- ತಾಲೂಕು ಮಟ್ಟದ ಅಂಬೇಡ್ಕರ್ ನಿರ್ಮಾಣಕ್ಕೆ ಮೊದಲು ಎಸ್ಟಿಮೇಟ್ ಮಾಡಿ – ತಹಸೀಲ್ದಾರ್ ನಿಸರ್ಗಪ್ರಿಯ
ಪುತ್ತೂರು: ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದವರ ಹಿತರಕ್ಷಣೆ, ಭದ್ರತೆ ಕುರಿತ ಸಭೆಯು ಸೆ.19ರಂದು ಪುತ್ತೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ತಹಸೀಲ್ದಾರ್ ನಿಸರ್ಗಪ್ರಿಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯ ಆರಂಭದಲ್ಲಿ ತಾಲೂಕು ಅಂಬೇಡ್ಕರ್ ಭವನಕ್ಕೆ ಸಂಬಂಧಿಸಿ ಬನ್ನೂರಿನಲ್ಲಿ ಗಡಿ ಗುರುತು ಆಗಿ ಮುಂದೆ ಅನುದಾನಕ್ಕೆ ಕಾಯುವುದಲ್ಲ. ಮೊದಲು ಎಸ್ಟಿಮೇಟ್ ಮಾಡಿಸಿ. ಆಗ ಎಷ್ಟು ಅನುದಾನ ಬರುತ್ತದೆ ಎಂಬುದನ್ನು ನಿಗದಿ ಪಡಿಸಿ ಅನುದಾನ ಕೇಳಬಹುದು ಎಂದು ತಹಸೀಲ್ದಾರ್ ನಿಸರ್ಗಪ್ರಿಯ ಅವರು ತಿಳಿಸಿದರು.
ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ ಹೆಚ್ , ನಗರಸಭೆ ಪೌರಾಯುಕ್ತ ಮಧು ಎಸ್ ಮನೋಹರ್, ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ, ಸಮಾಜಕಲ್ಯಾಣ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಕೃಷ್ಣ ಸಮಿತಿ ಪಾಲನಾ ವರದಿ ಮಂಡಿಸಿದರು. ಜಿ.ಪಂ ಮಾಜಿ ಅಧ್ಯಕ್ಷ ಸೋಮನಾಥ್, ಮುದ್ದ, ನಗರಸಭೆ ಮಾಜಿ ಸದಸ್ಯ ಮುಕೇಶ್ ಕೆಮ್ಮಿಂಜೆ, ಉದಯ ಕುಮಾರ್, ಕೃಷ್ಣ ನಿಡ್ಪಳ್ಳಿ ವೇದಿಕೆಯ ಅಧಿಕಾರಿಗಳನ್ನು ಗೌರವಿಸಿದರು.