ಸೆ.9-15: ನೆಲ್ಯಾಡಿ ಜೇಸಿಐ ಜೇಸಿ ಸಪ್ತಾಹ; ನಮಸ್ತೆ-2022

0

ನೆಲ್ಯಾಡಿ: ಜೆಸಿಐ ನೆಲ್ಯಾಡಿ ಇದರ ವತಿಯಿಂದ ಮಹಿಳಾ ಜೇಸಿ ನೆಲ್ಯಾಡಿ ಹಾಗೂ ಜೂನಿಯರ್ ಜೇಸಿವಿಂಗ್ ನೆಲ್ಯಾಡಿ ಇವರ ಸಹಯೋಗದೊಂದಿಗೆ ಜೇಸಿ ಸಪ್ತಾಹ; ನಮಸ್ತೆ-2022 ಸೆ.9ರಿಂದ 15ರ ತನಕ ನಡೆಯಲಿದೆ ಎಂದು ಜೆಸಿಐ ಅಧ್ಯಕ್ಷೆ ಜಯಂತಿ ಬಿ.ಎಂ., ಯೋಜನಾ ನಿರ್ದೇಶಕರಾದ ಶಿವಪ್ರಸಾದ್ ಹಾಗೂ ಸುಚಿತ್ರ ಜೆ.ಬಂಟ್ರಿಯಾಲ್ ತಿಳಿಸಿದ್ದಾರೆ.

ಸೆ.9ರಂದು ಬೆಳಿಗ್ಗೆ ಗೋಳಿತ್ತೊಟ್ಟು ಸರಕಾರಿ ಉ.ಹಿ.ಪ್ರಾ.ಶಾಲೆಯಲ್ಲಿ ಜೇಸಿ ಸಪ್ತಾಹ ಉದ್ಘಾಟನಾ ಸಮಾರಂಭ ನಡೆಯಲಿದ್ದು ಅಂತರ್ ರಾಷ್ಟ್ರೀಯ ಕ್ರೀಡಾಪಟು ಯೇಸುದಾಸ್‌ರವರು ಉದ್ಘಾಟಿಸಲಿದ್ದಾರೆ. ಈ ಸಮಾರಂಭದಲ್ಲಿ ವಲಯ ಮಟ್ಟದ ಕಬಡ್ಡಿ ಪಂದ್ಯಾಟ ವಿಜೇತರಿಗೆ ಜೆಸಿಐ ಟ್ರೋಫಿ ವಿತರಣೆ, ಬಡ ಕುಟುಂಬಗಳಿಗೆ ಆಹಾರದ ಕಿಟ್ ವಿತರಣೆ ನಡೆಯಲಿದೆ. ಸೆ.10ರಂದು ಸಂಜೆ ನೆಲ್ಯಾಡಿ ಸರಕಾರಿ ಉ.ಹಿ.ಪ್ರಾ.ಶಾಲೆಯಲ್ಲಿ ಜೆಸಿ ಕುಟುಂಬ ದಿನ ನಡೆಯಲಿದ್ದು ವಿಶ್ವನಾಥ ಶೆಟ್ಟಿ ಪ್ರಾಯೋಜಕತ್ವದಲ್ಲಿ ಲಹರಿ ಸಂಗೀತ ಕಲಾ ಕೇಂದ್ರ ಐಐಸಿಟಿ ನೆಲ್ಯಾಡಿ ಇವರಿಂದ ಗಾನಾಮೃತ ಹಾಗೂ ಜೇಸಿ ಕುಟುಂಬ ಸದಸ್ಯರಿಗೆ ವಿವಿಧ ಒಳಾಂಗಣ ಸ್ಪರ್ಧೆ, ನಿವೃತ್ತ ಜೇಸಿ ಶಿಕ್ಷಕರಿಗೆ ಗೌರವಾರ್ಪಣೆ ನಡೆಯಲಿದೆ. ಸೆ.11ರಂದು ಬೆಳಿಗ್ಗೆ ನೆಲ್ಯಾಡಿ ಸರಕಾರಿ ಉ.ಹಿ.ಪ್ರಾ.ಶಾಲೆಯಲ್ಲಿ ಸಾರ್ವಜನಿಕ ಕ್ರೀಡೋತ್ಸವ ನಡೆಯಲಿದೆ. ಸೆ.12ರಂದು ಮಧ್ಯಾಹ್ನ ನೆಲ್ಯಾಡಿ ಕರಂದಳದಲ್ಲಿರುವ ಘನತ್ಯಾಜ್ಯ ನಿರ್ವಹಣಾ ಘಟಕದಲ್ಲಿ ಪರಿಸರ ಸಂರಕ್ಷಣೆ ಗಿಡ ನೆಡುವುದು ಮತ್ತು ತ್ಯಾಜ್ಯ ನಿರ್ವಹಣೆ ಬಗ್ಗೆ ಮಾಹಿತಿ ಕಾರ್ಯಕ್ರಮ, ಘನತ್ಯಾಜ್ಯ ನಿರ್ವಹಣೆ ಮಹಿಳಾ ಸಿಬ್ಬಂದಿಗಳಿಗೆ ಗೌರವಾರ್ಪಣೆ ನಡೆಯಲಿದೆ. ಸೆ.13ರಂದು ಸಂಜೆ ನೆಲ್ಯಾಡಿ ಕೊಲ್ಯೊಟ್ಟು ಸೈಂಟ್ ಜೋಸೆಫ್ ಪ್ರಶಾಂತ ನಿವಾಸದಲ್ಲಿ ವಲಯಾಧ್ಯಕ್ಷರ ಅಧಿಕೃತ ಭೇಟಿ ಕಾರ್ಯಕ್ರಮದಡಿ ಪ್ರಶಾಂತ ನಿವಾಸಕ್ಕೆ ಹಣ್ಣುಹಂಪಲು ವಿತರಣೆ, ನೆಲ್ಯಾಡಿ ಹಾಗೂ ಕೊಣಾಲು ಶಾಲೆಗೆ ದತ್ತಿನಿಧಿ ವಿತರಣೆ ನಡೆಯಲಿದೆ. ಸೆ.14ರಂದು ಬೆಳಿಗ್ಗೆ ನೆಲ್ಯಾಡಿ ಅಶ್ವಿನಿ ಆಸ್ಪತ್ರೆಯಲ್ಲಿ ಮಧುಮೇಹ ರೋಗ ಪರೀಕ್ಷೆ ಮತ್ತು ಮಾಹಿತಿ ಕಾರ್ಯಕ್ರಮ ನಡೆಯಲಿದೆ.

ಸಮಾರೋಪ:
ಸೆ.15ರಂದು ಜೆಸಿ ಸಪ್ತಾಹದ ಸಮಾರೋಪ ನಡೆಯಲಿದ್ದು ಪೂರ್ವ ವಲಯಾಧಿಕಾರಿ ಪ್ರದೀಪ್ ಬಾಕಿಲ ವಿಶೇಷ ಆಹ್ವಾನಿತರಾಗಿ ಆಗಮಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಪರಿಸರ ಪ್ರೇಮಿ ದುರ್ಗಾಸಿಂಗ್, ಪ್ರಗತಿಪರ ಕೃಷಿಕ ಹೊಸಮನೆ ತುಕಾರಾಮ ರೈ, ಅಡಿಕೆ ವ್ಯಾಪಾರಸ್ಥ ಮಹಮ್ಮದ್ ನಝೀರ್‌ರವರಿಗೆ ಗೌರವಾರ್ಪಣೆ ನಡೆಯಲಿದೆ. ವಲಯ ತರಬೇತುದಾರರಾದ ಮೇರಿ ಜೋನ್‌ರವರಿಗೆ ಕಮಲಪತ್ರ ಪುರಸ್ಕಾರವೂ ಸಮಾರಂಭದಲ್ಲಿ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here