿ ಬೆಳೆಯುತ್ತಿದೆ. ಈ ಸಮಾಜಕ್ಕೆ ಸಂಘಟನೆ ಶಕ್ತಿಯನ್ನು ಬೆಳೆಸುವ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ನಮ್ಮ ವ್ಯಹಾರದಲ್ಲಿ ಶೇ.೫ರಷ್ಟಾದರೂ ಸಮಾಜಕ್ಕೆ ತೆಗೆದಿಡುವ ಕಾರ್ಯ ಮಾಡಬೇಕು. ಈ ಆರ್ಥಿಕ ನಿಧಿಯಿಂದ ಬಡ ಮಕ್ಕಳ ವಿದ್ಯಾಭ್ಯಾಸ, ಇತರ ಸಾಮಾಜಿಕ ಚಟುವಟಿಕೆಗಳಿಗೆ ಪರಿಣಾಮಕಾರಿಯಾಗಲಿದೆ. ನಮ್ಮ ಮಕ್ಕಳಿಗೆ ಶಿಸ್ತು, ಸಂಸ್ಕಾರ ಬೆಳೆಸಬೇಕು. ಇತರ ವ್ಯಾಪಾರವನ್ನು ನಮ್ಮ ಸಮಾಜದೊಳಗೆ ಹಂಚಿಕೊಳ್ಳಬೇಕು. ನಮ್ಮ ಸಮಾಜ ಬೆಳೆಯಬೇಕೆಂದರು.

ಸಮಾಜದ ಕಾರ್ಯವನ್ನು ಮಾಡುವಲ್ಲಿ ಮುಂಚೂಣಿಯಲ್ಲಿ ಬಜರಂಗಳದವಿದೆ;
ಬಜರಂಗದಳ ದಕ್ಷಿಣ ಪ್ರಾಂತ ಸಹಸಂಯೋಜಕ ಮುರಳಿಕೃಷ್ಣ ಹಸಂಡ್ಕ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಒಬ್ಬ ಸ್ವಾತಂತ್ರ್ಯ ಸೇನಾನಿ ಜಗತ್ತಿನಲ್ಲಿ ಕರಿನೀರಿನ ಶಿಕ್ಷೆ ಅನುಭವಿಸಲು ಸಿದ್ದರಾಗಿ ಯಾವ ತ್ಯಾಗ ಮಾಡಲು ಸಿದ್ದತ ಎಂಬ ಘೋಷನೆ ಮಾಡಿ ಪ್ರೇರಣೆ ಮಾಡುತ್ತಿದ್ದ ಸಾರ್ವಕರ್ ಅವರನ್ನು ಪ್ರಶ್ನೆ ಮಾಡುವ ದುಷ್ಟ ಶಕ್ತಿಗಳೇನಿದ್ದಾರೋ ಅವರಿಗೆ ಇವತ್ತು ಸಮಾಜ ಸಂದೇಶ ಕೊಡುವ, ಹಿಂದು ಸಮಾಜದ ಕ್ಷಾತ್ರ ತೇಜಸ್ಸನ್ನು ಪ್ರಶ್ನೆಗೆ ಮಾಡಲು ಬಾರದಂತೆ ಹಿಂದು ಸಮಾಜ ಜಾಗೃತಗೊಂಡಿದೆ. ಈ ನಿಟ್ಟಿನಲ್ಲಿ ಬಜರಂಗದಳ ದೇಶ ವ್ಯಾಪಿಯಾಗಿ ಸೇವೆ, ಸಂಸ್ಕಾರ, ಸುರಕ್ಷತೆಯಲ್ಲಿ ಇಡಿ ಸಮಾಜದ ಸೇವೆ ಮಾಡುತ್ತಿದೆ. ಕೋವಿಡ್ ಸಂದರ್ಭದಲ್ಲಿ ಪ್ರತಿಯೊಬ್ಬ ಹಿಂದುವಿಗೆ, ಯಾವ ಸಂದರ್ಭದಲ್ಲಿ ಸಹಾಯ ಬೇಕು ಅದನ್ನು ಒದಗಿಸಿಕೊಟ್ಟು ಸೇವೆಯಲ್ಲಿ ತಾನು ಎತ್ತಿದ ಕೈ ಇಡಿ ದೇಶಲ್ಲಿ ತೋರಿಸಿಕೊಟ್ಟ ಸಂಘಟನೆ ಬಜರಂಗದಳವಾಗಿದೆ ಎಂದರು. ವಿಶ್ವಹಿಂದು ಪರಿಷತ್ ಅಂತರಾಷ್ಟ್ರ್ರೀಯ ಜೊತೆ ಕಾರ್ಯದರ್ಶಿ ಶ್ರೀ ಧ್ಯಾನಾನಂದ್ ಸ್ವಾಮೀಜಿ ಅಶೀರ್ವಚನ ನೀಡಿದರು. ಪೌರಕಾರ್ಮಿಕ ಮತ್ತು ಹೊರಗುತ್ತಿಗೆ ಸಂಘದ ಕರಾವಳಿ ಸಂಚಾಲಕ ಅಣ್ಣಪ್ಪ ಕಾರೆಕ್ಕಾಡು ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ನಡೆಯಿತು. ಬಜರಂಗದಳ ಪುತ್ತೂರು ಗ್ರಾಮಾಂತರ ಪ್ರಖಂಡದ ಸಂಯೋಜಕ ವಿಶಾಖ್ ಸಸಿಹಿತ್ಲು ಬಹುಮಾನ ವಿತರಣಾ ಕಾರ್ಯಕ್ರಮ ನಿರ್ವಹಿಸಿದರು. ಚರಣ್ ಧರ್ಮನಗರ ವೈಯುಕ್ತಿಗ ಗೀತೆ ಹಾಡಿದರು. ಜಯಂತ ಕುಂಜೂರುಪಂಜ, ಬಜರಂಗದಳ ನಗರ ಸಂಯೋಜಕ ಹರೀಶ್ ದೋಳ್ಪಾಡಿ, ಚೇತನ್ ಬೊಳುವಾರು, ಸೇಸಪ್ಪ ಬೆಳ್ಳಿಪ್ಪಾಡಿ, ರೂಪೇಶ್ ಬಲ್ನಾಡು, ರೂಪೇಶ್ ಮುರ, ಅಶೋಕ್ ಸವಣೂರು, ಅನುಪಮ, ದಿನೇಶ್ ತಿಂಗಳಾಡಿ, ಸುರೇಶ್ ಕಾವು, ಜೀವನ್ ಆಚಾರ್ಯ ಬಲ್ನಾಡು, ನಿಶಾಂತ್, ಅತಿಥಿಗಳನ್ನು ಗೌರವಿಸಿದರು. ಮೊಸರು ಕುಡಿಕೆ ಉತ್ಸವ ಸಮಿತಿ ಸಂಚಾಲಕ ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ, ವಿಶ್ವಹಿಂದು ಪರಿಷತ್ ಪುತ್ತೂರು ಜಿಲ್ಲಾಧ್ಯಕ್ಷ ಡಾ.ಕೃಷ್ಣ ಪ್ರಸನ್ನ, ಉಪಾಧ್ಯಕ್ಷರಾದ ಭಾಸ್ಕರ್ ಧರ್ಮಸ್ಥಳ, ಪ್ರೇಮಲತಾ ರಾವ್, ಕಾರ್ಯದರ್ಶಿ ಸತೀಶ್ ಬಿ.ಎಸ್, ಮೊಸರುಕುಡಿಕೆ ಉತ್ಸವ ಸಮಿತಿ ಕಾರ್ಯದರ್ಶಿ ಶ್ರೀಧರ್ ತೆಂಕಿಲ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೀರ್ತಿ ಕುಡ್ವ ಅವರು ಪ್ರಾರ್ಥಿಸಿದರು. ವಿಶ್ವಹಿಂದು ಪರಿಷತ್ ನಗರ ಪ್ರಖಂಡ ಅಧ್ಯಕ್ಷ ಜನಾರ್ದನ ಬೆಟ್ಟ ಸ್ವಾಗತಿಸಿದರು. ವಿಶ್ವಹಿಂದೂ ಪರಿಷತ್ ಗ್ರಾಮಾಂತರ ಪ್ರಖಂಡ ಕಾರ್ಯದರ್ಶಿ ರವಿ ಕೈತಡ್ಕ ವಂದಿಸಿದರು. ಹರಿಣಿ ಪುತ್ತೂರಾಯ ಕಾರ್ಯಕ್ರಮ ನಿರೂಪಿಸಿದರು.

ಕಡಬ ಶ್ರೀ ಲಕ್ಷ್ಮೀ ಜನಾರ್ದನ ಯುವಕ ಮಂಡಲ ಕೇಪು ಕಡಬ (ಪ್ರ)
ಅಶ್ವ ಫ್ರೆಂಡ್ಸ್ ಬೀರ್‍ನಹಿತ್ಲು

ಅಟ್ಟಿ ಮೊಸರು ಕುಡಿಕೆ ಸ್ಪರ್ಧೆಯಲ್ಲಿ ಕಡಬ ತಂಡ (ಪ್ರ), ಆಶ್ವ ಫ್ರೆಂಡ್ಸ್(ದ್ವಿ)
ಶೋಭಾಯಾತ್ರೆಯುದ್ದಕ್ಕೂ ವೀರ ಯುವಕರ ತಂಡದಿಂದ ಸಾಹಸಮಯ ಅಟ್ಟಿಮಡಿಕೆ ಒಡೆಯುವ ಪ್ರದರ್ಶನ ಸುಮಾರು 13 ತಂಡ ಭಾಗವಹಿಸಿತ್ತು. ಕೊನೆಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರು ಗದ್ದೆಯಲ್ಲಿರುವ ಅಟ್ಟಿ ಮಡಿಕೆ ಒಡೆಯುವ ಸ್ಪರ್ಧೆಯಲ್ಲಿ 5 ತಂಡ ಆಯ್ಕೆಗೊಂಡಿದ್ದು, ಈ ಪೈಕಿ 15 ಸೆಕುಂಡಿನ ಒಳಗಡೆ ಅಟ್ಟಿ ಮಡಿಕೆ ಒಡೆದ ಕಡಬ ಶ್ರೀ ಲಕ್ಷ್ಮೀ ಜನಾರ್ದನ ಯುವಕ ಮಂಡಲ ಕೇಪು ಕಡಬ (ಪ್ರ), ಅಶ್ವ ಫ್ರೆಂಡ್ಸ್ ಬೀರ್‍ನಹಿತ್ಲು(ದ್ವಿ), ಯುವ ಫ್ರೆಂಡ್ಸ್ ಕಬಕ(ತೃ), ಬ್ರಹ್ಮನಗರ ಬಜರಂಗದಳ ತಂಡ (೪ನೇ), ಹಿಂದು ಜಾಗರಣ ವೇದಿಕೆ ಆಲಂಕಾರು(೫ನೇ) ಸ್ಥಾನ ಪಡೆಯಿತು. ರಾತ್ರಿ ವಿಜೇತ ತಂಡಕ್ಕೆ ಬಹುಮಾನ ವಿತರಣೆ ನಡೆಯಿತು.

LEAVE A REPLY

Please enter your comment!
Please enter your name here