ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಶ್ರೀ ವಿಶ್ವಕರ್ಮ ಜಯಂತಿ ದಿನಾಚರಣೆ

0

ಭಾರತ ಜಗದ್ಗುರು ಆಗುವಲ್ಲಿ ಪರಂಪರೆ ಉದ್ದೀಪನಗೊಳ್ಳಬೇಕು – ಸಂಜೀವ ಮಠಂದೂರು

ಪುತ್ತೂರು: ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಶ್ರೀ ವಿಶ್ವಕರ್ಮ ಜಯಂತಿ ದಿನಾಚರಣೆ ಸೆ.17 ರಂದು ಪುತ್ತೂರು ತಾಲೂಕು ಆಡಳಿತ ಸೌಧದಲ್ಲಿರು ತಹಸೀಲ್ದಾರ್ ಸಭಾಂಗಣದಲ್ಲಿ ನಡೆಯಿತು. ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷ ಸಹಾಯಕ ಕಮೀಷನರ್ ಗಿರೀಶ್‌ನಂದನ್ ಅವರು ವಿಶ್ವಕರ್ಮ ದೇವರ ಭಾವಚತ್ರದ ಎದುರು ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ಭಾರತ ಜಗದ್ಗುರು ಆಗುವಲ್ಲಿ ಪರಂಪರೆ ಉದ್ದೀಪನಗೊಳ್ಳಬೇಕು

ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ಭಾರತ ಜಗತ್ತಿಗೆ ಆಧ್ಯಾತ್ಮಿಕತೆಯನ್ನು ಕೊಟ್ಟಂತಹ ದೇಶ. ಜಗತ್ತು ಸಂಸ್ಕೃತಿ ಕಾಣುವುದಕ್ಕೂ ಮುಂಚೆ ಜಗತ್ತಿಗೆ ಸಂಸ್ಕೃತಿಯನ್ನು ಕೊಟ್ಟದ್ದು ಭಾರತ. ಸಮಾಜಕ್ಕೆ ಸಂದೇಶ ಕೊಡುವಲ್ಲಿ ಆಚರಣೆಗಳು ಮುಖ್ಯ. ಸಾವಿರಾರು ವರ್ಷಗಳ ಹಿಂದೆ ದೇವಸ್ಥಾನ, ಶಿಲ್ಪಕಲೆ, ಮನೆ, ಕಟ್ಟಡ ಹೇಗಿರಬೇಕೆಂದು ಚಿಂತನೆ ಯೋಚನೆ ಮಾಡಿದವರು ವಿಶ್ವಕರ್ಮ. ಈ ನಿಟ್ಟಿನಲ್ಲಿ ಆ ಶ್ರಮ ಜೀವಿಗಳ ಬದುಕು ಹೇಗಿದೆ ಎಂಬುದನ್ನು ಇವತ್ತಿನ ಪೀಳಿಗೆ ತಿಳಿದು ಕೊಳ್ಳಬೇಕು. ಯಾವುದೋ ಒಂದು ಧರ್ಮ, ಜಾತಿಗೆ ಒಳಪಡದೆ ಇಡೀ ಸಮಾಜದ ಒಳಿತಿಗಾಗಿ ವಿಶ್ವಕರ್ಮ ದಿನಾಚರಣೆ ಮಹತ್ವ ಬೀರುತ್ತದೆ. ಭಾರತ ಜಗದ್ಗುರು ಆಗಬೇಕಾದರೆ ಪರಂಪರೆ ಉದ್ದೀಪನವಾಗಬೇಕು ಎಂದರು.

ವಿಶ್ವಕ್ಕೆ ವಿಶ್ವಕರ್ಮರ ಕೊಡುಗೆ ಅಪಾರ:

ಕಾರ್ಯಕ್ರಮ ಉದ್ಘಾಟಿಸಿದ ಸಹಾಯಕ ಕಮೀಷನರ್ ಗಿರೀಶ್‌ನಂದನ್ ಅವರು ಮಾತನಾಡಿ ವಿಶ್ವಕ್ಕೆ ವಿಶ್ವಕರ್ಮ ಸಮುದಾಯದ ಕೊಡುಗೆ ಅಪಾರ. ವಿಶ್ವಕರ್ಮ ವಿಶ್ವದ ಮೊದಲ ವಾಸ್ತುಶಿಲ್ಪಿ ಮತ್ತು ಎಂಜಿನಿಯರ್. ಈ ಸಮಾಜ ಅತ್ಯಂತ ಶ್ರಮಿಕ ಹಾಗೂ ಸಂಸ್ಕಾರ ಇರುವ ವರ್ಗವಾಗಿದೆ ಎಂದರು.

ವಿಶ್ವಕರ್ಮ ದೇವರಿಂದ ಬ್ರಹ್ಮಾಂಡ ಸೃಷ್ಟಿಯಾಯಿತು:

ಮುಕ್ರಂಪಾಡಿ ಮಹಿಳಾ ಪ.ಪೂ ಕಾಲೇಜಿನ ಉಪನ್ಯಾಸಕ ಭೋಜರಾಜ್ ಆಚಾರ್ಯ ಉಪನ್ಯಾಸ ನೀಡಿದರು. ಇಡೀ ಬ್ರಹ್ಮಾಂಡವೇ ವಿಶ್ವಕರ್ಮ ದೇವರಿಂದ ಸೃಷ್ಟಿಯಾಯಿತು. ಇವತ್ತು ನಮಗೆ ಕಾಣುವ ಅದ್ಭುತ ಕೆತ್ತೆನೆಯ ಮೂಲಕ ಐತಿಹಾಸಿಕ ಸ್ಮಾರಕ, ದೇವಸ್ಥಾನಗಳನ್ನು ನಿರ್ಮಿಸಿದ ಕೀರ್ತಿ ವಿಶ್ವಕರ್ಮದ ಶಿಲ್ಪಿಗಳಿಗೆ ಸಲ್ಲುತ್ತದೆ ಎಂದರು.

ತಹಸೀಲ್ದಾರ್ ನಿಸರ್ಗಪ್ರಿಯ, ನಗರಸಭೆ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗ್ರೇಡ್ 2 ತಹಸೀಲ್ದಾರ್ ಲೋಕೇಶ್, ಕಂದಾಯ ನಿರೀಕ್ಷಕ ಗೋಪಾಲ್, ರಾಜಶೇಖರ್, ಸಮಾಜ ಕಲ್ಯಾಣ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಕೃಷ್ಣ ಅತಿಥಿಗಳನ್ನು ಗೌರವಿಸಿದರು. ತಾಲೂಕು ಕಚೇರಿಯ ದಯಾನಂದ್ ಸ್ವಾಗತಿಸಿದರು. ಉಪ ತಹಸೀಲ್ದಾರ್ ಸುಲೋಚನಾ ಕಾರ್ಯಕ್ರಮ ನಿರೂಪಿಸಿದರು.

ವಿಶ್ವಕರ್ಮ ಗುರುಸೇವಾ ಪರಿಷತ್ ಪುತ್ತೂರು ವಲಯದ ಅಧ್ಯಕ್ಷ ಪುರುಷೋತ್ತಮ ಆಚಾರ್ಯ, ದ.ಕ.ಜಿಲ್ಲಾ ವಿಶ್ವಕರ್ಮ ಹಿತರಕ್ಷಣಾ ಸಂಘದ ಅಧ್ಯಕ್ಷ ಜನಾರ್ದನ ಆಚಾರ್ಯ ಕಾಣಿಯೂರು, ವಿಶ್ವ ಬ್ರಾಹ್ಮಣ ಸಂಘದ ಅಧ್ಯಕ್ಷ ಎಸ್.ನ್. ಜಗದೀಶ್, ವಿಶ್ವಕರ್ಮ ಸಹಕಾರ ಬ್ಯಾಂಕ್ ನಿರ್ದೆಶಕ ನಲ್ಕ ಗೋಪಾಲಕೃಷ್ಣ ಆಚಾರ್ಯ, ಬೀರಮಲೆ ದೇವದಾಸ್ ಆಚಾರ್ಯ, ಹರೀಶ್ ಅಚಾರ್ಯ ಉರ್ಲಾಂಡಿ, ಹರೀಶ್ ಅಚಾರ್ಯ ಬೀರಮಲೆ, ನಗರಸಭೆ ಸದಸ್ಯೆ ಇಂದಿರಾ ಪುರುಷೋತ್ತಮ ಆಚಾರ್ಯ, ಉಷಾ ಸದಾನಂದ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here