ಪುಣ್ಚತ್ತಾರಿನಲ್ಲಿ 5ನೇ ವರ್ಷದ ಸಂಭ್ರಮದ ಸಾರ್ವಜನಿಕ ಶ್ರೀ ಗಣೇಶೋತ್ಸವ

0

  • 100 ಭಜಕರಿಂದ ಕುಣಿತ ಭಜನೆ, ಹುಲಿ ಕುಣಿತ ಪ್ರದರ್ಶನ ಮೆರವಣಿಗೆಯಲ್ಲಿ ಮೆರುಗು

ಕಾಣಿಯೂರು: ಪುಣ್ಚತ್ತಾರು ಸಾರ್ವಜಕ ಶ್ರೀ ಗಣೇಶೋತ್ಸವ ಸಮಿತಿ ಇದರ ಆಶ್ರಯದಲ್ಲಿ ೫ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಪುಣ್ಚತ್ತಾರು ಶ್ರೀಹರಿ ಸಭಾಭವನದಲ್ಲಿ ಆ 31ರಂದು ವೈಭವದಿಂದ ನಡೆಯಿತು. ಅರ್ಚಕರಾದ ಪ್ರಶಾಂತ್ ಭಟ್ ಕಟ್ಟತ್ತಾರು ಅವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಿತು.

ಬೆಳಿಗ್ಗೆ ಶ್ರೀ ಗಣಪತಿ ಪ್ರತಿಷ್ಠೆ, ನಾಗತಂಬಿಲ, ಸಾರ್ವಜನಿಕ ಗಣಹೋಮ ನಡೆದು, ಬಳಿಕ ನಾವೂರು ಶ್ರೀ ಸುಬ್ರಹ್ಮಣ್ಯ ಭಜನಾ ಮಂಡಳಿ ಹಾಗೂ ಪುಣ್ಚತ್ತಾರು ಶ್ರೀ ಹರಿ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ, ಮಧ್ಯಾಹ್ನ ಶ್ರೀ ದೇವರಿಗೆ ಮಹಾಪೂಜೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಟೈಗರ್ ಫ್ರೆಂಡ್ಸ್ ಕಲ್ಲಡ್ಕ ಇವರಿಂದ ಹುಲಿ ಕುಣಿತ ಪ್ರದರ್ಶನ, ಎಂ.ಎಸ್ ಬ್ಯಾಂಡ್ ಸೆಟ್ ಪುತ್ತೂರು ಇವರಿಂದ ವಿಶೇಷ ಪ್ರದರ್ಶನ ನಡೆಯಿತು. ಬಳಿಕ ಮಹಾಪೂಜೆ, ಗಣಪತಿ ವಿಗ್ರಹ ವಿಸರ್ಜನಾ ಮೆರವಣಿಗೆ ನಡೆಯಿತು. ವಿಶೇಷ ಶೋಭಾಯಾತ್ರೆಯ ಸಂದರ್ಭದಲ್ಲಿ ಸದಾನಂದ ಆಚಾರ್ಯ ತರಬೇತುಗೊಳಿಸಿದ 100 ಮಂದಿ ಭಜಕರಿಂದ ಏಕಕಾಲದಲ್ಲಿ ಆಕರ್ಷಕ ಕುಣಿತ ಭಜನಾ ಮೆರವಣಿಗೆ ನಡೆಯಿತು. ಈ ಸಂದರ್ಭದಲ್ಲಿ ಪುಣ್ಚತ್ತಾರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ವಿಶ್ವನಾಥ ರೈ ಮಾಳ, ಉಪಾಧ್ಯಕ್ಷ ರಾಮಣ್ಣ ಗೌಡ ಮೂಡೈಮಜಲು, ಕಾರ್ಯದರ್ಶಿ ಮೋನಪ್ಪ ಬಂಡಾಜೆ, ಕೋಶಾಧಿಕಾರಿ ನೇಮಿರಾಜ್ ಕಡೀರ, ಜತೆ ಕಾರ್ಯದರ್ಶಿಗಳಾದ ದಿನೇಶ್ ಪೈಕ, ರವಿಶಂಕರ್ ಎನ್.ಟಿ ಸೇರಿದಂತೆ ಹಲವಾರು ಮಂದಿ ಭಾಗವಹಿಸಿದ್ದರು.

ಕಟ್ಟತ್ತಾರಿನಲ್ಲಿ ವಿಸರ್ಜನೆ: ಗಣಪತಿ ವಿಗ್ರಹ ವಿಸರ್ಜನಾ ವಿಶೇಷ ಶೋಭಾಯಾತ್ರೆಯು ಪುಣ್ಚತ್ತಾರು ಶ್ರೀ ಹರಿ ಸಭಾಭವನದಿಂದ ಹೊರಟು ನಾವೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ದ್ವಾರದ ಹತ್ತಿರ ತಿರುಗಿ ಏಲಡ್ಕವಾಗಿ ಕಟ್ಟತ್ತಾರು ನದಿಯಲ್ಲಿ ವಿಸರ್ಜನೆ ನಡೆಯಿತು.

ವೈಭವದ ಶೋಭಾಯಾತ್ರೆ: ಗಣಪತಿ ವಿಗ್ರಹ ವಿಸರ್ಜನಾ ವಿಶೇಷ ಶೋಭಾಯಾತ್ರೆಯು ವೈಭವದಿಂದ ನಡೆಯಿತು. ಮೆರವಣಿಗೆಯುದ್ದಕ್ಕೂ 100 ಮಂದಿ ಭಜಕರಿಂದ ಏಕಕಾಲದಲ್ಲಿ ಆಕರ್ಷಕ ಕುಣಿತ ಭಜನೆ, ಟೈಗರ್ ಫ್ರೆಂಡ್ಸ್ ಕಲ್ಲಡ್ಕ ಇವರಿಂದ ಹುಲಿ ಕುಣಿತ ಪ್ರದರ್ಶನ, ಎಂ.ಎಸ್ ಬ್ಯಾಂಡ್ ಸೆಟ್ ಪುತ್ತೂರು ಇವರಿಂದ ವಿಶೇಷ ಪ್ರದರ್ಶನ ನಡೆಯಿತು. ಮೆರವಣಿಗೆಯ ದಾರಿಯನ್ನು ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು.

LEAVE A REPLY

Please enter your comment!
Please enter your name here