ಪ್ರಸಿದ್ಧ ಕಂಪೆನಿಗಳ ಟೈಯರ್ ಮಳಿಗೆ ಟಯರ್ ಲ್ಯಾಂಡ್ ಶುಭಾರಂಭ

0

ಪುತ್ತೂರು : ಪ್ರಸಿದ್ಧ ಕಂಪನಿ ಟಯರಗಳು, ವೀಲ್ ಬ್ಯಾಲೆನ್ಸಿಂಗ್, ಫಿಟ್ಟಿಂಗ್  ಸಹಿತ ಎಲ್ಲಾ ರೀತಿಯ ಸೇವೆಯನ್ನೊಳಗೊಂಡ ಮುಂಡೂರು, ಅಜಲಾಡಿ ಗುತ್ತಿನ ಪಾಲು ಮನೋಜ್ ಹಾಗೂ ನಿತೀಶ್ ಸಹೋದರರ ಮಾಲಕತ್ವದ ಮಳಿಗೆ ಟಯರ್ ಲ್ಯಾಂಡ್ ಮುಕ್ರಂಪಾಡಿ ಸುಭದ್ರ ಸಭಾಭವನದ ಮುಂಭಾಗದ ಬಾಬಾ ಕಾಂಪ್ಲೆಕ್ಸ್ ನಲ್ಲಿ ಸೆ.8 ರಂದು ಶುಭಾರಂಭಗೊಂಡಿತು.

ಅರ್ಚಕರಾದ ಸುಧೀರ್ ಅಡಿಗ ಪೂಜಾ ವಿಧಿವಿಧಾನ ನೆರವೇರಿಸಿ ಸಂಸ್ಥೆಯ ಶ್ರೇಯೋಭಿವೃದ್ಧಿಗೆ ಹಾರೈಸಿದರು. ಮಾಲಕರ ತಂದೆತಾಯಿ ಲಿಂಗಪ್ಪ ಗೌಡ, ಜಯಂತಿ ಲಿಂಗಪ್ಪ ದೀಪ ಪ್ರಜ್ವಲನೆ ಮಾಡುವ ಮೂಲಕ ಸಂಸ್ಥೆಯನ್ನು ಉದ್ಘಾಟಿಸಿದರು.

ಸೋಮಪ್ಪ ಗೌಡ ಗುತ್ತಿನ ಪಾಲು, ಸೀತಮ್ಮ, ಕೃಷಿಕ ರಘುನಾಥ ಶೆಟ್ಟಿ ಪೊಣೊಣಿ, ಮುಂಡೂರು ಗ್ರಾ. ಪಂ. ಸದಸ್ಯ ಉಮೇಶ್ ಅಂಬಟ, ಮುಂಡೂರು ಹಾಲು ಸೊಸೈಟಿ ನಿರ್ದೇಶಕ ಜಯಾನಂದ ಆಳ್ವ, ಕಾರ್ಕಳ ಕ್ರೈಸ್ಟ್ ಕಿಂಗ್ ಕಾಲೇಜಿನ ಉಪನ್ಯಾಸಕ ಉಮೇಶ್ ಬೆಳ್ಳಿಪ್ಪಾಡಿ, ನಯನ ಉಮೇಶ್ ಮತ್ತು ಪುತ್ರ ಯಶಸ್ ಬೆಳ್ಳಿಪ್ಪಾಡಿ, ಪದ್ಮಯ್ಯ ಗುತ್ತಿನ ಪಾಲು, ಕಾಂಪ್ಲೆಕ್ಸ್ ಮಾಲಕ ಸುಲೈಮಾನ್, ಭಾರತ್ ಚಿಕನ್ ಸೆಂಟರ್ ಮಾಲಕ ಮಹಮ್ಮದ್ ಡಿಂಬ್ರಿ, ಭರತ್ ಕೆರೆಕೋಡಿ, ರೋಶನ್ ಹಾಗೂ ಜ್ಞಾನೇಶ್ ಕಾಯರ್ಗ ಸಹಿತ ಮತ್ತಿತರರು ಇದ್ದರು.

LEAVE A REPLY

Please enter your comment!
Please enter your name here