ಪುತ್ತೂರು: ವಿವಿಧ ಅವಕಾಶಗಳಿಗೆ ಒಂದೇ ಸೂರಿನಡಿಯಲ್ಲಿ ತರಬೇತಿ ನೀಡುವ ಕೇಂದ್ರ ’ಪ್ರೇರಣಾ’ ಸೆ.18ರಂದು ಬೆಳಿಗ್ಗೆ ಪುತ್ತೂರು ಮುಖ್ಯರಸ್ತೆಯ ಕೆನರಾ ಬ್ಯಾಂಕ್ ಬಳಿಯ ಪ್ರಭು ಬಿಲ್ಡಿಂಗ್‌ನ ಪ್ರಥಮ ಮಹಡಿಯಲ್ಲಿ ಉದ್ಘಾಟನೆಗೊಳ್ಳಲಿದೆ.
ನಾವು ಗ್ರಾಮೀಣ ಪರಿಸರದಲ್ಲಿದವರಿಗೆ ಅವಕಾಶಗಳು ಕಡಿಮೆ, ಪಿಯುಸಿ ವ್ಯಾಸಂಗ ಮುಗಿದ ಬಳಿಕ ಮುಂದೇನು ? ಸರಕಾರಿ ಉದ್ಯೋಗಕ್ಕೆ ಯಾವ ರೀತಿ ಅರ್ಹತೆಯ ಬೇಕು, ಇಂಗ್ಲಿಷ್ ಮಾತನಾಡುವ ಸಮಸ್ಯೆ, ಉನ್ನತ ಶಿಕ್ಷಣ ಉತ್ತಮ ಶಿಷ್ಯ ವೇತನ ಹೇಗೆ ಪಡೆಯಬಹುದು, ಆಕರ್ಷಕವಾಗಿ ಮಾತನಾಡುವ ಕಲೆ ಹೇಗೆ ಕಲಿಯುವುದು, ಕಾರ್ಯಕ್ರಮ ನಿರೂಪಣೆ ಮಾಡುವ ಸೀಕ್ರೆಟ್ ಏನು ಎಂಬ ಚಿಂತನೆಗಳಿಗೆ ಸೂಕ್ತವಾದ ಒಂದೇ ಸೂಡಿನಡಿಯಲ್ಲಿ ತರಬೇತಿ ನೀಡುವ ನೂತನ ಸಂಸ್ಥೆ ಆಗಿರುವ ಪ್ರೇರಣಾವನ್ನು ಸುಳ್ಯ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಇದರ ಆಡಳಿತ ನಿರ್ದೇಶಕ ಡಾ. ರೇಣುಕ ಪ್ರಸಾದ್ ಕೆ.ವಿ ಅವರು ಉದ್ಘಾಟಿಸಲಿದ್ದಾರೆ. ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ಅಧ್ಯಕ್ಷತೆ ವಹಿಸಲಿದ್ದಾರೆ. ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಕೆ.ಸೀತಾರಾಮ ರೈ ಸವಣೂರು, ಬೆಂಗಳೂರಿನ ಉದ್ಯಮಿ ಪ್ರದೀಪ್ ಆರ್ ಗೌಡ, ಅಕ್ಷಯ ಕಾಲೇಜು ಸಂಚಾಲಕ ಜಯಂತ್ ನಡುಬೈಲು, ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.