ಪುತ್ತೂರು: ಒಳಮೊಗ್ರು ಗ್ರಾಮ ಪಂಚಾಯತ್‌ನ ೨೦೨೧-೨೨ ನೇ ಸಾಲಿನ ಜಮಾಬಂಧಿ ಸಭೆಯು ಆ.೨೫ ರಂದು ಗ್ರಾಪಂ ಸಭಾಂಗಣದಲ್ಲಿ ನಡೆಯಿತು. ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ರೇಖಾರವರು ಜಮಾಬಂಧಿ ಅಧಿಕಾರಿಯಾಗಿ ಸಭೆ ನಡೆಸಿಕೊಟ್ಟರು. ಪಂಚಾಯತ್‌ನ ಪಾರದರ್ಶಕ ಆಡಳಿತ ಗ್ರಾಮಸ್ಥರಿಗೆ ತಿಳಿಯಬೇಕು ಎಂನ ನಿಟ್ಟಿನಲ್ಲಿ ಸರಕಾರ ಜಮಾಬಂಧಿ ಸಭೆಗಳನ್ನು ಏರ್ಪಡಿಸಿದೆ. ಗ್ರಾಪಂನಲ್ಲಿ ಆರೋಗ್ಯಪೂರ್ಣ ಚರ್ಚೆ ನಡೆದಿದೆ ಎಂದರು. ಅಭಿವೃದ್ಧಿ ಅಧಿಕಾರಿ ಅವಿನಾಶ್ ಬಿ.ಆರ್ ರವರು ಗ್ರಾಪಂನ ೨೦೨೧-೨೨ ನೇ ಸಾಲಿನ ಅನುದಾನಗಳ ಜಮಾಖರ್ಚಿನ ಬಗ್ಗೆ ಸಭೆಗೆ ವರದಿ ಮಂಡಿಸಿದರು. ಅನುದಾನಗಳ ಬಳಕೆ ಮತ್ತು ಜಮಾಖರ್ಚಿನ ಬಗ್ಗೆ ಕೈಪಿಡಿಯನ್ನು ತಯಾರಿಸಲಾಗಿದ್ದು ಇದನ್ನು ಗ್ರಾಮಸ್ಥರಿಗೆ ವಿತರಿಸಲಾಯಿತು.
ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಮಾತನಾಡಿ, ಗ್ರಾಪಂನ ಪಾರದರ್ಶಕ ಆಡಳಿತದ ಬಗ್ಗೆ ಗ್ರಾಮಸ್ಥರಿಗೆ ತಿಳಿಸುವ ಉದ್ದೇಶದಿಂದ ಜಮಾಬಂಧಿಯ ಕೈಪಿಡಿಯನ್ನು ತಯಾರಿಸಿ ಗ್ರಾಮಸ್ಥರಿಗೆ ನೀಡಿದ್ದೇವೆ. ಇದರಲ್ಲಿ ಎಲ್ಲಾ ಕಾಮಗಾರಿಗಳ ಬಗ್ಗೆ ಮಾಹಿತಿ ಇದ್ದು ಗ್ರಾಮಸ್ಥರು ಯಾವುದೇ ಸಂದರ್ಭದಲ್ಲೂ ಈ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು, ಗ್ರಾಮದ ಅಭಿವೃದ್ಧಿಗೆ ಗ್ರಾಮಸ್ಥರು ಸಹಕಾರ ನೀಡುವಂತೆ ಕೇಳಿಕೊಂಡರು.
ವೇದಿಕೆಯಲ್ಲಿ ಗ್ರಾಪಂ ಉಪಾಧ್ಯಕ್ಷೆ ಸುಂದರಿ, ಸದಸ್ಯರುಗಳಾದ ಶೀನಪ್ಪ ನಾಯ್ಕ, ವಿನೋದ್ ಶೆಟ್ಟಿ ಮುಡಾಲ, ಸಿರಾಜುದ್ದೀನ್,ಚಿತ್ರಾ ಬಿ.ಸಿ, ಶಾರದಾ, ನಳಿನಾಕ್ಷಿ, ನಿಮಿತಾ ರೈ, ರೇಖಾ ಕುಮಾರಿ, ಪ್ರದೀಪ್, ಮಹೇಶ್ ಕೇರಿ, ಲತೀಫ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಕಾರ್ಯದರ್ಶಿ ಜಯಂತಿ ಸ್ವಾಗತಿಸಿ, ವಂದಿಸಿದರು.