ಪುತ್ತೂರು: ಶ್ರೀರಾಮ ಗೆಳೆಯರ ಬಳಗ ಪುತ್ತಿಲ ಮತ್ತು ಸಾರ್ವಜನಿಕ ಶ್ರೀ ಶನೀಶ್ವರ ಪೂಜಾ ಸಮಿತಿಯಿಂದ ನರಿಮೊಗರು ಗ್ರಾಮದ ಮುಂಡೂರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದ ಶ್ರೀ ಗೌರಿಶಂಕರ ಸಭಾಭವನದಲ್ಲಿ ಪ್ರಥಮ ವರ್ಷದ ಅರ್ಧ ಏಕಹಾ ಭಜನೆಗೆ ಸೆ.10ರಂದು ಬೆಳಿಗ್ಗೆ ಚಾಲನೆ ನೀಡಲಾಯಿತು ಸಂಜೆ ಲೋಕ ಕಲ್ಯಾಣಾರ್ಥವಾಗಿ ಸಾರ್ವಜನಿಕ ಶ್ರೀ ಶನೀಶ್ವರ ಪೂಜೆಯು ಜರುಗಲಿದೆ.
ಬೆಳಿಗ್ಗೆ ಗಂಟೆ 6 ರಿಂದ ನಡೆಯುವ ಅರ್ಧ ಏಕಹಾ ಭಜನೆಯನ್ನು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯೆ ಶಕುಂತಳಾ ನೀಲಪ್ಪ ಪೂಜಾರಿ ಕುರೆಮಜಲು ಅವರು ದೀಪ ಪ್ರಜ್ವಲನೆ ಮಾಡುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಜಯಂತ ನಡುಬೈಲು, ಮುಂಡೂರು ಗ್ರಾ.ಪಂ ಸದಸ್ಯರಾದ ಅಶೋಕ್ ಕುಮಾರ್ ಪುತ್ತಿಲ, ಅರುಣ್ ಅನಿಲ್ ಕಣ್ಣರ್ನೂಜಿ, ಬಾಲಕೃಷ್ಣ ಪೂಜಾರಿ ಕುರೆಮಜಲು, ನರಿಮೊಗರು ಗ್ರಾ.ಪಂ ಉಪಾಧ್ಯಕ್ಷ ಸುಧಾಕರ್ ಕುಲಾಲ್, ಕರೆಮನೆಕಟ್ಟೆ ಹಾಲು ಉತ್ಪಾದಕರ ಸಹಕಾರಿ ಸಂಘದ ಉಪಾಧ್ಯಕ್ಷ ವಿಶ್ವನಾಥ ಗೌಡ ಕರೆಮನೆ ಉಪಸ್ಥಿತರಿದ್ದರು. ಸಮಿತಿ ಗೌರವಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ ಸ್ವಾಗತಿಸಿ, ಅಶೋಕ್ ಕುಮಾರ್ ಪುತ್ತಿಲ ವಂದಿಸಿದರು.