ಸೇಡಿಯಾಪು ಫ್ರೆಂಡ್ಸ್ ಕ್ಲಬ್ ವತಿಯಿಂದ ಗಣೇಶ ಸಂಭ್ರಮ, ಡ್ಯಾನ್ಸ್ ಝಲಕ್, ಪ್ರತಿಭಾ ಪುರಸ್ಕಾರ

0

ಪುತ್ತೂರು: ಕೋಡಿಂಬಾಡಿಯ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ವತಿಯಿಂದ ಕೋಡಿಂಬಾಡಿ ಅಶ್ವತ್ಥಕಟ್ಟೆ ವಠಾರದಲ್ಲಿ ಆ.31ರಿಂದ ಸೆ.2ರವರೆಗೆ ನಡೆದ 39ನೇ ವರ್ಷದ ಸಾರ್ವಜನಿಕ‌ ಗಣೇಶೋತ್ಸವದ ಶೋಭಾಯಾತ್ರೆಯ ವೇಳೆ ಸೇಡಿಯಾಪು ಫ್ರೆಂಡ್ಸ್ ಕ್ಲಬ್ ವತಿಯಿಂದ ಸ್ಟೇಡಿಯಾಪು ಕ್ರೀಡಾಂಗಣದಲ್ಲಿ ‘ಗಣೇಶ ಸಂಭ್ರಮ, ರಾಜ್ ಕ್ರಿಯೇಶನ್ಸ್ ಮತ್ತು ಸ್ಥಳೀಯ ಅಂಗನವಾಡಿ ಕೇಂದ್ರದ ಪುಟಾಣಿಗಳಿಂದ ಡ್ಯಾನ್ಸ್ ಝಲಕ್ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ’ ಕಾರ್ಯಕ್ರಮ ಜರಗಿತು.


ಪ್ರದ್ವಿನ್ ಜೆ.ಬಿ. ಬದಿನಾರು ಮತ್ತು ಚಾರ್ವಿ ಸಿ.ಬಿ. ಬದಿನಾರುರವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು.‌ ನಿವೃತ್ತ ಸೈನಿಕ ಪುಷ್ಪರಾಜ ಗೌಡ ಬಾರ್ತಿಕುಮೇರುರವರು ಕಾರ್ಯಕ್ರಮ ಉದ್ಘಾಟಿಸಿದರು.‌ ಫ್ರೆಂಡ್ಸ್ ಕ್ಲಬ್ ಗೌರವಾಧ್ಯಕ್ಷ ಜಯಪ್ರಕಾಶ್ ಬದಿನಾರು, ಅಧ್ಯಕ್ಷ ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಸತೀಶ್ ಮಡಿವಾಳ, ಮಾಜಿ ಅಧ್ಯಕ್ಷ ಅಶೋಕ್ ಪ್ರಭು, ಮಾಜಿ ಕಾರ್ಯದರ್ಶಿ ರಫೀಕ್ ಅನಿಲಕೋಡಿ, ಸದಸ್ಯರಾದ ಹರೀಶ್ ಪ್ರಭು, ಸಂತೋಷ್, ಹೇಮಂತ್ ಮೊದಲಾದವರು ಉಪಸ್ಥಿತರಿದ್ದರು.

ಪ್ರತಿಭಾ ಪುರಸ್ಕಾರ:
ರಾಜ್ಯ ಸಮಾಜ ಕಲ್ಯಾಣ ಮಂಡಳಿಯ ಮಾಜಿ ಅಧ್ಯಕ್ಷೆ ದಿವ್ಯಪ್ರಭಾ ಗೌಡ ಚಿಲ್ತಡ್ಕರವರು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನೆರವೇರಿಸಿದರು.‌ ಕೋಡಿಂಬಾಡಿ ಗ್ರಾ.ಪಂ.ಮಾಜಿ ಅಧ್ಯಕ್ಷ ಎ. ಮುರಳೀಧರ ರೈ ಮಠಂತಬೆಟ್ಟು, ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಮ ಕೆ. ಬಿ., ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಎಂ.ನಿರಂಜನ ರೈ ಮಠಂತಬೆಟ್ಟು ಮತ್ತು ಉದ್ಯಮಿ ಮಾಧವ ಗೌಡ ಬೆಳ್ಳಾರೆ ಉಪಸ್ಥಿತರಿದ್ದರು. ಎಂ.ಎಸ್ಸಿ. ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕ ಪಡೆದಿರುವ ವಂದನಾ ಸಾಮಂತ್ ನೆಕ್ಕರಾಜೆ, ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲೆ ನಿರ್ಮಿಸಿರುವ ಅನ್ವಿಕಾ ಪ್ರಭು ದಾರಂದಕುಕ್ಕು, ನೆಕ್ಕಿಲಾಡಿ ರಾಘವೇಂದ್ರ ಲೈಟ್ಸ್ ಮತ್ತು ಸೌಂಡ್ಸ್ ಮಾಲಕ ದಿನೇಶ್ ಗೌಡ ಪನಿತೋಟ, ರಾಜ್ ಕ್ರಿಯೇಷನ್ಸ್ ನ ಶ್ರೀನಿ ಆಚಾರ್ಯ ಕೊಂಬಕೋಡಿ ಮೊದಲಾದವರನ್ನು ಗೌರವಿಸಲಾಯಿತು. ಜಯಪ್ರಕಾಶ್ ಬದಿನಾರು ಸ್ವಾಗತಿಸಿ, ಸತೀಶ್ ಮಡಿವಾಳ ವಂದಿಸಿದರು. ಪದ್ಮರಾಜ್ ಚಾರ್ವಾಕ ಮತ್ತು ದೀಪಕ್ ಉಪ್ಪಿನಂಗಡಿ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here