ಕುಂಬ್ರದಲ್ಲಿ ಡಿ.ಆರ್.ಎಸ್ ಟಯರ‍್ಸ್ ಶುಭಾರಂಭ

0

[box type=”info” bg=”#” color=”#” border=”#” radius=”12″] ನಮ್ಮಲ್ಲಿ ಎಲ್ಲಾ ಬ್ರಾಂಡೆಡ್ ಕಂಪೆನಿಯ ಟಯರ್‌ಗಳು, ಎಲ್ಲಾ ವಿಧದ ಟ್ಯೂಬ್ ಮತ್ತು ಫ್ಲಾಪ್‌ಗಳು, ಪಂಕ್ಚರ್, ನೈಟ್ರೋಜನ್, ಅಟೋಮ್ಯಾಟಿಕ್ ಟಯರ್ ಬದಲಾವಣೆ ಮತ್ತು ಫಿಟ್ಟಿಂಗ್, ಇಂಜಿನ್ ಆಯಿಲ್ ಲಭ್ಯವಿದೆ. ಗ್ರಾಹಕರು ಸಹಕಾರ ನೀಡಬೇಕಾಗಿ ವಿನಂತಿ.

-ದೀಕ್ಷಿತ್ ಸೊರಕೆ, ಮಾಲಕರು[/box]

ಪುತ್ತೂರು: ಡಿಆರ್‌ಎಸ್ ಟಯರ‍್ಸ್ ಸಂಸ್ಥೆ ಕುಂಬ್ರ ಅರ್ಚನಾ ಸಂಕೀರ್ಣದಲ್ಲಿ ಆ.21ರಂದು ಶುಭಾರಂಭಗೊಂಡಿತು. ಜನಾರ್ದನ ಭಕ್ತಕೋಡಿ ನೇತೃತ್ವದಲ್ಲಿ ಲಕ್ಷ್ಮೀ ಪೂಜೆ ನಡೆಯಿತು.

ಉದ್ಯಮಿ ಬೂಡಿಯಾರ್ ರಾಧಾಕೃಷ್ಣ ರೈ, ಮುಂಡೂರು ಗ್ರಾ.ಪಂ ಸದಸ್ಯರಾದ ಕರುಣಾಕರ ಗೌಡ ಎಲಿಯ, ಪ್ರವೀಣ್ ನಾಯ್ಕ ನೆಕ್ಕಿತ್ತಡ್ಕ, ಚಂದ್ರಶೇಖರ ಎನ್.ಎಸ್.ಡಿ, ಬಿಜೆಪಿ ಮುಖಂಡ ಅಶೋಕ್ ರೈ ಸೊರಕೆ, ಸರ್ವೆ ಷಣ್ಮುಖ ಯುವಕ ಮಂಡಲದ ಪ್ರ.ಕಾರ್ಯದರ್ಶಿ ಮನೋಜ್ ಸುವರ್ಣ ಸೊರಕೆ, ಧ.ಗ್ರಾ.ಯೋ.ಸರ್ವೆ ಬಿ ಒಕ್ಕೂಟದ ನಿಕಟಪೂರ್ವ ಅಧ್ಯಕ್ಷ ಶಶಿಧರ್ ಎಸ್.ಡಿ, ಅರ್ಚನಾ ಸಂಕೀರ್ಣದ ಮಾಲಕ ಬಾಬು ಪೂಜಾರಿ, ಸೂರ್ಯಪ್ರಸನ್ನ ರೈ, ಮೋಹನ್ ರೈ ಕೆರೆಕ್ಕೋಡಿ, ಮಧು ಸುವರ್ಣ, ಮಜಿತ್ ಸುವರ್ಣ, ರಂಜಿತ್ ಸುವರ್ಣ, ವತ್ಸಲಾ, ರೋಹಿಣಿ, ಕುಶಲ ಮತ್ತಿತರ ಹಲವಾರು ಮಂದಿ ಆಗಮಿಸಿ ಶುಭ ಹಾರೈಸಿದರು.

ಮಾಲಕ ದೀಕ್ಷಿತ್ ಅವರ ತಾಯಿ ರಾಜೀವಿ ದಿನೇಶ್ ಕುಮಾರ್ ಸೊರಕೆ, ಅಣ್ಣ ಧೀರಾಜ್ ಸೊರಕೆ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಮಾಲಕ ದೀಕ್ಷಿತ್ ಸೊರಕೆ ಅತಿಥಿಗಳನ್ನು ಸ್ವಾಗತಿಸಿ ಸತ್ಕರಿಸಿದರು.

ಜಗದೀಶ ಪರನೀರು, ಲಿಂಗಪ್ಪ ಸೊರಕೆ, ವಿಘ್ನೇಶ್ ಪಂಡಿತ್ ನೆಕ್ಕಿಲು, ಸುಬ್ರಹ್ಮಣ್ಯ ಶರತ್ ನೆಕ್ಕಿಲು, ರಂಜಿತ್ ಕರ್ಮಿನಡ್ಕ, ಹರ್ಷಿತ್ ಮರಿಯ, ರಕ್ಷಿತ್, ಶಿವಪ್ರಸಾದ್ ಸಹಕರಿಸಿದರು.

ಶೀಘ್ರದಲ್ಲೇ ವ್ಹೀಲ್ ಅಲಯನ್‌ಮೆನ್ಸ್, ಬ್ಯಾಲೆನ್ಸಿಂಗ್ ಪ್ರಾರಂಭ:

ಇದೇ ಸಂಸ್ಥೆಯಲ್ಲಿ ವ್ಹೀಲ್ ಅಲಯನ್‌ಮೆನ್ಸ್ ಹಾಗೂ ಬ್ಯಾಲೆನ್ಸಿಂಗ್ ಶೀಘ್ರದಲ್ಲೇ ಪ್ರಾರಂಭಗೊಳ್ಳಲಿದೆ ಎಂದು ಡಿಆರ್‌ಎಸ್ ಟಯರ‍್ಸ್ ಸಂಸ್ಥೆಯ ಮಾಲಕ ದೀಕ್ಷಿತ್ ಸೊರಕೆ ತಿಳಿಸಿದ್ದಾರೆ.

 

LEAVE A REPLY

Please enter your comment!
Please enter your name here