- ಪುತ್ತೂರು ಹಾಗೂ ವಿಟ್ಲ ಠಾಣೆಯ ನಾಲ್ವರು ಪೊಲೀಸರ ಆಯ್ಕೆ
ಪುತ್ತೂರು: ಜು.26ರಂದು ಹತ್ಯೆಯಾದ ಪ್ರವೀಣ್ ನೆಟ್ಟಾರು ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆ ಯಶಸ್ವಿಯಾಗಿದ್ದು ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳ ಕೈಗೆತ್ತಿಕೊಂಡಿದೆ. ಇದೀಗ ಎನ್.ಐ.ಎಗೆ ಸಹಕರಿಸಲು ಒಂಭತ್ತು ಮಂದಿ ಪೊಲೀಸರನ್ನು ನೇಮಿಸಿ ಎಡಿಜಿಪಿ ಡಾ.ಎಮ್.ಎ ಸಲೀಂ ಆದೇಶ ಹೊರಡಿಸಿದ್ದಾರೆ.
ಪುತ್ತೂರು ಗ್ರಾಮಾಂತರ ಠಾಣೆಯ ಪಿ.ಎಸ್.ಐ ಉದಯ ರವಿ, ಕಾರ್ಕಳ ಗ್ರಾಮಾಂತರ ಠಾಣಾ ಪಿಎಸ್ಐ ಪ್ರಸನ್ನ, ವೇಣೂರು ಠಾಣೆಯ ಹೆಡ್ ಕಾನ್ಸ್ಟೇಬಲ್ ಪ್ರವೀಣ್.ಎಮ್, ಪುತ್ತೂರು ಗ್ರಾಮಾಂತರ ಠಾಣೆಯ ಹೆಡ್ ಕಾನ್ಸ್ಟೇಬಲ್ ಅದ್ರಾಮ ಹಾಗೂ ಪ್ರವೀಣ್.ರೈ, ವಿಟ್ಲ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಉದಯ.ರೈ, ಬಂಟ್ವಾಳ ಸಂಚಾರಿ ಠಾಣೆಯ ವಿವೇಕ್.ರೈ ಮತ್ತು ಕುಮಾರ್, ಸುಳ್ಯ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಅನಿಲ್ ತಂಡವನ್ನು ಒಂದು ತಿಂಗಳವರೆಗೆ ಎನ್.ಐ.ಎಗೆ ಓಒಡಿ ಮೂಲಕ ನೇಮಕವಾಗಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೃಷಿಕೇಶ್ ಸೋನಾವಣೆ ಸುದ್ದಿಗೆ ಖಚಿತಪಡಿಸಿದ್ದಾರೆ.