ಕೊಳ್ತಿಗೆ ಹಾ.ಉ.ಸ.ಸಂಘದ ವಾರ್ಷಿಕ ಮಹಾಸಭೆ

0

  • ರೂ.2,27,767.34 ರೂ. ಲಾಭ, ಶೆ.15 ಡಿವಿಡೆಂಡ್, 50 ಪೃಸೆ ಬೋನಸ್

ಪುತ್ತೂರು: ಕೊಳ್ತಿಗೆ ಹಾಲು ಉತ್ಪಾದಕರ ಸಹಕಾರಿ ಸಂಘದ 2021-2022ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ ಸಂಘದ ಆವರಣದಲ್ಲಿ ಜರಗಿತು. ಸಂಘದ ಅಧ್ಯಕ್ಷ ಶ್ರೀಧರ ಪೂಜಾರಿ ಚಾಳೆಪಡ್ಪುರವರು ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಘವು 2021-22ನೇ ಸಾಲಿನಲ್ಲಿ 2,27,767.34 ರೂ. ಲಾಭ ಗಳಿಸಿದೆ. ಲಾಭದಲ್ಲಿ ಶೆ.15 ಡಿವಿಡೆಂಡ್ ಹಾಗೂ ಹಾಲು ಉತ್ಪಾದಕರಿಗೆ ಪ್ರತೀ ಲೀ.ಹಾಲಿಗೆ 50 ಪೃಸೆ ಬೋನಸ್ ನೀಡಲಾಗುವುದು ಎಂದು ತಿಳಿಸಿದರು.

ಬಹುಮಾನ : ಅತೀ ಹೆಚ್ಚು ಹಾಲು ಪೂರೈಕೆ ಮಾಡಿದ ವಾಡ್ಯಪ್ಪ ಗೌಡ ಚಾಮೆತಕುಮೇರು, (ಪ್ರಥಮ) ಚಂದ್ರಾವತಿ ಕುದ್ಕುಳಿ (ದ್ವಿತೀಯ) ಹಾಗೂ ಸಂಧ್ಯಾ ಸಿ. ಚಾಮೆತಕುಮೇರು (ತೃತೀಯ)ರವರಿಗೆ ಬಹುಮಾನ ವಿತರಿಸಲಾಯಿತು. 2021-22 ನೇ ಸಾಲಿನಲ್ಲಿ ಹಾಲು ಹಾಕಿದ ಎಲ್ಲಾ ಸದಸ್ಯರಿಗೆ ಪ್ರೋತ್ಸಾಹಕ ಬಹುಮಾನವನ್ನು ನೀಡಿ ಗೌರವಿಸಲಾಯಿತು.

ಸನ್ಮಾನ : 75ನೇ ವರ್ಷದ ಹುಟ್ಟುಹಬ್ಬ ಆಚರಿಸುತ್ತಿರುವ ಸಂಘದ ಸ್ಥಾಪಕ ಅಧ್ಯಕ್ಷ ಹಾಗೂ ದ.ಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಮಾಜಿ ನಿರ್ದೇಶಕ ಕೆ.ಆರ್.ಲಕ್ಷ್ಮಣ ಗೌಡ ಕುಂಟಿಕಾನರವರನ್ನು ಕೊಳ್ತಿಗೆ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ವಸಂತಕುಮಾರ್ ರೈ ಕೆ.ರವರು ಸನ್ಮಾನಿಸಿದರು. ಸ್ಥಾಪಕ ನಿರ್ದೇಶಕರದ ಕೆ. ಸೀತಾರಾಮ ಅಮಳ ಸನ್ಮಾನಿತರ ಪರಿಚಯ ಮಾಡಿದರು. ಕೊಳ್ತಿಗೆ ಪಶು ಸಂಗೋಪನೆ ಇಲಾಖೆಯಿಂದ ಪದೋನತ್ತಿ ಗೊಂಡು ವರ್ಗಾವಣೆ ಹೊಂದಿದ ಡಾ.ಪುನಿತ್‌ರವರನ್ನು ಸನ್ಮಾನಿಸಲಾಯಿತು.

ದ.ಕ ಹಾಲು ಒಕ್ಕೂಟದ ಸುಳ್ಯ ವಿಭಾಗದ ವ್ಯೆದ್ಯಾಧಿಕಾರಿ ಡಾ.ಪೂಜಾ, ಪುತ್ತೂರು ವಿಭಾಗದ ವಿಸ್ತರಣಾಧಿಕಾರಿ ಕೆ.ನಾಗೇಶ್, ಪಶು ಇಲಾಖೆ ವ್ಯೆದ್ಯಾಧಿಕಾರಿ ಡಾ|| ಪುನಿತ್, ಉಪಾಧ್ಯಾಕ್ಷ ಗಣಪತಿ ಭಟ್ ಎಸ್., ನಿರ್ದೇಶಕರಾದ ಡಿ.ವಿಶ್ವಾನಾಥ ಶೆಟ್ಟಿ, ಬೆಳ್ಯಪ್ಪ ಗೌಡ, ಕೆ.ಗಣಪಯ್ಯ ನಾಯ್ಕ, ತಿರುಮಲೇಶ್ವರ ಗೌಡ, ಪ್ರವೀಣ ಪೂಜಾರಿ, ಕೇಶವ ಗೌಡ, ಸುಬ್ರಹ್ಮಣ್ಯ ಗೌಡ ಸಿ.ಆರ್, ಪೂರ್ಣಿಮಾ, ನಳಿನಾಕ್ಷಿ, ಸಂಘದ ಸ್ಥಾಪಕಾಧ್ಯಕ್ಷ ಕೆ.ಆರ್.ಲಕ್ಷ್ಮಣ ಗೌಡ ಹಾಗೂ ಮಾಜಿ ಅಧ್ಯಕ್ಷರುಗಳು, ನಿರ್ದೆಶಕರು ಸೇರಿದಂತೆ ಸಂಘದ ಸದಸ್ಯರು ಉಪಸ್ಥಿತರಿದ್ದರು.

ಸಂಘದ ಸಹಾಯಕಿ ಸುಮಾ ಪ್ರಾರ್ಥಿಸಿದರು. ಉಪಾಧ್ಯಕ್ಷ ಗಣಪತಿ ಭಟ್ ಸ್ವಾಗತಿಸಿದರು. ಕಾರ್ಯದರ್ಶಿ ಹರ್ಷಿತ್ ಕೆ. ವಾರ್ಷಿಕ ವರದಿ ವಾಚಿಸಿದರು. ನಿರ್ದೆಶಕಿ ನಳಿನಾಕ್ಷಿ ವಂದಿಸಿದರು. ಪರೀಕ್ಷಕಿ ವಿಜಯಕುಮಾರಿ, ಸಹಾಯಕಿ ಸವಿತಾ ಹಾಗೂ, ಂ.I ದುರ್ಗಾಪ್ರಸಾದ್ ಭಟ್ ಸಹಕರಿಸಿದರು.

LEAVE A REPLY

Please enter your comment!
Please enter your name here