ಕುಳ ಒಕ್ಕಲಿಗ ಸ್ವಸಹಾಯ ಸಂಘಗಳ ಒಕ್ಕೂಟಕ್ಕೆ ಆಯ್ಕೆ

0

ಪುತ್ತೂರು : ಬಂಟ್ವಾಳ ತಾಲೂಕಿನ ಕುಳದಲ್ಲಿ ಒಕ್ಕಲಿಗ ಸ್ವಸಹಾಯ ಸಂಘಗಳ ಒಕ್ಕೂಟದ ಪದಾಧಿಕಾರಿಗಳ ಆಯ್ಕೆ ನಡೆಯಿತು. ಒಕ್ಕೂಟದ ಅಧ್ಯಕ್ಷರಾಗಿ ಸಂಜೀವ ಪಿ.ಗೌಡ ಪೆಲತ್ತಿಂಜ, ಕಾರ್ಯದರ್ಶಿಯಾಗಿ ಚಂದ್ರಕಲಾ ಪಾಂಡೇಲು, ಉಪಾಧ್ಯಕ್ಷರಾಗಿ ಸುಂದರ ಗೌಡ ಪಾಂಡೇಲು, ಜತೆ ಕಾರ್ಯದರ್ಶಿಯಾಗಿ ಚೈತ್ರ ಗುಂಪೆಕಲ್ಲು, ಕೋಶಾಧಿಕಾರಿಯಾಗಿ ಸವಿತಾ ಅಡ್ಯಾಲುರವರನ್ನು ಆಯ್ಕೆ ಮಾಡಲಾಯಿತು. ಮೇಲ್ವಿಚಾರಕಿ ಸುಮಲತಾ ಒಕ್ಕೂಟ ಹಾಗೂ ತ್ರೈಮಾಸಿಕ ಸಭೆಯ ಮಾಹಿತಿ ತಿಳಿಸಿದರು. ಪ್ರೇರಕಿ ಮೋಹಿನಿ ಮಾತನಾಡಿ ಶುಭಹಾರೈಸಿದರು. ಚಂದ್ರಕಲಾ ಸ್ವಾಗತಿಸಿ ಚೈತ್ರ ವಂದಿಸಿದರು.

LEAVE A REPLY

Please enter your comment!
Please enter your name here