ಶ್ರೀ ಮಹಮ್ಮಾಯಿ ಸೌಹಾರ್ದ ಸಹಕಾರಿ ಮಹಾಸಭೆ

0

ಪುತ್ತೂರು : ತಾಲೂಕ್ ಪಂಚಾಯತ್ ವಾಣಿಜ್ಯ ಸಂಕೀರ್ಣದಲ್ಲಿ ಕಾರ್ಯಚರಿಸುತ್ತಿರುವ ,ಶ್ರೀ ಮಹಮ್ಮಾಯಿ ಸೌಹಾರ್ದ ಸಹಕಾರಿ ನಿ. 2021-22 ನೇ ಸಾಲಿನಲ್ಲಿ ಸುಮಾರು 15.12 ಕೋಟಿ ವಹಿವಾಟು ನಡೆಸುವ ಮೂಲಕ , ಎರಡನೇ ವರ್ಷದಲ್ಲೇ ಅತ್ಯುತ್ತಮ ರೀತಿಯ ಸಾಧನೆ ಮಾಡಿದೆ. ಸಹಕಾರಿಯು ಸುಮಾರು 1726 A ತರಗತಿಯ ಸದಸ್ಯರನ್ನು ಹೊಂದಿದ್ದು, 34.29 ಲಕ್ಷ ಪಾಲು ಬಂಡವಾಳ ಮತ್ತು ಪ್ರಸಕ್ತ ಸಾಲಿನಲ್ಲಿ 7.32ಲಕ್ಷ ನಿವ್ವಳ ಲಾಭ ಗಳಿಸಿದೆ. ಸಂಯುಕ್ತ ಸಹಕಾರಿಯ ನಿಯಮಾನುಸಾರ ಲಾಭಾಂಶವನ್ನು ವಿವಿಧ ನಿಧಿಗಳಿಗೆ ವಿಂಗಡಿಸಲಾಗಿದೆ.ಆಡಳಿತ ಮಂಡಳಿಯ ಹಾಗೂ ಸದಸ್ಯರ ಪ್ರಾಮಾಣಿಕ ಕಾರ್ಯವೈಖರಿ ಯೇ ಇದಕ್ಕೆಲ್ಲಾ ಮೂಲ. ಮುಂದೆ ಇನ್ನೂ ಉತ್ತಮ ಸಾಧನೆ ಮಾಡುವಲ್ಲಿ ಎಲ್ಲರೂ ಸಹಕಾರ ನೀಡಬೇಕು. ಪ್ರತಿಯೊಬ್ಬರೂ ಕೂಡ ಉಳಿತಾಯ ಖಾತೆ ತೆರೆದು ಸೌಹಾರ್ದದ ಬೆಳವಣಿಗೆಗೆ ಸಹಕರಿಸಬೇಕೂ ಎಂದೂ , ಅಧ್ಯಕ್ಷ ಕೆ.ಶೀನ ನಾಯ್ಕ ಹೇಳಿ ಬೆಂಬಲ ಯಾಚಿಸಿದರು.

ಆ.28 ರಂದು ಮರಾಟಿ ಸಮಾಜ ಸೇವಾ ಸಂಘ ಪುತ್ತೂರು ಇದರ ಸಮಾಜ ಮಂದಿರದಲ್ಲಿ ನಡೆದ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ , ಪ್ರಸಕ್ತ ಸಾಲಿನಲ್ಲಿ ಸಹಕಾರಿಯ ಸದಸ್ಯರಿಗೆ 2.15 ಕೋಟಿ ರೂ.ಗಳ ಸಾಲ ನೀಡಲಾಗಿದೆ,ಶೇಕಡಾ ನೂರರಷ್ಟು ಸಾಲ ವಸೂಲು ಮಾಡಿದ್ದು, 3.63 ಕೋಟಿ ರೂ.ಗಳ ಠೇವಣಿ ಸಂಗ್ರಹಣೆಯಾಗಿದೆ ಎಂದು ತಿಳಿಸಿದರು. ಉಪಾಧ್ಯಕ್ಷರಾದ ಚೋಮ ನಾಯ್ಕ ಸಹಿತ ಎಲ್ಲಾ ನಿರ್ದೇಶಕ ರು ಹಾಗೂ ಹೆಚ್ಚು ಸಂಖ್ಯೆಯಲ್ಲಿ ಸದಸ್ಯರು ಹಾಜರಿದ್ದರು.
ಕಾನೂನು ಸಲಹೆ ಗಾರ ಮಂಜುನಾಥ್ ಎನ್.ಎಸ್ ಹಾಗೂ ಸದಸ್ಯ ವಾಸುರವರು ತಮ್ಮ ಅನಿಸಿಕೆಯೊಂದಿಗೆ ,ಸೂಕ್ತ ಸಲಹೆಯನ್ನಿತ್ತರು . ಯಶೋಧ ಎಂ ಪ್ರಾರ್ಥನೆ ನೆರವೇರಿಸಿ ,ಪೂವಪ್ಪ ನಾಯ್ಕ ಸ್ವಾಗತಿಸಿ ,ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಂದಿತ್ ಬಿ. ನಾಯ್ಕ ವರದಿ ಮಂಡಿಸಿದರು.ಎಸ್ ಜಿ ರಾಮ ನಾಯ್ಕ ವಂದಿಸಿ , ಸಿಬ್ಬಂದಿಗಳಾದ ಜಯ ಮತ್ತು ಮಮತಾ ಸಹಕರಿಸಿದರು.

LEAVE A REPLY

Please enter your comment!
Please enter your name here