ಉದನೆ ಹಾ.ಉ.ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆ:  6.41 ಲಕ್ಷ ರೂ.ನಿವ್ವಳ ಲಾಭ; ಶೇ.20 ಡಿವಿಡೆಂಡ್, 69 ಪೈಸೆ ಬೋನಸ್ ಘೋಷಣೆ

0

ನೆಲ್ಯಾಡಿ: ಉದನೆ ಹಾಲು ಉತ್ಪಾದಕರ ಸಹಕಾರ ಸಂಘದ ೨೦೨೧-೨೨ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಸಾಮಾನ್ಯ ಸಭೆ ಸೆ.೬ರಂದು ಸಂಘದ ಸಭಾಭವನದಲ್ಲಿ ನಡೆಯಿತು.


ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ವಿಶ್ವನಾಥ ಪೂಜಾರಿಯವರು ಮಾತನಾಡಿ, 2021-22ನೇ ಸಾಲಿನಲ್ಲಿ ಸಂಘವು 6,41, 542 ರೂ.ನಿವ್ವಳ ಲಾಭಗಳಿಸಿದೆ. ಲಾಭಾಂಶದಲ್ಲಿ ಸಂಘದ ಸದಸ್ಯರಿಗೆ ಶೇ.೨೦ ಡಿವಿಡೆಂಡ್ ಹಾಗೂ ಪ್ರತಿ ಲೀ.ಹಾಲಿಗೆ ೬೯ ಪೈಸೆ ಬೋನಸ್ ನೀಡಲಾಗುವುದು ಎಂದು ಹೇಳಿದರು. ವರದಿ ಸಾಲಿನಲ್ಲಿ ಸಂಘವು 4,42,4೦೦ ಲೀ.ಹಾಲನ್ನು ರೈತರಿಂದ ಸಂಗ್ರಹಿಸಿದೆ. ಇದರಲ್ಲಿ ೬,೨೭೭.೫ ಲೀ.ಹಾಲು ಸ್ಥಳೀಯವಾಗಿ ಮಾರಾಟ ಮಾಡಲಾಗಿದೆ. ಹಾಲು ಮಾರಾಟ, ಪಶು ಆಹಾರ ಮಾರಾಟ ಮತ್ತು ಲವಣ ಮಿಶ್ರಣ ಮಾರಾಟದಿಂದ ೧೫,೬೯,೧೬೩.೬೧ ರೂ., ಆದಾಯ ಬಂದಿರುತ್ತದೆ ಎಂದರು. ಕೆಎಂಎಫ್‌ನ ಪಶುವೈದ್ಯಾಧಿಕಾರಿ ಡಾ.ಸಚಿನ್‌ರವರು ಹೈನು ರಾಸುಗಳ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು. ವಿಸ್ತರಣಾಧಿಕಾರಿ ಯಮುನಾರವರು ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಹಾಗೂ ಹೈನುಗಾರರಿಗೆ ಒಕ್ಕೂಟದಿಂದ ಸಿಗುವ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಿದರು.

ಸಂಘದ ನಿರ್ದೇಶಕರಾದ ಕೆ.ಜೆ.ಜಾನ್, ರೆಜಿ ಎಲಿಯಾಸ್, ನಾರಾಯಣ ಮುಗೇರ, ಶಾರದಾ, ನಾರ್ಣಪ್ಪ ಗೌಡ, ಇ.ಎಂ.ರೋನ್ಸ್, ಚಂದ್ರಾವತಿ, ರತ್ನಾವತಿ, ಧನಂಜಯ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪ್ರತಿಭಾ ಪುರಸ್ಕಾರ:
ಸಂಘದ ಸದಸ್ಯರ ಮಕ್ಕಳಿಗೆ ನೀಡುವ ಪ್ರತಿಭಾಪುರಸ್ಕಾರವನ್ನು ದ್ವಿತೀಯ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಪವಿತ್ರ ಕೆ.ಎಂ., ಹಿತೇಶ್ ಓ., ಪ್ರಸಾದ್ ಬಿ., ಎಸ್‌ಎಸ್‌ಎಲ್‌ಸಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಶ್ರೇಯಾ ಎಂ.ಎನ್.,ರವರಿಗೆ ನೀಡಿ ಗೌರವಿಸಲಾಯಿತು.

ಬಹುಮಾನ ವಿತರಣೆ:
೨೦೨೧-೨೨ನೇ ಸಾಲಿನಲ್ಲಿ ಸಂಘಕ್ಕೆ ಅತೀ ಹೆಚ್ಚು ಹಾಲು ಹಾಕಿದ ಶಾರದಾ ಓರ್ಕಳ, ಕೆ.ಜೆ.ಜೋನ್ ಕೊಂಬಾರು, ಪ್ರವೀಣ ಉರ್ನಡ್ಕ ಮತ್ತು ಗುಣಮಟ್ಟದ ಹಾಲು ಪೂರೈಸಿದ ಮೇರಿ ಜಾರ್ಜ್, ಶೀನಪ್ಪ ಗೌಡ, ಪದ್ಮಯ್ಯ ಗೌಡರಿಗೆ ಪ್ರೋತ್ಸಾಹಕ ಬಹುಮಾನ ನೀಡಲಾಯಿತು.
ಕಾರ್ಯದರ್ಶಿ ಬಾಲಕೃಷ್ಣ ಗೌಡ ಸ್ವಾಗತಿಸಿ ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು. ನಿರ್ದೇಶಕ ಜಯಂತ ಗೌಡ ವಂದಿಸಿದರು. ಸಿಬ್ಬಂದಿಗಳಾದ ಯಶೋಧರ ಗೌಡ, ಸನಿಲ್‌ಕುಮಾರ್ ಸಹಕರಿಸಿದರು.

LEAVE A REPLY

Please enter your comment!
Please enter your name here