ರಾಮಕುಂಜ ಕಿಂಡರ್ ಗಾರ್ಟನ್‌ನಲ್ಲಿ ’ಗ್ರಾಂಡ್ ಪ್ರೇರೆಂಟ್ಸ್ ಡೇ’

0

ರಾಮಕುಂಜ: ಶ್ರೀ ರಾಮಕುಂಜೇಶ್ವರ ಕಿಂಡರ್‌ಗಾರ್ಟನ್‌ನಲ್ಲಿ ಸೆ.24ರಂದು ಗ್ರಾಂಡ್ ಪೇರೆಂಟ್ಸ್ ಡೇ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ತಮ್ಮ ಮೊಮ್ಮಕ್ಕಳೊಂದಿಗೆ ಅಜ್ಜ-ಅಜ್ಜಿಯಂದಿರು ಭಾಗವಹಿಸಿ ಸಂಭ್ರಮಿಸಿದರು. ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈಯವರು ಮಾತನಾಡಿ, ಹಿರಿಯರ ಮಾರ್ಗದರ್ಶನ ಮಕ್ಕಳ ಜೀವನದಲ್ಲಿ ಅತೀ ಮುಖ್ಯವಾಗಿದೆ ಎಂದರು. ಮುಖ್ಯ ಅತಿಥಿಗಳಾಗಿದ್ದ ಮುರಾರಿ ರಾವ್ ರಾಮಕುಂಜ, ವೆಂಕಟಲಕ್ಷ್ಮಿ, ಸಂಸ್ಥೆಯ ಆಡಳಿತಾಧಿಕಾರಿ ಆನಂದ ಎಸ್.ಟಿ., ತಾಂತ್ರಿಕ ಸಲಹೆಗಾರ ಜಯೇಂದ್ರ, ಪ್ರೌಢಶಾಲಾ ವಿಭಾಗದ ಮುಖ್ಯಗುರು ಗಾಯತ್ರಿ, ಪ್ರಾಥಮಿಕ ಶಾಲಾ ವಿಭಾಗದ ಮುಖ್ಯಗುರು ಲೋಹಿತ ಎ., ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಕ್ಷಕರು, ಸಿಬ್ಬಂದಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here