ರಾಜ್ಯ ಮಟ್ಟದ ಚೆಸ್‌ ಪಂದ್ಯಾಟ: ವಿವೇಕಾನಂದ ಪದವಿಪೂರ್ವ ಕಾಲೇಜಿನ ದೀಪ್ತಿಲಕ್ಷ್ಮಿ ದ್ವಿತೀಯ

0

ಪುತ್ತೂರು: ಮೈಸೂರು ದಸರಾ ಮಹೋತ್ಸವದ ಪ್ರಯುಕ್ತ ಆಯೋಜಿಸಲಾದ ರಾಜ್ಯ ದಸರಾ ಕ್ರೀಡಾಕೂಟದ ಚೆಸ್ ಪಂದ್ಯಾಟದಲ್ಲಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ  ವಿಭಾಗದ ದೀಪ್ತಿ ಲಕ್ಷ್ಮಿ ಕೆ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಇವರು ಬಲ್ನಾಡು ಗ್ರಾಮದ ಬೆಳಿಯೂರುಕಟ್ಟೆಯ ಶಂಕರ ಪ್ರಸಾದ್ ಕೆ ಮತ್ತು ಉಷಾ ದಂಪತಿ ಪುತ್ರಿ. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್, ಡಾ| ಜ್ಯೋತಿ ಮತ್ತು ಯತೀಶ್‌ ರವರ ನೇತೃತ್ವದಲ್ಲಿ ಇವರು ತರಬೇತಿಯನ್ನು ಪಡೆದಿರುತ್ತಾರೆ. ವಿದ್ಯಾರ್ಥಿನಿಯ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕ ಮತ್ತುಅಧ್ಯಾಪಕೇತರ ವೃಂದ ಅಭಿನಂದಿಸಿದ್ದಾರೆ.

LEAVE A REPLY

Please enter your comment!
Please enter your name here