ಪ್ರಧಾನಿ ಮೋದಿ ಪಾಲ್ಗೊಂಡಿದ್ದ ಕಾರ್ಯಕ್ರಮಕ್ಕೆ ತೆರಳಿದ್ದ  ಐವರ್ನಾಡಿನ ವ್ಯಕ್ತಿ ನಾಪತ್ತೆ

0

ಬೆಳ್ಳಾರೆ: ಮಂಗಳೂರಿನಲ್ಲಿ ಪ್ರಧಾನಿ ಪಾಲ್ಗೊಂಡಿದ್ದ ಕಾರ್ಯಕ್ರಮಕ್ಕೆ ತೆರಳಿದ್ದ ವ್ಯಕ್ತಿಯೊಬ್ಬರು ವಾಪಸ್ಸು ಮನೆಗೆ ಬಾರದೆ ನಾಪತ್ತೆಯಾಗಿರುವುದಾಗಿ ತಿಳಿದು ಬಂದಿದೆ. ಸುಳ್ಯ ತಾಲೂಕು ಬೆಳ್ಳಾರೆ ಠಾಣಾ ವ್ಯಾಪ್ತಿಯ  ಐವರ್ನಾಡಿನ ಸದಾಶಿವ ಪಾಲೆಪ್ಪಾಡಿ ಎಂಬವರು ಕಾಣೆಯಾದ ವ್ಯಕ್ತಿ.
ಸೆ.2 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಪಾಲ್ಗೊಂಡಿದ್ದ ಕಾರ್ಯಕ್ರಮಕ್ಕೆ ಹೋದವರು ವಾಪಾಸು ಮನೆಗೆ ಬರಲಿಲ್ಲ ಎನ್ನಲಾಗಿದೆ.  ಈ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ದೂರು ನೀಡಿರುವುದಾಗಿ ತಿಳಿದು ಬಂದಿದೆ.

LEAVE A REPLY

Please enter your comment!
Please enter your name here