ಪುತ್ತೂರು : ಪುತ್ತೂರು ಕಿಲ್ಲೆ ಮೈದಾನದ ೬೫ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಅಂಗವಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಲಾ ಕೇಂದ್ರ ಪುತ್ತೂರಿನ ಡಿಂಡಿಮ ಕಲಾವಿದರಿಂದ ಸಂಗೀತ ಹಾಗೂ ನೃತ್ಯ ಕಾರ್ಯಕ್ರಮ ನಡೆಯಿತು.
ಕಲಾವಿದರಾದ ನವೀನ್ ಐತಾಳ್, ನಿತೇಶ್ ಅನಂತಾಡಿ, ಕೇಶವ ಆಚಾರ್ಯ, ಶರಣ್ಯ ರೈ, ಶ್ರಾವಣಿ ರೈ, ಆದರ್ಶ ಆಚಾರ್ಯ, ಮನ್ಮ ಬಳ್ಳಾಲ್, ಪ್ರಜ್ಞ ಕೋಡಿಪ್ಪಾಡಿ, ಗಾಯತ್ರಿ, ಸಂದೀಪ್, ಅಶ್ವಿಜ, ಶಿವಾನ್ವಿ ರೈ ಮಠಂತಬೆಟ್ಟು, ಸೃಷ್ಟಿ, ಪಂಪಾಶ್ರೀ, ಪಲ್ಲವಿ, ಸೋನಿ, ಜೆನ್ನಿಲಿಯರವರು ಹಾಡು ಮತ್ತು ನೃತ್ಯ ಕಾರ್ಯಕ್ರಮ ನಡೆಸಿಕೊಟ್ಟರು. ಕಲಾಕೇಂದ್ರದ ಅಧ್ಯಕ್ಷೆ ವಸಂತಿ ಆರ್ ಐತಾಳ್, ಅನಿತಾ ಚಿದಾನಂದ ಕಾಮತ್, ಸತ್ಯ ವಿ. ರೈ, ರೇಣುಕಾ ಎಂ. ರೈ, ಸ್ನೇಹ ಬಳ್ಳಾಲ್, ಶೀಲಾ ಜಯರಾಂ, ಸರಸ್ವತಿ, ಶರ್ಮಿಲಾ ಆಚಾರ್ಯ, ಹರಿಕೃಷ್ಣ ಆಚಾರ್ಯ ಮತ್ತು ಕರುಣಾಕರ ರೈ ಬಾಲ್ಯೊಟ್ಟು ಗುತ್ತು ಸಹಕರಿಸಿದರು. ಹರಿಣಾಕ್ಷಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.