ವಿಕ್ಟರ್ ಪ್ರೌಢಶಾಲೆಯ ವಿಜ್ಞಾನ ನಾಟಕ ತಂಡವು ಜಿಲ್ಲಾ ಮಟ್ಟಕ್ಕೆ

0

ಪುತ್ತೂರು: ಕರ್ನಾಟಕ ರಾಜ್ಯ ಸರಕಾರ, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಇದರ ವತಿಯಿಂದ ಏರ್ಪಡಿಸಲಾದ ಪುತ್ತೂರು ತಾಲೂಕು ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಅಭಿನಯಿಸಿದ `ಆ ದಿನಗಳು’ ಎಂಬ ವಿಜ್ಞಾನ ನಾಟಕವು ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದೆ.

ಪತ್ರಕರ್ತ, ರಂಗ ನಿರ್ದೇಶಕ ಮೌನೇಶ ವಿಶ್ವಕರ್ಮ ರಚಿಸಿ, ನಿರ್ದೇಶಿಸಿರುವ ಈ ನಾಟಕದಲ್ಲಿ ವಿದ್ಯಾರ್ಥಿನಿಯರಾದ ಅನಘಾ ಬಿ.ಕೆ, ಅನ್ವಿತಾ ಆರ್.ಹೆಚ್, ಕೆ.ಯಂ ವಿದ್ಯಾಶ್ರೀ, ಸೌಜನ್ಯ, ಯಶ್ಮಿತಾ ಕೆ, ವಂದ್ಯ ಪ್ರಭು ಜಿ, ಸಾನ್ವಿ ಆರ್ ರೈ, ನಿಶ್ಮಿತಾ ಭಾಗವಹಿಸಿದ್ದರು. ಶಾಲಾ ಮುಖ್ಯ ಶಿಕ್ಷಕಿ ರೋಸಲಿನ್ ಪ್ಲೇವಿ ಲೋಬೊರವರ ಮಾರ್ಗದರ್ಶನದಲ್ಲಿ ಶಿಕ್ಷಕಿ ಇವಾನ್ ಮಸ್ಕರೇನ್ಹಸ್‌ರವರು ವಿದ್ಯಾರ್ಥಿಗಳ ತಂಡವನ್ನು ಮುನ್ನೆಡೆಸಿದ್ದರು ಎಂದು ಶಾಲಾ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here