ಪ್ರಧಾನಿ ಕಾರ್ಯಕ್ರಮ: ಉಪ್ಪಿನಂಗಡಿ ಕಡೆಯಿಂದ ಐದು ಸಾವಿರ ಜನ

0

ಉಪ್ಪಿನಂಗಡಿ: ಪ್ರಧಾನಿ ನರೇಂದ್ರ ಮೋದಿಯವರ ಮಂಗಳೂರಿನ ಕಾರ್ಯಕ್ರಮಕ್ಕೆ ಬಿಜೆಪಿ ಮಹಾ ಶಕ್ತಿ ಕೇಂದ್ರದ ನಾಲ್ಕು ಗ್ರಾಮಗಳಿಂದ ಐದು ಸಾವಿರಕ್ಕೂ ಅಧಿಕ ಕಾರ್ಯಕರ್ತರು ಭಾಗವಹಿಸಲಿದ್ದು, ಇದಕ್ಕಾಗಿ 24 ಬಸ್‌ಗಳನ್ನು ಸಿದ್ಧಗೊಳಿಸಲಾಗಿದೆ ಎಂದು ಬಿಜೆಪಿ ಮುಖಂಡ ಅಪ್ಪಯ್ಯ ಮಣಿಯಾಣಿ ತಿಳಿಸಿದರು.

ಕಾರ್ಯಕ್ರಮಕ್ಕೆ ತೆರಳುವ ಬಗ್ಗೆ ಉಪ್ಪಿನಂಗಡಿಯ ಶ್ರೀ ಶಾರದಾ ಕಲಾ ಮಂದಿರದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಮಹಾಶಕ್ತಿ ಕೇಂದ್ರದ ವ್ಯಾಪ್ತಿಗೊಳಪಡುವ ಬಜತ್ತೂರು, ಹಿರೇಬಂಡಾಡಿ, 34 ನೆಕ್ಕಿಲಾಡಿ ಹಾಗೂ ಉಪ್ಪಿನಂಗಡಿ ಗ್ರಾಮಗಳಿಂದ 24 ಬಸ್‌ನಲ್ಲಿ ಎರಡು ಸಾವಿರಷ್ಟು ಕಾರ್ಯಕರ್ತರು ಹಾಗೂ ಸ್ವಂತ ವಾಹನಗಳಲ್ಲಿ ಮೂರು ಸಾವಿರದಷ್ಟು ಕಾರ್ಯಕರ್ತರು ಸ್ವಯಂಪ್ರೇರಿತವಾಗಿ ಬರಲು ಒಪ್ಪಿಕೊಂಡಿದ್ದಾರೆ. ಬೆಳಗ್ಗೆ 8:30ರ ವೇಳೆಗೆ ಆಯಾ ಗ್ರಾಮಗಳಿಂದ ಬಸ್‌ಗಳು ಹೊರಡಲಿದ್ದು, 34 ನೆಕ್ಕಿಲಾಡಿ ಬಳಿ ರಾಷ್ಟ್ರೀಯ ಹೆದ್ದಾರಿಯಿಂದ ನಾಲ್ಕು ಗ್ರಾಮಗಳ ಎಲ್ಲಾ ವಾಹನಗಳು ಒಟ್ಟಾಗಿ ತೆರಳಲಿವೆ ಎಂದರು.

ಈ ಸಂದರ್ಭ ಬಿಜೆಪಿ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಮುಕುಂದ ಗೌಡ ಬಜತ್ತೂರು, ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷೆ ಉಷಾ ಮುಳಿಯ, ಸದಸ್ಯರಾದ ಸುರೇಶ ಅತ್ರೆಮಜಲು, ಧನಂಜಯ, ಉಪ್ಪಿನಂಗಡಿ ಸಿಎ ಬ್ಯಾಂಕ್ ಉಪಾಧ್ಯಕ್ಷ ಸುನೀಲ್ ದಡ್ಡು, ಬಿಜೆಪಿ ಪ್ರಮುಖರಾದ ಸಂತೋಷ್ ಕುಮಾರ್ ಪಂರ್ದಾಜೆ, ಎನ್. ಉಮೇಶ್ ಶೆಣೈ, ಯೊಗೀಶ ಶೆಣೈ, ಶ್ಯಾಮಲ ಶೆಣೈ, ರಾಮಚಂದ್ರ ಮಣಿಯಾಣಿ, ಹಮ್ಮಬ್ಬ ಶೌಕತ್ ಅಲಿ ದೀಪಕ್ ಪೈ, ನಿತಿನ್ ತಾರಿತ್ತಡಿ, ಆನಂದ ಕುಂಟಿನಿ, ಲಕ್ಷ್ಮೀಶ, ಜಯರಾಮ ಆಚಾರ್ಯ, ಪ್ರಸಾದ್, ಗಣೇಶ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here