‘ಮೋದೀಜಿಯವರು ಭ್ರಷ್ಟಾಚಾರದ ವಿರುದ್ಧ ಕರೆ ನೀಡುವಂತಾಗಲಿ. ತನ್ಮೂಲಕ ಅಸಾಧ್ಯವೆನಿಸಿರುವ ಸಾಮಾಜಿಕ ಬದಲಾವಣೆಗೊಂದು ಮುನ್ನುಡಿ ದೊರಕಲಿ’

0

‘ಪ್ರಧಾನಿ ಮೋದಿಯವರೇ, ನಾ ಕಾವೂಂಗ ನಾ ಕಾನೆದೂಂಗ ಜಾರಿಗೆ ತನ್ನಿ, ಊರನ್ನು ಲಂಚ ಭ್ರಷ್ಟಾಚಾರ ಮುಕ್ತಗೊಳಿಸಿ’ ಆ.29ರ ಸಂಪಾದಕೀಯ ಲೇಖನಕ್ಕೆ ಪ್ರತಿಕ್ರಿಯೆ

ಪುತ್ತೂರು ಸುದ್ದಿ ಬಿಡುಗಡೆ ದಿನಪತ್ರಿಕೆಯಲ್ಲಿ 29.8.22ರಂದು ಬರೆದ ಮುಖಪುಟ ಸಂಪಾದಕೀಯದಲ್ಲಿ ‘ಉದ್ದೇಶ ಶುದ್ಧಿ’ ಗಮನಿಸಬಹುದಾದ ಮಹತ್ವದ ಅಂಶ. ಬಹಿರಂಗ ಪತ್ರವನ್ನು ರಾಜಕೀಯಗೊಳಿಸದೇ ಇರುವುದು ಬರಹದ ಮೌಲ್ಯವನ್ನು ಮತ್ತಷ್ಟು ಹೆಚ್ಚಿಸಿದೆ. ಪ್ರಧಾನಿ ಮೋದೀಜಿಯವರು ಈಗ ನಾವು ಭರವಸೆ ಇಡಬಹುದಾದ ದೇಶದ ಬಹುದೊಡ್ಡ ನಾಯಕ ಎನ್ನುವುದು ಕೋಟ್ಯಾಂತರ ಮಂದಿಯ ನಂಬಿಕೆಯಾಗಿದೆ. ಈ ನೆಲೆಯಲ್ಲಿ ಭ್ರಷ್ಟಾಚಾರ ಎಂಬ ಪಿಡುಗಿನ ನಿವಾರಣೆಯ ಸದುದ್ದೇಶವನ್ನು ಹೊಂದಿ ಮೋದೀಜಿಯವರಿಗೆ ಪತ್ರ ಬರೆದಿರುವುದು, ಭ್ರಷ್ಟಾಚಾರದ ವಿರುದ್ಧದ ಸುದ್ದಿ ಸಂಪಾದಕರ ಹೋರಾಟ, ಪತ್ರಿಕೆಯ ಆಂದೋಲನದ ಪ್ರಾಮಾಣಿಕ ಉದ್ದೇಶವನ್ನು ಮತ್ತಷ್ಟು ಸ್ಪುಟಗೊಳಿಸಿದೆ. ಬರಹ ಎಲ್ಲೂ ಕೂಡ ಹಳಿ ತಪ್ಪದೆ, ರಾಗ-ದ್ವೇಷ, ಹುಳುಕು-ಹಳವಂಡಗಳನ್ನು ಕಾರುವ ಭಾವನೆ ಹೊಂದದೆ, ಕೇವಲ ಭ್ರಷ್ಟಾಚಾರ ಮುಕ್ತ ಸಮಾಜ ಬೇಕೆಂಬ ಮುಗ್ಧ ಹಾಗೂ ಗಟ್ಟಿ ಹೋರಾಟದ ಪ್ರತಿಬಿಂಬವಾಗಿ ಮೂಡಿಬಂದಿದೆ. ಮಂಗಳೂರಿಗೆ ಆಗಮಿಸುತ್ತಿರುವ ಮಾನ್ಯ ಮೋದೀಜಿಯವರು ಭ್ರಷ್ಟಾಚಾರದ ವಿರುದ್ಧ ಕರೆ ನೀಡುವಂತಾಗಲಿ. ತನ್ಮೂಲಕ ಅಸಾಧ್ಯವೆನಿಸಿರುವ ಸಾಮಾಜಿಕ ಬದಲಾವಣೆಗೊಂದು ಮುನ್ನುಡಿ ದೊರಕಲಿ. ಸುದ್ದಿ ಪತ್ರಿಕೆಯ ಬರಹ ಮೋದೀಜಿಯವರನ್ನು ಮುಟ್ಟಲಿ.ಅದಕ್ಕಿಂತಲೂ ಮುಖ್ಯವಾಗಿ ಭ್ರಷ್ಟ ವ್ಯವಸ್ಥೆಯ ಭಾಗೀಧಾರಿಗಳ ಅಂತರಂಗವನ್ನು ತಟ್ಟಲಿ.

ರಾಕೇಶ ಕುಮಾರ್ ಕಮ್ಮಾಜೆ, ಪ್ರಾಂಶುಪಾಲರು ಅಂಬಿಕಾ ಮಹಾವಿದ್ಯಾಲಯ, ಪುತ್ತೂರು

 

[box type=”info” bg=”#” color=”#” border=”#” radius=”27″]ಊರನ್ನು ಲಂಚ, ಭ್ರಷ್ಟಾಚಾರ ಮುಕ್ತವನ್ನಾಗಿಸುವ ಉದ್ದೇಶದೊಂದಿಗೆ ಪ್ರಧಾನಿ ಮೋದಿಯವರನ್ನುದ್ದೇಶಿಸಿ ಆ.29ರ ಪತ್ರಿಕೆಯಲ್ಲಿ ಪ್ರಕಟವಾಗಿರುವ ಸಂಪಾದಕೀಯ ಲೇಖನಕ್ಕೆ ಸಂಬಂಧಿಸಿದ ಅಭಿಪ್ರಾಯಗಳನ್ನು ಪತ್ರಿಕೆ, ಸಾಮಾಜಿಕ ಜಾಲ ತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಲಂಚ,ಭ್ರಷ್ಟಾಚಾರ ವಿರುದ್ಧದ ಆಂದೋಲನವನ್ನು ಪರಿಣಾಮಕಾರಿಯಾಗಿ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಓದುಗರು ಸಹಕರಿಸಬೇಕಾಗಿ ಕೋರಲಾಗಿದೆ. -ಸಂ.[/box]

LEAVE A REPLY

Please enter your comment!
Please enter your name here