SLV Colours ಬ್ಯಾನರ್‌ ನಿರ್ಮಾಣದ ‘ಅಪರಾಧಿ ನಾನಲ್ಲ’ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ

0

ಪುತ್ತೂರು: SLV COLOURS ಬ್ಯಾನರ್‌ನಡಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ‘ಅಪರಾಧಿ ನಾನಲ್ಲ’ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮೈಸೂರಿನ ಚಾಮುಂಡಿಬೆಟ್ಟದಲ್ಲಿರುವ ಚಾಮುಂಡೇಶ್ವರಿ ದೇವಿಯ ಸನ್ನಿಧಾನದಲ್ಲಿ ನಡೆಯಿತು.


ಮುತಾಲಮಡ ಸ್ನೇಹ ಚಾರಿಟೇಬಲ್ ಟ್ರಸ್ಟ್ ಮುಖ್ಯಸ್ಥ ಸುನಿಲ್ ದಾಸ್ ಸ್ವಾಮೀಜಿ ಪೋಸ್ಟರ್ ಬಿಡುಗಡೆಗೊಳಿಸಿ ಶುಭ ಹಾರೈಸಿದರು.

ಪ್ರಶಾಂತ್ ಆಳ್ವ ಕಲ್ಲಡ್ಕರವರು ನಿರ್ದೇಶಿಸಿ, ಚಿತ್ರಕಥೆ ಬರೆದಿರುವ ಈ ಸಿನಿಮಾ ದಿವಾಕರ ದಾಸ್ ನೇರ್ಲಾಜೆ, ಅಜಿತ್ ಚೌಟ ದೇವಸ್ಯ, ಎಸ್. ಕೊಟ್ಟಾರಿ, ಜಿ ಶೆಟ್ಟಿ, ಪ್ರಶಾಂತ್ ಶೆಟ್ಟಿ ಮತ್ತು ವಿನೋದ್ ಶೆಟ್ಟಿರವರ ನಿರ್ಮಾಣದಲ್ಲಿ ಮೂಡಿ ಬಂದಿದೆ. ಸಂತೋಷ್ ಶೆಟ್ಟಿ ಕುಂಬ್ಳೆ ಹಾಗೂ ರಾಮ್‌ದಾಸ್ ಶೆಟ್ಟಿ ವಿಟ್ಲರವರ ಕಾರ್ಯಕಾರಿ ನಿರ್ಮಾಣದಲ್ಲಿ ಮೂಡಿಬಂದಿರುವ ಈ ಸಿನಿಮಾಕ್ಕೆ ಮಣಿ ಕಾರ್ತಿಕೇಯ ಸಂಭಾಷಣೆ ಬರೆದು ಸಹ ನಿರ್ದೇಶನ ಮಾಡಿದ್ದಾರೆ.‌ ಸಂದೀಪ್ ಬೆದ್ರರವರೂ ಸಹನಿರ್ದೇಶನದಲ್ಲಿ ಕೈ ಜೋಡಿಸಿದ್ದಾರೆ.

ವೈ. ಬಿ.ಆರ್. ಮನುರವರ ಕ್ಯಾಮೆರಾ ಕೈಚಳಕದಲ್ಲಿ ಸಿನಿಮಾ ಮೂಡಿಬಂದಿದ್ದು, ಸುಜಿತ್ ನಾಯಕ್ ಅವರ ಸಂಕಲನದಲ್ಲಿ ಚಿತ್ರ ತೆರೆ ಕಾಣಲಿದೆ. ಶಿನೋಯ್ ಜೋಸೆಫ್, ಸಂದೀಪ್ ಇವರ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ‌ ಸಿನಿಮಾ ಕರಾವಳಿ ಸೇರಿದಂತೆ ಸುತ್ತಮುತ್ತಲಿನ ಹಲವು ಪರಿಸರದಲ್ಲಿ ಚಿತ್ರೀಕರಣಗೊಂಡಿದೆ.‌ಕೋಸ್ಟಲ್‌ವುಡ್‌ನ ಆಕ್ಷನ್ ಕಿಂಗ್ ಅರ್ಜುನ್ ಕಾಪಿಕಾಡ್, ರಂಗಭೂಮಿ, ಸಿನಿಮಾ ಹಾಸ್ಯ ನಟ ಕುಸಲ್ದರಸೆ ನವೀನ್ ಡಿ. ಪಡೀಲ್, ಅನೂಪ್ ಸಾಗರ್, ಪ್ರಮೋದ್ ಶೆಟ್ಟಿ, ದಿನೇಶ್ ಮಂಗಳೂರು, ನೀತು ಶೆಟ್ಟಿ, ಜ್ಯೋತಿ ರೈ, ಅಮೃತಾ ಮೂರ್ತಿ, ತಿಮ್ಮಪ್ಪ ಕುಲಾಲ್, ಅರ್ಜುನ್ ಕಜೆ, ಪ್ರತೀಕ್ ಶೆಟ್ಟಿ ಹಾಗೂ ಹೊಸ ಪರಿಚಯವಾಗಿ ಸ್ರುಶಾ ಸಾಮಾನಿ ಇವರು ತಾರಾಗಣದಲ್ಲಿ ಕಾಣಿಸಿಕೊಳ್ಳಲಿದ್ದು, ಹಲವು ಹೊಸ ಕಲಾವಿದರು ಈ ಚಿತ್ರದಲ್ಲಿ ಮಿಂಚಲಿದ್ದಾರೆ.

ಪೋಸ್ಟರ್ ಬಿಡುಗಡೆ ಕಾರ್ಯಕ್ರಮದಲ್ಲಿ ಸುಧಾ ದೇವಿ, ಸಂತೋಷ್ ಕುಮಾರ್ ಹಾಗೂ ಚಾಮುಂಡೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ದೇವಿಪ್ರಸಾದ್ ಪಾಲ್ಗೊಂಡಿದ್ದರು. ಎಸ್. ಎಲ್. ವಿ. ಸಂಸ್ಥೆಯ ಚೇತನ್, ಮಂಜುನಾಥ್ ಮತ್ತು ಗಿರೀಶ್ ಉಪಸ್ಥಿತರಿದ್ದರು.
ನವರಾತ್ರಿಯ ಮೊದಲ ದಿನ ಬಿಡುಗಡೆಗೊಂಡ ‘ಅಪರಾಧಿ ನಾನಲ್ಲ’ ಸಿನಿಮಾದ ಫಸ್ಟ್ಲುಕ್ ಪೋಸ್ಟರ್ ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗುತ್ತಿದೆ.

LEAVE A REPLY

Please enter your comment!
Please enter your name here