ರೈತರಿಗೆ ಜೇನುಕೃಷಿ ತರಬೇತಿ ಕಾರ್ಯಾಗಾರ

0

ಪುತ್ತೂರು: ಸುಳ್ಯ ತೋಟಗಾರಿಕೆ ಇಲಾಖೆ, ಸುಳ್ಯ ಅಧಿಕಾರಿಗಳ ಮನೋರಂಜನಾ ಸಂಘ ಸಹಯೋಗದಲ್ಲಿ 2022-23ನೇ ಸಾಲಿನ ಜಿಲ್ಲಾ ವಲಯ ಜೇನು ಸಾಕಾಣಿಕೆ ಯೋಜನೆಯಡಿ ಜೇನು ಕೃಷಿ ಬಗ್ಗೆ ರೈತರಿಗೆ ತರಬೇತಿ ಕಾರ್ಯಕ್ರಮ ಆ. 30ರಂದು ಇರ್ದೆಯ ಮನಮೋಹನ ಅರಂಬ್ಯ ಅವರ ಮನೆಯಲ್ಲಿ ನಡೆಯಿತು.

ತೋಟಗಾರಿಕಾ ಇಲಾಖೆಯ ನಿವೃತ್ತ ಅಧಿಕಾರಿ ವೀರಪ್ಪ ಗೌಡ ಸುಳ್ಯ ಅವರು ಜೇನು ಕೃಷಿಯ ಬಗ್ಗೆ ಮಾಹಿತಿ ನೀಡಿದರು

ತೋಟಗಾರಿಕಾ ಇಲಾಖೆಯ ನಿವೃತ್ತ ಅಧಿಕಾರಿ ವೀರಪ್ಪ ಗೌಡ ಸುಳ್ಯ ಮಾತನಾಡಿ, ಜೇನಿನ ಕೊರತೆ ಆದಾಗ ರಾಣಿ ಜೇನು ಪ್ರತ್ಯೇಕವಾಗಲು ಹವಣಿಸುತ್ತದೆ. ಇದನ್ನು ತಪ್ಪಿಸುವ ಉದ್ದೇಶದಿಂದ ನಾವೇ ರಾಣಿ ಜೇನನ್ನು ಪ್ರತ್ಯೇಕವಾಗಿಸಿ, ಗೂಡನ್ನು ಪಾಲು ಮಾಡಬೇಕು. ಒಂದು ವೇಳೆ ರಾಣಿ ಜೇನು ಇಲ್ಲ ಎಂದಾದರೂ, ಗೂಡನ್ನು ಪ್ರತ್ಯೇಕವಾಗಿಸಲು ಸಮಸ್ಯೆ ಇಲ್ಲ. ಆದರೆ ಜೇನು ಕುಟುಂಬ ಭದ್ರವಾಗಿರಬೇಕು. ಇಲ್ಲದೇ ಹೋದರೆ, ರಾಣಿ ಜೇನು ಆಗುವವರೆಗೆ ಕಾಯಬೇಕು ಎಂದ ಅವರು, ಜೇನಿನ ಕುರಿತಾಗಿ ಮಾಹಿತಿ ನೀಡಿದರು.

ಕೃಷಿಕರ ಮನೆ ಬಾಗಿಲಿಗೆ ಸುದ್ದಿ ಕೃಷಿ ಮಾಹಿತಿ:
ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ. ಯು.ಪಿ. ಶಿವಾನಂದ ಮಾತನಾಡಿ, ಮನೆ ಬಾಗಿಲಿಗೆ ಕೃಷಿ ಮಾಹಿತಿಯನ್ನು ತಲುಪಿಸುವ ಉದ್ದೇಶದಿಂದ ಪುತ್ತೂರು, ಸುಳ್ಯ, ಬೆಳ್ತಂಗಡಿಯಲ್ಲಿ ಸುದ್ದಿ ಕೃಷಿ ಮಾಹಿತಿ ಕೇಂದ್ರವನ್ನು ಪ್ರಾರಂಭಿಸಲಾಗುತ್ತಿದೆ. ಗಿಡ ನೆಡುವಲ್ಲಿಂದ ಹಿಡಿದು ಗೊಬ್ಬರ, ಯಂತ್ರೋಪಕರಣ ಸೇರಿದಂತೆ ಎಲ್ಲಾ ಮಾಹಿತಿಯನ್ನು ಇಲ್ಲಿ ನೀಡಲಾಗುವುದು. ಮನೆಯಲ್ಲಿ ಕುಳಿತುಕೊಂಡೇ ಸವಲತ್ತುಗಳ ಮಾಹಿತಿ ಪಡೆದುಕೊಳ್ಳಲು ಈ ಮೂಲಕ ಸಾಧ್ಯ. ಕೃಷಿಗೆ ಸಂಬಂಧಪಟ್ಟ ಸಮಸ್ಯೆಗಳ ಬಗ್ಗೆಯೂ ಕೃಷಿ ತಜ್ಞರಿಂದಲೇ ಪರಿಹಾರದ ಮಾರ್ಗ ತೋರಿಸಿಕೊಡುವ ಕೆಲಸವನ್ನು ಸುದ್ದಿ ಮಾಡಲಿದೆ ಎಂದರು.

ಕೃಷಿ ಸ್ವಾತಂತ್ರ್ಯ ಎನ್ನುವ ಪರಿಕಲ್ಪನೆಯಡಿ ಸುದ್ದಿ ಕೃಷಿಕರನ್ನು ತಲುಪುವ ಕೆಲಸ ಮಾಡುತ್ತಿದೆ. ಕೃಷಿಕರಿಗೆ ಅಗತ್ಯವಾದ ಮಾಹಿತಿ ನೀಡುವ ಜೊತೆಗೆ, ಇಲಾಖೆಗಳ ಸೌಲಭ್ಯವನ್ನು ಕೃಷಿಕರಿಗೆ ತಲುಪಿಸುವುದು ಸುದ್ದಿಯ ಉದ್ದೇಶ. ಕೃಷಿಕರಿಗೆ ಮೋಸ ಆಗದ ರೀತಿಯಲ್ಲಿ ಸುದ್ದಿ ಕೃಷಿಕರ ಜೊತೆಗಿರಲಿದೆ ಎಂದು ಡಾ. ಯು.ಪಿ. ಶಿವಾನಂದ್ ಹೇಳಿದರು.

ಇದೇ ಸಂದರ್ಭ ಜೇನು ಕೃಷಿಕ ಮನಮೋಹನ ಅರಂಭ್ಯ ಅವರು ಜೇನು ಗೂಡನ್ನು ಪಾಲು ಮಾಡುವ ವಿಧಾನವನ್ನು ಪ್ರಾತ್ಯಕ್ಷಿಕೆಯ ಮೂಲಕ ವಿವರಿಸಿದರು. ತರಬೇತುದಾರರಾದ ರಾಧಾಕೃಷ್ಣ ಬೆಟ್ಟಂಪಾಡಿ, ಮೂಲಚಂದ್ರ ಗೋಳಿತ್ತೊಟ್ಟು ಮಾಹಿತಿ ನೀಡಿದರು.

ಜೇನು ಕೃಷಿಯ ಮಾಹಿತಿ ಕಾರ್ಯಕ್ರಮದಲ್ಲಿ ಭ್ರಷ್ಟಾಚಾರ ವಿರುದ್ಧ, ಕೃಷಿ ಸ್ವಾತಂತ್ರ್ಯದ ಪರ ಘೋಷಣೆ ಹಾಕಲಾಯಿತು

ಭ್ರಷ್ಟಾಚಾರ ವಿರುದ್ಧ, ಕೃಷಿ ಸ್ವಾತಂತ್ರ್ಯದ ಪರ ಘೋಷಣೆ
ರೈತರಿಗೆ ಜೇನುಕೃಷಿ ತರಬೇತಿ ಕಾರ್ಯಾಗಾರದಲ್ಲಿ ಲಂಚ ಭ್ರಷ್ಟಾಚಾರ ವಿರುದ್ಧದ ಹಾಗೂ ಕೃಷಿ ಸ್ವಾತಂತ್ರ್ಯದ ಪರವಾಗಿ ಘೋಷಣೆ ಹಾಕಲಾಯಿತು. ಸುಳ್ಯದಿಂದ ಆಗಮಿಸಿದ ಜೇನು ಕೃಷಿಯ ಆಸಕ್ತರು ಲಂಚ ಭ್ರಷ್ಟಾಚಾರ ವಿರುದ್ಧ ಹಾಗೂ ಕೃಷಿ ಸ್ವಾತಂತ್ರ್ಯದ ಪರವಾಗಿ ಘೋಷಣೆ ಕೂಗುವ ಮೂಲಕ, ಅಭಿಯಾನಕ್ಕೆ ಬೆಂಬಲ ಸೂಚಿಸಿದರು.

LEAVE A REPLY

Please enter your comment!
Please enter your name here