ಪಾಪೆಮಜಲಿನ ಮುಖ್ಯ ಶಿಕ್ಷಕಿಗೆ ಎನ್.ಎಸ್.ಯು.ಐ ಪುತ್ತೂರು ಘಟಕದಿಂದ ಸನ್ಮಾನ:ಬಾತೀಶ್ ಅಳಕೆಮಜಲು

0

ಪುತ್ತೂರು: ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಲಂಚ ಕೊಟ್ಟು ಬರುವಂತಹ ಪ್ರಶಸ್ತಿ ಅಲ್ಲ,ಅದು ಕೇವಲ ತಾಲೂಕಿಗಷ್ಟೇ ಅಲ್ಲದೆ ಇಡೀ ಜಿಲ್ಲೆಯೇ ಪ್ರಶಂಸೆ ವ್ಯಕ್ತಪಡಿಸುವ ಪ್ರಶಸ್ತಿಯಾಗಿದೆ. ಆದರೆ ಜಿಲ್ಲಾ ಸಮಿತಿಯಿಂದ ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ಅರಿಯಡ್ಕ ಗ್ರಾಮದ ಪಾಪೆಮಜಲು ಸ.ಹಿಪ್ರ.ಶಾಲೆಯ ಮುಖ್ಯ ಶಿಕ್ಷಕಿ ತರೇಜ್ ಎಂ ಸಿಕ್ವೇರಾ ಅವರಿಗೆ ಎರಡು ಶಿಕ್ಷಕರು ಸಿಕ್ವೇರಾ ಅವರ ಮನೆಗೆ ಬಂದು ತಮಗೆ ಮನೆಗೇ ಪ್ರಶಸ್ತಿ ತಲುಪಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿರುವುದು ಶಿಕ್ಷಕ ವೃಂದಕ್ಕೆ ಮಾಡಿರುವ ಅವಮಾನವಾಗಿದೆ.

ಎನ್.ಎಸ್.ಯು.ಐ ಪುತ್ತೂರು ಘಟಕವು ಈ ಘಟನೆಯನ್ನು ಖಂಡಿಸುತ್ತದೆ ಮತ್ತು ಶಿಕ್ಷಕಿಗೆ ದೊಡ್ಡ ಮಟ್ಟದಲ್ಲಿ ಸನ್ಮಾನ ಮಾಡುತ್ತೇವೆ ಈ ಘಟನೆಯಲ್ಲಿ ಶಿಕ್ಷಕಿಗೆ ಅವಮಾನ ಮಾಡಿದವರಿಗೆ ತಕ್ಕ ಶಿಕ್ಷೆಯಾಗಬೇಕು ಇಲ್ಲದಿದ್ದಲ್ಲಿ ಶಾಲೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸುತ್ತೇವೆ ಎಂದು ಎನ್.ಎಸ್.ಯು.ಐ ಜಿಲ್ಲಾ ಕಾರ್ಯದರ್ಶಿ ಬಾತೀಶ್ ಅಳಕೆಮಜಲು ಹೇಳಿದರು.

ಅವರು ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸೆ.7ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಮಂಗಳೂರು ವಿಶ್ವವಿದ್ಯಾನಿಲಯವು ದ್ವಿತೀಯ ಸೆಮಿಸ್ಟರ್‌ನ ಪರೀಕ್ಷೆಯಲ್ಲಿ ಪ್ರಥಮ ಸೆಮಿಸ್ಟರ್ ಪ್ರಶ್ನೆಪತ್ರಿಕೆ ನೀಡದ್ದಾರೆ. ಈ ಮೂಲಕ ಮತ್ತೆ ವಿಶ್ವವಿದ್ಯಾನಿಲಯ ಉದ್ಧಟತನ ತೋರಿಸಿದೆ. ಈ ಹಿಂದೆ ತನ್ನ ಉತ್ತಮ ನಿರ್ಧಾರಗಳ ಮೂಲಕ ಉತ್ತಮ ಹೆಸರು ಪಡೆದಿದ್ದ ವಿಶ್ವವಿದ್ಯಾನಿಲಯ ಮತ್ತೆ ಅಧಃಪತನದತ್ತ ಸಾಗುತ್ತಿದೆ. ಆದಷ್ಟು ಬೇಗ ಈ ಎಲ್ಲಾ ಲೋಪದೋಷಗಳನ್ನು ಸರಿಪಡಿಸಿ ಮಂಗಳೂರು ವಿಶ್ವವಿದ್ಯಾನಿಲಯವು ವಿದ್ಯಾರ್ಥಿಗಳಿಗೆ ಪೂರಕವಾಗಿ ಕೆಲಸ ಮಾಡಬೇಕು ಇಲ್ಲದಿದ್ದಲ್ಲಿ ಆ ಬಗ್ಗೆಯೂ ಎನ್.ಎಸ್.ಯು.ಐ ಹೋರಾಟ ಮಾಡಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಎನ್.ಎಸ್.ಯು.ಐ ಪುತ್ತೂರು ಘಟಕದ ಅಧ್ಯಕ್ಷ ಚಿರಾಗ್, ಕಾರ್ಯದರ್ಶಿ ಎಡ್ವರ್ಡ್, ನಗರ ಕಾರ್ಯದರ್ಶಿ ಆಯಸ್ಟನ್ ಫೆರ್ನಾಂಡೀಸ್ ಉಪಸ್ಥಿತರಿದ್ದರು.

ಜಿಲ್ಲಾ ಪ್ರಶಸ್ತಿಗೆ ಭಾಜನರಾದ ಶಿಕ್ಷಕಿಗೆ ತಾ.ಪಂ ನಿಕಟಪೂರ್ವ ಅಧ್ಯಕ್ಷರ ಒತ್ತಡ, ಶಾಸಕರಿಂದ ಬೆದರಿಸುವ ತಂತ್ರ – ಕಾಂಗ್ರೆಸ್ ಆರೋಪ

LEAVE A REPLY

Please enter your comment!
Please enter your name here