ಕೆಮ್ಮಾಯಿ ಶಾಲೆಯಲ್ಲಿ ಕೋಡಿಂಬಾಡಿ ಕ್ಲಸ್ಟರ್ ಮಟ್ಟದ ಪ್ರತಿಭಾ ಪುರಸ್ಕಾರ ’ಮಕ್ಕಳ ಹಬ್ಬ’

0

ಪುತ್ತೂರು: ಕೆಮ್ಮಾಯಿ ಕೃಷ್ಣನಗರ ಸ.ಉ.ಹಿ.ಪ್ರಾ.ಶಾಲೆಯಲ್ಲಿ ಕೋಡಿಂಬಾಡಿ ಕ್ಲಸ್ಟರ್ ಮಟ್ಟದ ಪ್ರತಿಭಾ ಪುರಸ್ಕಾರ ’ಮಕ್ಕಳ ಹಬ್ಬ 2022-23 ಕಾರ್ಯಕ್ರಮವು ಸೆ.13ರಂದು ಉದ್ಘಾಟನೆಗೊಂಡಿತು.

ಶಾಲಾ ಶಿಕ್ಷಣ ಮತ್ತ ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ, ಸಮೂಹ ಸಂಪನ್ಮೂಲ ಕೇಂದ್ರ ಕೋಡಿಂಬಾಡಿ, ಸ.ಉ.ಹಿ.ಪ್ರಾ.ಶಾಲೆ ಕೆಮ್ಮಾಯಿಯ ಸಹಯೋಗದಲ್ಲಿ ನಡೆದ ’ಮಕ್ಕಳ ಹಬ್ಬ’ ಕಾರ್ಯಕ್ರಮವನ್ನು ನಗರಸಭೆ ಸ್ಥಳೀಯ ಸದಸ್ಯೆ ಲೀಲಾವತಿ ಅವರು ಉದ್ಘಾಟಿಸಿ ಮಾತನಾಡಿ ಕೋವಿಡ್‌ನಿಂದಾಗಿ ಎರಡು ವರ್ಷ ನಡೆಸಲಾಗದ ಕಾರ್ಯಕ್ರಮಕ್ಕೆ ಇವತ್ತು ಮತ್ತೆ ಚಾಲನೆ ದೊರೆತಿದೆ. ಮುಂದಿನ ರಾಜ್ಯಮಟ್ಟದ ಸ್ಪರ್ಧೆಗಳು ನಡೆಯುವಂತಾಗಲಿ ಎಂದರು. ನಗರಸಭಾ ಸದಸ್ಯ ಸುಂದರ ಪೂಜಾರಿ ಬಡಾವು, ಶಿಕ್ಷಣ ಸಂಯೋಜಕ ಹರಿಪ್ರಸಾದ್, ಸಮನ್ವಯಾಧಿಕಾರಿ ನವೀನ್ ವೇಗಸ್ ಅವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಶಾಲಾ ಎಸ್‌ಡಿಎಂಸಿ ಉಪಾಧ್ಯಕ್ಷೆ ಗೀತಾ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮುಖ್ಯಗುರು ಮರಿಯಮ್ಮ ಸ್ವಾಗತಿಸಿದರು. ಸಹ ಶಿಕ್ಷಕಿ ಶೃತಿ ವಂದಿಸಿದರು. ಪ್ರತಿಭಾ ಕೆ ಕಾರ್ಯಕ್ರಮ ನಿರೂಪಿಸಿದರು. ಕ್ಲಸ್ಟರಿನ ಶಿಕ್ಷಕರು ನಿರ್ಣಾಯಕರಾಗಿ ಸಹಕರಿಸಿದರು. ಕೋಡಿಂಬಾಡಿ ಕ್ಲಸ್ಟರ್ ಮುಖ್ಯಶಿಕ್ಷಕರೆಲ್ಲರು, ಎಸ್‌ಡಿಎಂಸಿ ಸದಸ್ಯರೆಲ್ಲರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಸಹಕರಿಸಿದ ಎಸ್‌ಡಿಎಂಸಿ ಸದಸ್ಯರನ್ನು ಮತ್ತು ಅಡುಗೆ ಸಿಬ್ಬಂದಿಗಳನ್ನು ಗೌರವಿಸಲಾಯಿತು.

ಸ್ಪರ್ಧೆಯಲ್ಲಿ 10 ಶಾಲೆಗಳ 300ಕ್ಕೂ ಅಧಿಕ ವಿದ್ಯಾರ್ಥಿಗಳು

ಕೋವಿಡ್ ಬಳಿಕ ಸ್ಪರ್ಧೆಗಳು ಆರಂಭಗೊಂಡಿದೆ. ಈ ಭಾರಿ ಗುಂಪು ಸ್ಪರ್ಧೆಗಳಿಲ್ಲ. ವೈಯುಕ್ತಿಕ ಸ್ಪರ್ಧೆಗಳು ಮಾತ್ರ ಇದೆ. ಕಿರಿಯರಿಗೆ ತಾಲೂಕು ಮಟ್ಟದ ತನಕ, ಹಿರಿಯರಿಗೆ ಜಿಲ್ಲಾ ಮಟ್ಟದ ತನಕ, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ತನಕ ಸ್ಪರ್ಧೆ ನಡೆಯಲಿದೆ. ಕೋಡಿಂಬಾಡಿ ಕ್ಲಸ್ಟರ್ ವ್ಯಾಪ್ತಿಯಲ್ಲಿ 10 ಶಾಲೆಗಳ 300 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ.

ಅಶ್ರಫ್ ಸಮೂಹ ಸಂಪನ್ಮೂಲವ್ಯಕ್ತಿ
ಕೋಡಿಂಬಾಡಿ ಕ್ಲಸ್ಟರ್

LEAVE A REPLY

Please enter your comment!
Please enter your name here