ಬಡಗನ್ನೂರುಃ ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿ ಯಲ್ಲಿ ಕ್ಷೇತ್ರದ ಅಭಿವೃದ್ಧಿಯ ಪ್ರಯುಕ್ತ ಅಷ್ಟಮಂಗಲ ಪ್ರಶ್ನಾಚಿಂತನೆಯು ದೈವಜ್ಞರಾದ ಜೋತಿಷ್ಯ ತಿಲಕಂ ಶಶಿಧರ್ ಮಾಂಗಾಡ್, ರಾಜೇಶ್ ಇರಿಯ ನೇತೃತ್ವದಲ್ಲಿ, ಸೆ.13 ರಂದು ಆರಂಭ ಗೊಂಡಿದೆ. 14, ಮತ್ತು 15ರಂದೂ ಪ್ರಶ್ನಾ ಚಿಂತನೆ ಮುಂದುವರಿಯಲಿದೆ. ಗೆಜ್ಜೆಗಿರಿ ಕ್ಷೇತ್ರದ ಭಕ್ತಾಭಿಮಾನಿಗಳು ಈ ಪ್ರಶ್ನಾಚಿಂತನೆಯಲ್ಲಿ ಭಾಗವಹಿಸ ಬೇಕೆಂದು ಕ್ಷೇತ್ರದ ಆಡಳಿತ ಸಮಿತಿ ವಿನಂತಿಸಿದೆ.ಸೆ.13 ಆರಂಭಗೊಂಡ ಪ್ರಶ್ನಾಚಿಂತನೆಯಲ್ಲಿ ಅಧ್ಯಕ್ಷ ಪೀತಾಂಬರ ಹೆರಾಜೆ, ಗೌರವಾಧ್ಯಕ್ಷ ಜಯಂತ ನಡುಬೈಲ್, ಕ್ಷೇತ್ರದ ಶ್ರೀಧರ ಪೂಜಾರಿ, ಉಪಾಧ್ಯಕ್ಷ ರವಿಪೂಜಾರಿ ಚಿಲಿಂಬಿ, ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್, ಕೋಶಾಽಕಾರಿ ದೀಪಕ್ ಕೋಟ್ಯಾನ್, ನವೀನ್ ಸುವರ್ಣ, ಶೇಖರ್ ಬಂಗೇರ, ರಾಜೇಂದ್ರ ಚಿಲಿಂಬಿ, ನಾರಾಯಣ ಮಚ್ಚಿನ,ವಸಂತ ಅಮೀನ್ ಮುಂತಾದವರು ಉಪಸ್ಥಿತರಿದ್ದರು