ಪುಣಚ ಪ್ರಾಥಮಿಕ ಸೇವಾ ಸಹಕಾರ ಸಂಘದ ಮಹಾಸಭೆ

0

 ರೂ.221.12ಕೋಟಿ ವ್ಯವಹಾರ, ರೂ.1,40 ಕೋಟಿ ಲಾಭ, ಶೇ.10 ಡಿವಿಡೆಂಡ್

ಪುತ್ತೂರು:ಪುಣಚ ಪ್ರಾಥಮಿಕ ಸೇವಾ ಸಹಕಾರ ಸಂಘವು 2021-22ನೇ ಸಾಲಿನಲ್ಲಿ ರೂ.221.12 ಕೋಟಿಗೂ ಮಿಕ್ಕಿ ವ್ಯವಹಾರ ನಡೆಸಿ ರೂ.1,40,74,958 ನಿವ್ವಳ ಲಾಭ ಗಳಿಸಿದೆ. ಲಾಭಾಂಶದಲ್ಲಿ ಸದಸ್ಯರಿಗೆ ಲಾಭಾಂಶದ ಶೇ.10 ಡಿವಿಡೆಂಡ್ ವಿತರಿಸಲಾಗುವುದು ಎಂದು ಸಂಘದ ಅಧ್ಯಕ್ಷ ಅಮೈ ಜನಾರ್ದನ ಭಟ್ ವಾರ್ಷಿಕ ಮಹಾಸಭೆಯಲ್ಲಿ ಘೋಷಣೆ ಮಾಡಿದರು.


ಮಹಾಸಭೆಯು ಸೆ.10ರಂದು ಸಂಘದ ಸಭಾಭವನದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವರದಿ ವರ್ಷದಲ್ಲಿ ಸಂಘವು ರೂ.10,57,094 ವ್ಯಾಪಾರ ಲಾಭ ಗಳಿಸಿದೆ. ಮುಂದಿನ ದಿನಗಳಲ್ಲಿ ಸಂಘದ ಆಶ್ರಯದಲ್ಲಿ ಪ್ರಧಾನ ಮಂತ್ರಿ ಜನೌಷಧಿ ಕೇಂದ್ರ ಸ್ಥಾಪನೆ, ಅಂಬ್ಯುಲೆನ್ಸ್ ವ್ಯವಸ್ಥೆ, ಕೃಷಿ ಸಲಕರಣೆಗಳನ್ನು ರಿಯಾಯಿತಿ ದರದಲ್ಲಿ ಬಾಡಿಗೆಗೆ ನೀಡುವ ಬಗ್ಗೆ, ಕೃಷಿಸಾಲ ಪಡೆಯುವ ರೈತರಿಗೆ ವಿಮಾ ಸೌಲಭ್ಯ ಒದಗಿಸುವ ಬಗ್ಗೆ ತಿಳಿಸಿದ ಅವರು, ಸಂಘದ ಸದಸ್ಯರ ಆಶೋತ್ತರಗಳಿಗೆ ಸ್ಪಂದಿಸುತ್ತಾ, ಶಿಸ್ತು ಬದ್ಧ ವ್ಯವಹಾರ ನಡೆಸಿದೆ ಎಂದು ಹೇಳಿದರು.

ಅಂಚೆ ಅದೀಕ್ಷಕರಿಗೆ ಮನವಿ:
ಪುಣಚ ಅಂಚೆ ಕಚೇರಿಗೆ ಹೆಚ್ಚುವರಿ ಬಟವಾಡೆ ಸಿಬ್ಬಂದಿ ನೇಮಿಸಲು ಅಂಚೆ ಅಧೀಕ್ಷಕರಿಗೆ ನಿಯೋಗದೊಂದಿಗೆ ಮನವಿ ಸಲ್ಲಿಸಲು ಮಹಾಸಭೆಯಲ್ಲಿ ತೀರ್ಮಾನಿಸಲಾಯಿತು.
ಸನ್ಮಾನ:
ಮಹಾಸಭೆಯಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಮೈ ಮಹಾಲಿಂಗ ನಾಯ್ಕರವರನ್ನು ಸನ್ಮಾನಿಸಲಾಯಿತು. ನಿವೃತ್ತಿಗೊಂಡ ಸಂಘದ ಕಾರ್ಯನಿರ್ವಾಹಕರಾದ ಚಂದಪ್ಪ ನಾಯ್ಕ, ಶಾಖಾ ವ್ಯವಸ್ಥಾಪಕ ಉಮೇಶ್ ಪೂಜಾರಿಯವರನ್ನು ಅಭಿನಂದಿಸಲಾಯಿತು.


ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಸಂತೋಷ್ ಕುಮಾರ್, ನಿರ್ದೇಶಕರಾದ ದೇವಿಪ್ರಸಾದ್ ಕಲ್ಲಾಜೆ, ಉದಯಕಮಾರ್, ಕೃಷ್ಣಪ್ಪ ಪುರುಷ, ರಾಜೀವಿ, ಬಾಲಚಂದ್ರ ಕೆ, ಭಾರತಿ ಜೆ.ಭಟ್, ಜಗದೀಶ್ ಮಾರಮಜಲು, ಗೋವಿಂದ ನಾಯ್ಕ, ತಾರಾನಾಥ ಆಳ್ವ, ರಾಧಾಕೃಷ್ಣ ಪಿ., ಪ್ರವೀಣ್ ಶೆಟ್ಟಿ, ಲೆಕ್ಕಿಗ ಪದ್ಮನಾಭ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ವೀರಪ್ಪ ಮೂಲ್ಯ ವಾರ್ಷಿಕ ಆಯವ್ಯಯ ಮಂಡಿಸಿದರು. ಸಿಬ್ಬಂದಿಗಳಾದ ಕವಿತಾ, ಶಂಕರ, ವಿನಯ, ಕೃಷ್ಣರಾಜ್ ಇನ್ನಿತರರು ಸಹಕರಿಸಿದರು.

LEAVE A REPLY

Please enter your comment!
Please enter your name here