ಪುತ್ತೂರು : ಕರ್ನಾಟಕ ಸರ್ಕಾರ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಕೊಡಿಯಾಲ್‌ಬೈಲು, ಮಂಗಳೂರು 2022-23ನೇ ಶೈಕ್ಷಣಿಕ ವರ್ಷದ ಜಿಲ್ಲೆಯ ಅಟಲ್ ಟಿಂಕರಿಂಗ್ ಪ್ರಯೋಗಾಲಯದ ಮುಖ್ಯಸ್ಥರ/ನೋಡಲ್ ಶಿಕ್ಷಕರ/ವಿದ್ಯಾರ್ಥಿಗಳ ಒಂದು ದಿನದ ಕಾರ್ಯಾಗಾರ ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆಯಿತು. ದಕ್ಷಿಣ ಕನ್ನಡ ಅಟಲ್ ಪ್ರಯೋಗ ಶಾಲೆ ಹೊಂದಿರುವ ಬೇರೆ ಬೇರೆ ಶಾಲೆಯ ಅಟಲ್ ನೋಡಲ್ ಶಿಕ್ಷಕರಿಗೆ ಹಾಗೂ ಪ್ರತಿ ಶಾಲೆಯ 5 ವಿದ್ಯಾರ್ಥಿಗಳಿಗೆ ಸೆನ್ಸರ್ ಆಧಾರಿತ ಮಾದರಿಗಳನ್ನು ತಯಾರಿಸುವುದರ ಬಗ್ಗೆ ಅಟಲ್ ಶಿಕ್ಷಕ ಶಿವಪ್ರಸಾದ್ ತರಬೇತಿ ನೀಡಿದರು. ಡಯೆಟ್‌ನ ಉಪನ್ಯಾಸಕಿ ಹಾಗೂ ಜಿಲ್ಲಾ ಅಟಲ್ ನೋಡಲ್ ಅಧಿಕಾರಿ ವೇದಾವತಿ ದೀಪ ಬೆಳಗಿಸಿ ಉದ್ಘಾಟಿಸಿದರು. ಶಾಲಾ ಸಂಚಾಲಕ ವಸಂತ ಸುವರ್ಣ ಮಾತನಾಡಿ ಶುಭಹಾರೈಸಿದರು.
ಅಟಲ್ ಶಿಕ್ಷಕ ಪುಷ್ಪಾವತಿ ಸ್ವಾಗತಿಸಿದರು. ವಿವೇಕಾನಂದ ಕನ್ನಡ ಮಾಧ್ಯಮ ಪ್ರೌಢಶಾಲಾ ಮುಖ್ಯಗುರು ಆಶಾ ಬೆಳ್ಳಾರೆ ಪ್ರಾಸ್ತಾವಿಕ ಮಾತನಾಡಿದರು. ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಅಧ್ಯಕ್ಷ ರಮೇಶ್ಚಂದ್ರ, ರೀಜನಲ್ ಅಟಲ್ ನೋಡಲ್ ಅಧಿಕಾರಿ ಹಾಗೂ ಶ್ರೀರಾಮಕೃಷ್ಣ ಪ್ರೌಢಶಾಲೆಯ ಮುಖ್ಯಗುರು ಜಯಲಕ್ಷ್ಮೀ, ವಿವೇಕಾನಂದ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲಾ ಮುಖ್ಯಗುರು ನಳಿನಿ ವಾಗ್ಲೆ ಉಪಸ್ಥಿತರಿದ್ದರು. ಸುಮಾರು 30 ಶಾಲೆಗಳ ಒಟ್ಟು 200 ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಕಾರ್ಯಾಗಾರದಲ್ಲಿ ಭಾಗವಹಿಸಿದರು.