ಅಳಿಕೆ: ಬಾವಿಗೆ ಬಿದ್ದ ಯುವತಿಯ ರಕ್ಷಣೆ

0

ವಿಟ್ಲ: ಐವತ್ತು ಅಡಿ ಆಳದ ಪಾಳು ಬಾವಿಗೆ ಯುವತಿಯೊಬ್ಬಳು ಆಕಸ್ಮಿಕವಾಗಿ ಕಾಲುಜಾರಿ ಬಿದ್ದು ಗಂಭೀರ ಗಾಯಗೊಂಡ ಘಟನೆ ಅಳಿಕೆ ಗ್ರಾಮದ ಮೂಡಾಯಿಬೆಟ್ಟು ಎಂಬಲ್ಲಿ ನಡೆದಿದೆ.

ಬಾವಿಯೊಳಗೆ ನರಳಾಡುತ್ತಿದ್ದ ಯುವತಿಯ ನರಳಾಟ ಕೇಳಿದ ಸ್ಥಳೀಯರು ತಕ್ಷಣ ಫ್ರೆಂಡ್ಸ್ ವಿಟ್ಲ ತಂಡದ ಮುರಳೀಧರರವರನ್ನು ಸಂಪರ್ಕಿಸಿದ್ದು, ತಕ್ಷಣ ಸ್ಪಂದಿಸಿದ ಮುರಳೀ ವಿಟ್ಲ ಮತ್ತು ತಂಡದವರು ಯುವತಿಯನ್ನು ಮೇಲಕ್ಕೆತ್ತಿ ರಕ್ಷಿಸಿದ್ದಾರೆ. ಬಳಿಕ ಗಂಭೀರ ಗಾಯಗೊಂಡ ಯುವತಿಯನ್ನು ಮಂಗಳೂರಿನ ದೇರಳಕಟ್ಟೆ ಖಾಸಗಿ ಆಸ್ಪತೆಗೆ ದಾಖಲಿಸಿದ್ದಾರೆ ಎಂದು ಮಾಹಿತಿ ಲಭಿಸಿದೆ‌.

LEAVE A REPLY

Please enter your comment!
Please enter your name here