ವಿಟ್ಲ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಬಂಟ್ವಾಳ, ಕೆದಿಲ ಗ್ರಾಮ ಪಂಚಾಯತ್ ಹಾಗೂ ಕೆದಿಲ ವ್ಯವಸಾಯ ಸೇವಾ ಸಹಕಾರಿ ಸಂಘ ಇದರ ಸಹಯೋಗದಲ್ಲಿ ಗ್ರಾಮೀಣ ಕ್ರೀಡಾಕೂಟದ ಪ್ರಯುಕ್ತ ಕೆದಿಲ ಗ್ರಾಮ ಪಂಚಾಯತ್ ಮಟ್ಟದ ಪುರುಷರ ಮುಕ್ತ ಕಬಡ್ಡಿ ಹಾಗೂ ಮಹಿಳೆಯರ ಖೋ ಖೋ ಪಂದ್ಯಕೂಟವು ಕೆದಿಲ ಕುಕ್ಕಾಜೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಗ್ರಾ.ಪಂ. ಅಧ್ಯಕ್ಷರಾದ ಜಯಂತಿ ಧನಂಜಯ ಶೆಟ್ಟಿರವರು ಕ್ರೀಡಾಕೂಟವನ್ನು ಉದ್ಘಾಟಿಸಿದರು. ಗ್ರಾ.ಪಂ. ಉಪಾಧ್ಯಕ್ಷರಾದ ಉಮೇಶ್ ಪೂಜಾರಿ ಮುರುವ, ಸದಸ್ಯರುಗಳಾದ ಸುಲೈಮಾನ್ ಸರೋಲಿ, ಶ್ಯಾಮ ಪ್ರಸಾದ್ ಭಟ್, ಹರೀಶ್ ವಾಲ್ತಾಜೆ, ವನಿತಾ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಭುವನೇಂದ್ರ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
ಸಾಯಂಕಾಲ ನಡೆದ ಸಮಾರೋಪ ಸಮಾರಂಭದಲ್ಲಿ ಅತಿಥಿಗಳಾಗಿ ಪದ್ಮನಾಭ ಭಟ್, ಇಬ್ರಾಹಿಂ ಬಾತೀಷ ಬಾಯಬೆ, ಮುರಳೀಧರ ಭಟ್ ಮುದ್ರಾಜೆ, ಗ್ರಾ.ಪಂ. ಅಧ್ಯಕ್ಷರಾದ ಜಯಂತಿ ಧನಂಜಯ ಶೆಟ್ಟಿ, ಗ್ರಾ.ಪಂ. ಉಪಾಧ್ಯಕ್ಷರಾದ ಉಮೇಶ್ ಪೂಜಾರಿ ಮುರುವ ಹಾಗೂ ಗ್ರಾ.ಪಂ. ಸದಸ್ಯರುಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಭುವನೇಂದ್ರ ಕುಮಾರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು, ಸಿಬಂದಿಗಳು ಸಹಕರಿಸಿದರು. ಪಂದ್ಯಕೂಟದ ತೀರ್ಪುಗಾರರಾಗಿ ಅನ್ಸಾರ್, ಪ್ರವೀಣ್ ಗಾಂಧಿನಗರರವರು ಆಗಮಿಸಿದ್ದರು. ಹೇಮಂತ್ ಕುಲಾಲ್ ಹಾಗೂ ಲೂಯಿಸ್ ವಿನ್ಸೆಂಟ್ ಪಾಯ್ಸ್ ಸಹಕರಿಸಿದರು.
ಖೋ ಖೋ ಪಂದ್ಯಾಟದಲ್ಲಿ ಶ್ರೀ ಕೃಷ್ಣ ಕರಿಮಜಲು ಪ್ರಥಮ ಹಾಗೂ ಶ್ರೀದೇವಿ ಗಾಂಧಿನಗರ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು.
ಪುರುಷರ ಮುಕ್ತ ಕಬಡ್ಡಿ ಪಂದ್ಯಾಟದಲ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿಯ 8 ತಂಡಗಳು ಭಾಗವಹಿಸಿದ್ದು, ಫ್ರೆಂಡ್ಸ್ ಕೆದಿಲ ಪ್ರಥಮ ಹಾಗೂ ಇಂಡಿಯನ್ ಸ್ಪೋರ್ಟ್ಸ್ ಕ್ಲಬ್ ಪಾಟ್ರಕೋಡಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು.