34-ನೆಕ್ಕಿಲಾಡಿ ಗ್ರಾಮ ಪಂಚಾಯತಿ ಜಮಾಬಂಧಿ ಸಭೆ

0

ಉಪ್ಪಿನಂಗಡಿ: 34-ನೆಕ್ಕಿಲಾಡಿ ಗ್ರಾಮ ಪಂಚಾಯತಿ 2021-22ನೇ ಸಾಲಿನ ಜಮಾಬಂಧಿ ಸಭೆಯು ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಶಾಂತ್ ಎನ್. ಅಧ್ಯಕ್ಷತೆಯಲ್ಲಿ ಸೆ. 14ರಂದು ಜರಗಿತು.

ದ.ಕ. ಜಿಲ್ಲಾ ಪಂಚಾಯಿತಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಪಾಪಬೋವಿ ಜಮಾಬಂಧಿ ಅಧಿಕಾರಿಯಾಗಿ ಲೆಕ್ಕಪತ್ರ ಮತ್ತು ಕಾಮಗಾರಿ ಪರಿಶೀಲನೆ ನಡೆಸಿದರು.

ಸಭೆಯಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸ್ವಪ್ನ, ಸದಸ್ಯರುಗಳಾದ ತುಳಸಿ, ಗೀತಾ, ರತ್ನಾವತಿ, ಹರೀಶ್. ಕೆ., ರಮೇಶ್ ನಾಯ್ಕ್, ಹರೀಶ್ ಡಿ., ವೇದಾವತಿ, ಸುಜಾತ ಆರ್. ರೈ, ವಿಜಯಕುಮಾರ್ ಹಾಗೂ ಗ್ರಾಮಸ್ಥರಾದ ಆಸ್ಕರ್ ಆಲಿ, ಅಬ್ದುಲ್ ರಹಿಮಾನ್, ಬಾಬು ಮುಗೇರ, ಪಾವನ, ಎಂ.ಬಿ.ಕೆ., ಜಮೀಲ, ಎಲ್.ಸಿ.ಆರ್.ಪಿ. ಅಮಿತಾ ಹರೀಶ್, ದೇವಕಿ, ವಸಂತಿ, ಎನ್. ಬಬಿತಾ, ಲವೀನಾ ಮಿನೇಜಸ್ ಉಪಸ್ಥಿತರಿದ್ದರು.

ಗ್ರಾಮ ಪಂಚಾಯಿತಿ ಪ್ರಭಾರ ಪಿಡಿಒ. ಸತೀಶ್ ಬಂಗೇರ ಸ್ವಾಗತಿಸಿದರು. ಸಿಬ್ಬಂದಿಗಳಾದ ವಸಂತಿ ಬಿ, ಸುಶೀಲಾ. ಕೆ. ನಿತಿನ್. ಕೆ. ಶಾರಿಕಾ. ಎನ್., ಚಿತ್ರಾವತಿ, ಯಶೋಧ, ಪ್ರಮೀಳಾ ವಿವಿಧ ಕಾರ‍್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here